ರಾಣಿಬೆನ್ನೂರು: ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೃದ್ಧರೊಬ್ಬರು ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಮಾನ್ಸೂನ್ ಅಬ್ಬರದ ಕಾರಣ ನದಿ ಮೈದುಂಬಿ ಹರಿಯುತ್ತಿದ್ದು, ಅಪಾಯದ ನದಿಗೆ ಬಿದ್ದರೂ ಸಹ ಆ ವೃದ್ಧ 15 ಕಿ.ಮೀ. ದೂರ ಈಜಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರು ವೃದ್ಧ ಜೀವ ಉಳಿಸಿಕೊಳ್ಳಲು ಈಜುತ್ತಿರುವುದನ್ನು ಕಂಡು ಸಹಾಯ ಮಾಡಿ ಪ್ರಾಣ ಉಳಿಸುವಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಮೈಸೂರಿನ ಜಯಣ್ಣ (60) ಬದುಕುಳಿದ ಸಾಹಸಿ ವೃದ್ಧ. ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ನದಿ ತುಂಬಿ ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಸಿಲುಕಿದ ಜಯಣ್ಣ ಈಜುತ್ತ 15 ಕಿ.ಮೀ.ವರೆಗೂ ತೆರಳಿದ್ದಾರೆ.
ನಂತರ ಸುಸ್ತಾಗಿ ಈಜಾಡಲು ಆಗದ ಕಾರಣ ಕಾಪಾಡಿ, ಕಾಪಾಡಿ ಎಂದು ಸಹಾಯ ಬೇಡಿದ್ದಾರೆ. ಅಷ್ಟರಲ್ಲಿ ಅವರು ಐರಣಿ ಗ್ರಾಮದ ಹೊಳೆಮಠದವರೆಗೂ ತೇಲಿ ಬಂದಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಮೀನುಗಾರರ ದೋಣಿ ತೆಗೆದುಕೊಂಡು ಹೋಗಿ ಜಯಣ್ಣ ಅವರನ್ನು ರಕ್ಷಿಸಿದ್ದಾರೆ. ಜಯಣ್ಣ ಮೈಸೂರಿನವರಾಗಿದ್ದು ಮನೆ ಬಿಟ್ಟು ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಎರಡೂರು ದಿನದಿಂದ ಕೆಲಸವಿಲ್ಲದೆ ಅಲೆದಾಡುತ್ತಿದ್ದರು. ಮೈ ಮೇಲೆ ಇರುವ ಬಟ್ಟೆ ಬಿಟ್ಟು ಬೇರೆ ಬಟ್ಟೆ ಸಹ ಇರಲಿಲ್ಲ. ಅವು ಕೂಡ ಹೊಲಸಾಗಿದ್ದರಿಂದ ತೊಳೆದುಕೊಳ್ಳುವ ಸಲುವಾಗಿ ನದಿಗೆ ತೆರಳಿದ್ದರು ಎನ್ನಲಾಗಿದೆ.
ಮಂಡ್ಯ: ವಿದ್ಯುತ್ ಸ್ಪರ್ಶಕ್ಕೆ ಆನೆ ಬಲಿ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


