ಮೈಸೂರು: ನಟ ದರ್ಶನ್ ಇತ್ತೀಚೆಗಷ್ಟೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆದ ದರ್ಶನ್ ಸದ್ಯ ದ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಆಗಾಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಲುವಾಗಿ ನ್ಯಾಯಾಲತಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ರಿಲೀಫ್ ಪಡೆದುಕೊಂಡಿರುವ ದರ್ಶನ್ ಇದೀಗ ಮತ್ತೊಂದು ವಿಚಾರಣೆಗೆ ಹಾಜರಾಗಬೇಕಾಗಿ ಬಂದಿದೆ.
ಹೌದು, ಮೈಸೂರು – ಟಿ. ನರಸೀಪುರ ರಸ್ತೆಯಲ್ಲಿ ಮೇಗಳಾಪುರದ ಸಮೀಪವಿರುವ ವಿನೀಶ್ ಫಾರ್ಮ್‌ನಲ್ಲಿ ವಿದೇಶಿ ಬಾತುಕೋಳಿಗಳನ್ನು ಸಾಕಿರುವ ಕಾರಣಕ್ಕೆ ಟಿ ನರಸೀಪುರ ನ್ಯಾಯಾಲಯ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ದರ್ಶನ್ ಒಡೆತನದ ಫಾರ್ಮ್ ಮೇಲೆ ದಾಳಿ ನಡೆಸಿದಾಗ ಈ ವಿಷಯ ಬಹಿರಂಗವಾಗಿದ್ದು, ವಲಸೆ ಬಂದ ವಿದೇಶಿ ಬಾತುಕೋಳಿಯನ್ನು ಸಾಕಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಇದು ಅಪರಾಧವಾಗಿದ್ದು, ಜುಲೈ 4ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


