ಧರ್ಮಸ್ಥಳಕ್ಕೆ ಬಂದಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಳು ಎಂದು ಹೇಳಿ ತನ್ನ ಮಗಳ ಅಸ್ತಿಪಂಜರವನ್ನು ಹುಡುಕಿಕೊಡಬೇಕು ಎಂದು ಹೇಳಿದ್ದ ಸುಜಾತಾ ಭಟ್ ವಿರುದ್ಧವೇ ಇದೀಗ ಹಲವಾರು ಅನುಮಾನಗಳು ವ್ಯಕ್ತವಾಗತೊಡಗಿವೆ.
ತನ್ನ ಮಗಳು ಅನನ್ಯ ಭಟ್ ಕುರಿತಾದ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನೂ ನೀಡದ ಸುಜಾತಾ ಭಟ್ ಅನನ್ಯ ಭಟ್‌ಳದ್ದು ಎಂದು ಒಂದು ಫೋಟೊವನ್ನು ತೋರಿಸಿದ್ದರು. ಆದರೆ ಈ ಫೋಟೊ ಅನನ್ಯ ಭಟ್‌ದಲ್ಲ, ತನ್ನ ಸಹೋದರಿ ವಾಸಂತಿಯದ್ದು ಎಂದು ವಿರಾಜಪೇಟೆ ಮೂಲದ ವಿಜಯ್ ಆರೋಪಿಸಿದ್ದರು.
ಇದೀಗ ಮತ್ತದೇ ವಾಸಂತಿ ಸಹೋದರ ವಿಜಯ್ ಸುಜಾತಾ ಭಟ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ವಾಸಂತಿ ಸಾವಿನ ಬಗ್ಗೆ ಅನುಮಾಗಳನ್ನು ವ್ಯಕ್ತಪಡಿಸಿದ್ದಾರೆ. ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ಹೇಳಿರುವ ವಿಜಯ್ ಆಕೆಯ ದೇಹವನ್ನೂ ಸಹ ನಾವು ನೋಡಿಲ್ಲ, ಆಕೆಯ ಮೈ ಮೇಲೆ ಇದ್ದ ಚಿನ್ನ ಸಹ ತಮಗೆ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಸುಜಾತಾ ಭಟ್ ಬಳಿಯೇ ವಾಸಂತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇದ್ದು, ಆಕೆಯ ಬ್ಯಾಂಕ್ ಖಾತೆ ಬಗ್ಗೆಯೂ ಸಹ ನಮಗೆ ಮಾಹಿತಿ ಇಲ್ಲ, ಹೀಗಾಗಿ ಈ ಸಂಬಂಧ ಸುಜಾತಾ ಭಟ್‌ರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳ: ಎಸ್‌ಐಟಿ ತನಿಖೆಯಲ್ಲಿ ಸತ್ಯ ಆಚೆ ಬರಲಿದೆ ಎಂದ ನಟಿ ರಮ್ಯಾ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


