ಬೆಂಗಳೂರು: ಧರ್ಮಸ್ಥಳ ಸರಣಿ ಕೊಲೆ ಪ್ರಕರಣಕ್ಕೆ ಸದ್ಯ ಬೃಹತ್ ತಿರುವು ಸಿಕ್ಕಿದೆ. ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ತಾನು ಕೊಲೆಯಾದ ಶವಗಳನ್ನು ಹೂತಿದ್ದಾಗಿ ಹೇಳಿಕೊಂಡು ಮುಂದೆ ಬಂದಿದ್ದು ಅದೆಷ್ಟೋ ಆರೋಪಗಳು ಧೂಳು ಕೊಡವಿಕೊಂಡಿವೆ.
ಇದೇ ವಿಷಯವಾಗಿ ಯುಟ್ಯೂಬರ್ ಸಮೀರ್ ʼಧರ್ಮಸ್ಥಳ ಸೀರಿಯಲ್ ಕಿಲ್ಲರ್ಸ್ʼ ಎಂಬ ವಿಡಿಯೊವೊಂದನ್ನು ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಂಡ್ಯ ಮೂಲದ ವ್ಯಕ್ತಿ ಧರ್ಮಸ್ಥಳಕ್ಕೆ ಕೆಲಸಕ್ಕೆ ಸೇರಿದ್ದು ಹಾಗೂ ಆತ ಕೃತ್ಯಗಳಲ್ಲಿ ಹೇಗೆ ಭಾಗವಹಿಸಿದ ಎಂಬುದನ್ನು ತಿಳಿಸಿದ್ದರು. ಈ ವಿಡಿಯೊಗೆ ಸ್ಟೇ ತರುವ ಯತ್ನ ನಡೆಯಿತಾದರೂ ಸಫಲವಾಗಲಿಲ್ಲ.
ಇದೀಗ ಪವರ್ ಟಿವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿಯವರು ಆ ವಿಡಿಯೊ ಅಪ್‌ಲೋಡ್ ಆದ 10 ದಿನಗಳ ಬಳಿಕ ಕಿಡಿಕಾರಿದ್ದಾರೆ. ಧರ್ಮಾಧಿಕಾರಿಗಳ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎನ್ನುವ ರಾಕೇಶ್ ಶೆಟ್ಟಿ ಆರಂಭದಲ್ಲಿಯೇ ಸಮೀರ್ ಕುರಿತು ಕಚಡ ನನ್ಮಗ, ಲೋಫರ್ ಎಂದು ಅವಾಚ್ಯ ಶಬ್ದ ಬಳಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಸುದ್ದಿ ವಾಚಕನಾಗಿ ಪ್ರಮುಖ ಸ್ಥಾನದಲ್ಲಿ ಕುಳಿತು ಸಣ್ಣ ಯುಟ್ಯೂಬರ್ ಮೇಲೆ ಈ ಮಟ್ಟಿಗಿನ ಹಗೆತನ ಸಾಧಿಸುವ ಅನಿವಾರ್ಯತೆ ಇರಲಿಲ್ಲ, ಸಮೀರ್ ವಿಡಿಯೊಗೆ ಕೌಂಟರ್ ಕೊಡುವ ಹಾಗಿದ್ದರೆ ಆತನ ಹಾಗೆಯೇ ವಿವರಣೆ ಕೊಟ್ಟು ಮಾತನಾಡಿ, ಕಚಡ, ಲೋಫರ್ ಎಂದು ಕನ್ನಡ ಪತ್ರಿಕೋದ್ಯಮಕ್ಕೆ ಮಸಿ ಬಳಿಯಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ಕಾಮೆಂಟ್‌ಗಳು ಬಂದಿವೆ.
ಇನ್ನು ಸಮೀರ್ ಧರ್ಮಸ್ಥಳ ಕೊಲೆಗಳ ಸಾಕ್ಷಿ ದೂರುದಾರನ ಹೆಸರನ್ನು ಭೀಮ ಎಂದು ಉಲ್ಲೇಖ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ರಾಕೇಶ್ ಶೆಟ್ಟಿ ʼಮುಲ್ಲಾ, ಅಲ್ಲಾʼ ಎಂಬ ಹೆಸರನ್ನಿಡಬೇಕಿತ್ತು ಭೀಮ ಯಾಕೆ ಎಂದು ಪ್ರಶ್ನಿಸುವ ಮೂಲಕ ಕೋಮುಗಲಭೆಗೂ ಸಹ ಹಾದಿ ಮಾಡಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಗಿರೀಶ್ ಮಟ್ಟಣವರ್ ಸರ್ ಎನ್ನುವ ಬದಲು ಗಿರೀಶ್ ಅಪ್ಪ ಅಂತ ಕರೆ ಎನ್ನುವ ಮೂಲಕ ಹೀನಾಯ ಕಾಮೆಂಟ್ ಮಾಡಿದ್ದು, ಸರ್ಟಿಫಿಕೇಟ್‌ನಲ್ಲಿರುವವನು ನಿನ್ನ ಅಪ್ಪ ಅಲ್ಲ ಬೇರೆಯವನು ಎಂದೂ ಸಹ ಮಾತನಾಡಿದ್ದಾರೆ. ಇದೂ ಸಹ ನೆಟ್ಟಿಗರನ್ನು ಕೆರಳಿಸಿದೆ. ಎಷ್ಟರಮಟ್ಟಿಗೆ ಕಾಮೆಂಟ್ ಹರಿದುಬಂದಿವೆ ಎಂದರೆ ಸ್ವತಃ ಪವರ್ ಟಿವಿ ಅವರದ್ದೇ ವಿಡಿಯೊನ ಕಾಮೆಂಟ್ ಆಫ್ ಮಾಡಿಕೊಂಡುಬಿಟ್ಟಿದೆ.
ಜಾತಿ ಜನಗಣತಿಗೆ ಯಾರ ವಿರೋಧವೂ ಇಲ್ಲ: ಈಶ್ವರ್ ಖಂಡ್ರೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


