Tuesday, September 1, 2026
spot_img
More
    spot_img
    HomeLatest newsಆರೋಗ್ಯವಂತರಾಗಲು ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು? ಯಾವ ವಯಸ್ಸಿನವರು ಎಷ್ಟು ಹೆಜ್ಜೆ ನಡೆಯಬೇಕು

    ಆರೋಗ್ಯವಂತರಾಗಲು ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು? ಯಾವ ವಯಸ್ಸಿನವರು ಎಷ್ಟು ಹೆಜ್ಜೆ ನಡೆಯಬೇಕು

    ಇಂದಿನ ಯಾಂತ್ರಿಕ ಯುಗದಲ್ಲಿ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದ್ದು, ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಕಂಪ್ಯೂಟರ್ ಆಧಾರಿತ ಕೆಲಸಗಳು, ಗಂಟೆಗಟ್ಟಲೆ ಕುಳಿತು ಟಿವಿ ಅಥವಾ ಮೊಬೈಲ್ ನೋಡುತ್ತಿರುವ ಅಭ್ಯಾಸದಿಂದ ಅನೇಕರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಾಕಿಂಗ್ ಅಥವಾ ನಡಿಗೆ ಎಲ್ಲರಿಗೂ ಸೂಕ್ತವಾಗಿದೆ.ವಾಕಿಂಗ್‌ನ ಮುಖ್ಯ ಲಾಭವೇನೆಂದರೆ, ಇದು ಯಾವುದೆ ಅಧಿಕ ಸಾಧನ ಅಥವಾ ತಂತ್ರಜ್ಞಾನವಿಲ್ಲದೇ ಮಾಡಬಹುದಾದ ವ್ಯಾಯಾಮ.

    Advertisement

    ಎಲ್ಲ ವಯಸ್ಸಿನವರು ಇದನ್ನು ಸರಳವಾಗಿ ದಿನನಿತ್ಯದ ಜೀವನದಲ್ಲಿ ಸೇರಿಸಿಕೊಳ್ಳಬಹುದು. ತಜ್ಞರ ಅಭಿಪ್ರಾಯದಲ್ಲಿ, ನಡಿಗೆ ಉತ್ತಮ ಹೃದಯ ಆರೋಗ್ಯ, ತೂಕ ನಿಯಂತ್ರಣ, ಮಾನಸಿಕ ಒತ್ತಡ ಕಡಿತ, ಸಂಧಿವಾತ ನಿವಾರಣೆ ಮುಂತಾದ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ.ಆದರೆ, ವಾಕಿಂಗ್ ಮಾಡುವ ಅವಧಿ ಪ್ರತಿಯೊಬ್ಬರ ದೈಹಿಕ ಸ್ಥಿತಿಗತಿ ಮತ್ತು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳಿಂದ ಹಿರಿಯರ ವರೆಗೆ ಎಲ್ಲರಿಗೂ ನಡಿಗೆ ಫಲಕಾರಿ ಆಗಿರಬಹುದು, ಆದರೆ ಎಷ್ಟು ಹೊತ್ತು ನಡೆಯಬೇಕು ಎಂಬ ಪ್ರಶ್ನೆಗೆ ತಜ್ಞರ ಸಲಹೆ ಆವಶ್ಯಕ.ವಾಕಿಂಗ್ ಯಾವುದೇ ವಯಸ್ಸಿನಲ್ಲಿ ಮಾಡಲು ಸುಲಭವಾದ ವ್ಯಾಯಾಮವಾಗಿದೆ.

    ಒಂದು ಸಂಶೋಧನೆಯ ಪ್ರಕಾರ, ಆರೋಗ್ಯವಂತ ಜೀವಿತಕ್ಕಾಗಿ ದಿನಕ್ಕೆ ಸರಾಸರಿ 8 ಕಿಲೋಮೀಟರ್ ನಡೆಯುವುದು ಅಗತ್ಯವಂತೆ. ಇದರಲ್ಲಿ ಬೆಳಿಗ್ಗೆ ಹೋಗಿ 8 ಕಿಲೋಮೀಟರ್ ನಡೆದು ಮನೆಗೆ ಮರಳಿ ಬನ್ನಿ ಅಂತಲ್ಲ ಬದಲಾಗಿ, ದಿನವಿಡೀ ನೀವು ಮಾಡಿದ ಎಲ್ಲ ನಡಿಗೆಗಳ ಒಟ್ಟು ಈ 8 ಕಿಲೋಮೀಟರ್ ಆಗಬೇಕು.ಅಂದರೆ, ಮನೆಯೊಳಗಿನ ಕೆಲಸಗಳಲ್ಲಿ, ಅತ್ತ ಇತ್ತ ತಿರುಗಾಡೋದು, ಕಿಚನ್‌ನಿಂದ ಹಾಲ್‌ಗೆ ಹೋಗೋದು, ಕಚೇರಿಯಲ್ಲಿ ನಡೆದಿರುವುದು ಇವೆಲ್ಲವೂ ಈ ಲೆಕ್ಕದೊಳಗೆ ಬರುತ್ತವೆ. ಇದು ನಿಭಾಯಿಸದೇ ಇರುವಷ್ಟು ಕಠಿಣವಿಲ್ಲ. ಇಷ್ಟು ನಡಿಗೆಯು ದೈಹಿಕವಾಗಿ ನಿಮ್ಮನ್ನು ಆಕ್ಟಿವ್ ಇಡುತ್ತದೆ, ದೇಹದ ಚಕ್ರವ್ಯೂಹವನ್ನು ಚುರುಕಾಗಿಸುತ್ತದೆ, ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.ಹಾಗಾದರೆ, ವಿವಿಧ ವಯಸ್ಸಿನ ಜನರು ಪ್ರತಿದಿನ ಎಷ್ಟು ದೂರ ನಡೆಯಬೇಕು ಮತ್ತು ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳೋಣ.

    *6 ರಿಂದ 12 ವರ್ಷ: ಮಕ್ಕಳನ್ನೂ ವಾಕಿಂಗ್‌ಗೆ ಕರೆದುಕೊಂಡು ಹೋದಾಗ, ಈ ವಯಸ್ಸಿನ ಮಕ್ಕಳು ದಿನಕ್ಕೆ ಕನಿಷ್ಠ 12000 ರಿಂದ 15000 ಹೆಜ್ಜೆ ನಡೆಯಬೇಕು.

    *60 ವರ್ಷದೊಳಗಿನವರು ದಿನಕ್ಕೆ 8000 ರಿಂದ 10,000 ಹೆಜ್ಜೆ ಹಾಕಬೇಕು.60 ವರ್ಷ ಮೇಲ್ಪಟ್ಟವರು ದಿನಕ್ಕೆ 6000 ರಿಂದ 8000 ಹೆಜ್ಜೆ ನಡೆಯುವುದು ತಕ್ಕಮಟ್ಟಿಗೆ ಸಮರ್ಪಕ.ಇಷ್ಟು ನಡಿಗೆ ವ್ಯಾಯಾಮದಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ನೇರವಾಗಿ ವ್ಯಾಯಾಮ ಸಾಧ್ಯವಾಗದಿದ್ದರೆ, ಆಟಪಾಟಗಳಲ್ಲಿ ತೊಡಗಿಸಿಕೊಳ್ಳುವುದೂ ಉತ್ತಮ.18 ರಿಂದ 50 ವರ್ಷದೊಳಗಿನವರು ದಿನಕ್ಕೆ ಕಡಿಮೆದಷ್ಟರಲ್ಲಿ 12,000 ಹೆಜ್ಜೆ ಹಾಕುವ ಗುರಿಯನ್ನು ಇಡಬೇಕು.ಈ ಕ್ರಮವನ್ನು ಅನುಸರಿಸುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಶಾಂತಿಗೂ ಸಹಕಾರಿಯಾಗುತ್ತದೆ

    *66 ರಿಂದ 75 ವಯಸ್ಸಿನವರು: ಇವರು ನಿತ್ಯ 20ರಿಂದ 30 ನಿಮಿಷಗಳ ಕಾಲ ನಡೆಯುವುದರಿಂದ ವಯಸ್ಸಾದವರಿಗೆ ಅನೇಕ ಪ್ರಯೋಜನಗಳಿವೆ. ಈ ವಯಸ್ಸಿನಲ್ಲಿ ವಾಕಿಂಗ್ ಮಾಡುವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು. ಜೊತೆಗೆ ನೋವನ್ನು ತಪ್ಪಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ವಯಸ್ಸಾದವರಲ್ಲಿ ವಾಕಿಂಗ್ ಸ್ಮರಣಶಕ್ತಿ ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೇ, ದೀರ್ಘಕಾಲದ ಕಾಯಿಲೆಗಳು ಹಾಗೂ ಕೀಲು ನೋವು ಹೊಂದಿರುವ ಜನರು ತಲಾ 15 ನಿಮಿಷಗಳ ಎರಡು ಅವಧಿಗಳಲ್ಲಿ ನಡೆಯಲು ಸಂಶೋಧಕರು ಸಲಹೆ ನೀಡುತ್ತಾರೆ.

    *75 ವರ್ಷ ಮೇಲ್ಪಟ್ಟ ಹಿರಿಯರು 15ರಿಂದ 20 ನಿಮಿಷಗಳ ಕಾಲ ನಡೆದರೆ ಕೀಲುಗಳು ಮತ್ತು ಸ್ನಾಯುಗಳು ಆರೋಗ್ಯಕರವಾಗಿರುತ್ತವೆ. ವಾಕಿಂಗ್​ ಮಾಡುವುದರಿಂದ ಸಮತೋಲನವು ಸಂಭವಿಸುತ್ತದೆ

    ನಡಿಗೆಯ ಮುಖ್ಯ ಪ್ರಯೋಜನಗಳು:

    ತೂಕ ನಿಯಂತ್ರಣ;ಕೆಟ್ಟ ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ, ತೂಕ ಇಳಿಸಲು ಇದು ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ವ್ಯಾಯಾಮ

    ಹೃದಯ ಆರೋಗ್ಯ; ರಕ್ತದೊತ್ತಡ ಕಡಿಮೆಯಾಗುತ್ತದೆ, ಹೃದಯದ ಕಾರ್ಯಕ್ಷಮತೆ ಹೆಚ್ಚಾಗಿ, ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ

    ಮೂಳೆಗಳು ಗಟ್ಟಿಯಾಗುತ್ತವೆ, ನಡಿಗೆಯಿಂದ ಮೂಳೆಗಳ ಶಕ್ತಿವರ್ಧನೆ ಆಗುತ್ತದೆ, ಆಸ್ಟಿಯೊಪೊರೋಸಿಸ್ (ಮೂಳೆ ಸಡಿಲತೆ) ಬರುವ ಅಪಾಯ ಕಡಿಮೆಯಾಗುತ್ತದೆ

    ಮಾನಸಿಕ ಆರೋಗ್ಯ; ಖಿನ್ನತೆ, ಒತ್ತಡ ಇತ್ಯಾದಿ ಮನೋವಿಕಾರಗಳು ಕಡಿಮೆಯಾಗುತ್ತವೆ, ಮನಸ್ಥಿತಿಯನ್ನು ಸಕಾರಾತ್ಮಕವಾಗಿ ಇಡಲು ಸಹಾಯಮಾಡುತ್ತದೆ

    ನಿದ್ರೆ ಸುಧಾರಣೆ;ಸಂಜೆ ಅಥವಾ ರಾತ್ರಿ ನಡೆಯುವುದು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ, ಚಿರಸ್ತಾಯಿ ನಿದ್ದೆಗೆ ಸಹಾಯಕ

    ಮಧುಮೇಹ ನಿಯಂತ್ರಣ; ಡೈಬೆಟೀಸ್ ರೋಗಿಗಳು ಪ್ರತಿದಿನ ನಡೆಯುವುದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ

    ಮಳೆಗಾಲದಲ್ಲಿ ಫುಡ್ ಪಾಯ್ಸನ್ ಎಚ್ಚರಿಕೆ! ಲಕ್ಷಣಗಳು ಮತ್ತು ತಡೆಗಟ್ಟಲು ಸರಳ ಟಿಪ್ಸ್

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading