ಬೆಂಗಳೂರು: ನಿನ್ನೆ ( ಮೇ 22 ) ಕಿರುತೆರೆ ನಟಿಯೊಬ್ಬರು ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪವನ್ನು ಮಾಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಈ ದೂರಿನ ಮೇರೆಗೆ ಪೊಲೀಸರು ಮಡೆನೂರು ಮನುವನ್ನು ಬಂಧಿಸಿದ್ದು, ವಿಚಾರಣೆ ನಡೆಸಿ ಇಂದು ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯಲಿದ್ದಾರೆ.
ತನಗೆ ಕುಡಿಸಿ ಅತ್ಯಾಚಾರ ಮಾಡಿ, ಖಾಸಗಿ ವಿಡಿಯೊಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದ ಸಂತ್ರಸ್ತೆ ಇದೀಗ ಮತ್ತೋರ್ವ ಕಾಮಿಡಿ ಕಿಲಾಡಿ ಅಪ್ಪಣ್ಣ ರಾಮದುರ್ಗ ವಿರುದ್ಧ ಸಹ ಕಿರುಕುಳದ ಆರೋಪ ಮಾಡಿದ್ದಾರೆ.
ಸಂತ್ರಸ್ತೆಯ ಆಡಿಯೊವೊಂದು ವೈರಲ್ ಆಗಿದ್ದು, ಅಪ್ಪಣ್ಣ ರಾಮದುರ್ಗ ತನಗೆ ಸಾಕಷ್ಟು ಹಿಂಸೆ ಕೊಡುತ್ತಾ ಬಂದಿದ್ದಾನೆ ಎಂದು ಆರೋಪಿಸಿದ್ದಾರೆ. ಶೋಗಳಿಗೆ ತನ್ನನ್ನು ಬಲವಂತವಾಗಿ ಕರೆಸಿ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ, ಶೋಗಳಿಗೆ ಬರುವಂತೆ ಹಿಂಸೆ ಕೊಡುತ್ತಿದ್ದ, ಆತನಿಂದಲೇ ಅನೂಪ್ ಜೊತೆ ತನ್ನ ಲವ್ ಬ್ರೇಕಪ್ ಆಯಿತು ಎಂದು ದೂರಿದ್ದಾರೆ.
ಇನ್ನು ಅಪ್ಪಣ್ಣ ರಾಮದುರ್ಗ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದಲ್ಲಿ ನಾಯಕನ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


