Wednesday, September 2, 2026
spot_img
More
    spot_img
    HomeEntertainmentಥಿಯೇಟರ್‌ಗೆ ನುಗ್ಗಿ ಪವನ್‌ ಕಲ್ಯಾಣ್‌ ಚಿತ್ರದ ಬ್ಯಾನರ್‌ಗಳನ್ನು ಕಿತ್ತೆಸೆದ ಕನ್ನಡಿಗರು; ವಿಡಿಯೊ

    ಥಿಯೇಟರ್‌ಗೆ ನುಗ್ಗಿ ಪವನ್‌ ಕಲ್ಯಾಣ್‌ ಚಿತ್ರದ ಬ್ಯಾನರ್‌ಗಳನ್ನು ಕಿತ್ತೆಸೆದ ಕನ್ನಡಿಗರು; ವಿಡಿಯೊ

    ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಯಾವುದೇ ನಾಮಫಕವಿರಲಿ ಅದರಲ್ಲಿ ಶೇ. 60ರಷ್ಟು ಕನ್ನಡವಿರಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮ ಜಾರಿಯಾದಾಗಿನಿಂದ ರಾಜ್ಯದಲ್ಲಿ ಒಂದಂಕಿಯಿಂದ ಕೋಟಿ ದುಡಿಯುವ ಎಲ್ಲ ಕಂಪನಿಗಳೂ ಸಹ ತಮ್ಮ ಬೋರ್ಡ್‌ಗಳಲ್ಲಿ 60% ಕನ್ನಡ ಬಳಸಲಾರಂಭಿಸಿದ್ದಾರೆ.

    Advertisement

    ಇನ್ನು ಕೆಲ ಕಿಡಿಗೇಡಿಗಳು ಇದಕ್ಕೂ ಬಗ್ಗದೇ ದರ್ಪ ತೋರಿದ್ದು, ಕನ್ನಡಿಗರಿಂದ ಸಾಕಷ್ಟು ಬಾರಿ ಪಾಠ ಹೇಳಿಸಿಕೊಂಡಿದ್ದೂ ಆಗಿದೆ. ಇಷ್ಟು ದಿನಗಳ ಕಾಲ ಕೇವಲ ಬೋರ್ಡ್‌ಗೆ ಸೀಮಿತವಾಗಿದ್ದ ಕನ್ನಡಿಗರ ಆಂದೋಲನ ಇದೀಗ ಚಿತ್ರಮಂದಿರ ಎದುರು ಹಾಕುವ ಬ್ಯಾನರ್‌ಗೂ ಬಂದಿರುವುದು ಕನ್ನಡ ಲಿಪಿ ಹೋರಾಟದ ಕುರಿತ ಮತ್ತೊಂದು ಹೆಜ್ಜೆಯಾಗಿದೆ.

    ನಾಳೆ ( ಜುಲೈ 24 ) ತೆಲುಗು ನಟ ಪವನ್ ಕಲ್ಯಾಣ್‌ ನಟನೆಯ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಯಾಗುತ್ತಿದ್ದು, ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಪ್ರೀಮಿಯರ್‌ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಚಿತ್ರ ಬಿಡುಗಡೆಯನ್ನು ಹಬ್ಬದ ರೀತಿ ಆಚರಿಸುವ ತೆಲುಗು ಮಂದಿ ಬೆಂಗಳೂರಿನಲ್ಲೂ ಚಿತ್ರಮಂದಿರದ ಮುಂದೆ ಪವನ್‌ ಕಲ್ಯಾಣ್‌ ಬ್ಯಾನರ್‌ಗಳನ್ನು ಹಾಕಿ ಚಿತ್ರಕ್ಕೆ ಶುಭ ಕೋರಿದ್ದಾರೆ.

    ಆದರೆ ಈ ಬ್ಯಾನರ್‌ಗಳಲ್ಲಿ ಕನ್ನಡ ಇಲ್ಲದೇ ಇರುವುದನ್ನು ಕಂಡ ಕನ್ನಡಿಗರು ಚಿತ್ರಮಂದಿರಗಳಿಗೆ ನುಗ್ಗಿ ಬ್ಯಾನರ್‌ಗಳನ್ನು ಕಿತ್ತೆಸೆದಿದ್ದಾರೆ. ಈ ವೇಳೆ ಪವನ್‌ ಕಲ್ಯಾಣ್‌ ಅಭಿಮಾನಿಗಳು ತಡೆಯಲು ಯತ್ನಿಸಿದರಾದರೂ ಅದ್ಯಾವುದನ್ನೂ ಲೆಕ್ಕಿಸದ ಕನ್ನಡಿಗರು ಬ್ಯಾನರ್‌ ಹರಿದು ಕನ್ನಡ ಪಾಠ ಮಾಡಿದ್ದಾರೆ.

    ಧರ್ಮಸ್ಥಳ ಸರಣಿ ಕೊಲೆ: ಕೇರಳ ಸರ್ಕಾರ ಮಧ್ಯ ಪ್ರವೇಶದಿಂದ ತನಿಖೆ ದಿಕ್ಕು ತಪ್ಪಲಿದೆ ಎಂದ ಆರಗ ಜ್ಞಾನೇಂದ್ರ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading