ಬೆಂಗಳೂರು: ನಿನ್ನೆಯಷ್ಟೇ ( ಸೆಪ್ಟೆಂಬರ್ 22 ) ಮುಂಬರುವ ಪ್ಯಾನ್ ಇಂಡಿಯಾ ಕನ್ನಡ ಚಿತ್ರ ಕಾಂತಾರ ದ ಲೆಜೆಂಡ್ ಚಾಪ್ಟರ್ 1ರ ಟ್ರೈಲರ್ ಬಿಡುಗಡೆಯಾಗಿದೆ.
ತನ್ನ ಮೇಕಿಂಗ್ ಹಾಗೂ ಕ್ವಾಲಿಟಿಯಿಂದ ಸದ್ದು ಮಾಡುತ್ತಿರುವ ಕಾಂತಾರ ಟ್ರೈಲರ್ ಕಂಡ ಸಿನಿ ರಸಿಕರು ಅಕ್ಟೋಬರ್ 2ರಂದು ಮೊದಲ ಶೋ ಚಿತ್ರವನ್ನು ನೋಡಿಬಿಡಬೇಕು ಎಂದು ಕಾತರರಾಗಿ ಕಾಯುತ್ತಿದ್ದಾರೆ.
ಹೀಗೆ ಟ್ರೈಲರ್ ಎಲ್ಲೆಡೆ ಸದ್ದು ಮಾಡುವ ಮುನ್ನವೇ ಕಾಂತಾರ ಚಿತ್ರವನ್ನು ವೀಕ್ಷಿಸುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ ಕಾಂತಾರ ವೀಕ್ಷಿಸಲು ಬರುವವರು ಮೂರು ನಿಯಮಗಳನ್ನು ಪಾಲಿಸಿ ಎಂದು ಬರೆಯಲಾಗಿತ್ತು.
ಕಾಂತಾರ ನೋಡಲು ಬರುವವರು ಧೂಮಪಾನ, ಮದ್ಯಪಾನ ಹಾಗೂ ಮಾಂಸಹಾರ ಸೇವನೆ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿ ಎಂದು ಬರೆಯಲಾಗಿತ್ತು. ಈ ತಲೆ ಕೆಟ್ಟ ಜನರ ಪೋಸ್ಟ್ ಕಂಡು ಸಾರ್ವಜನಿಕರು ಕಿಡಿಕಾರಿದ್ದರು.
ಹೀಗೆ ಮಾಂಸಹಾರ ಪ್ರಿಯರ ಭಾವನೆಗೆ ಧಕ್ಕೆಯಾಗುವಂತಹ ಪೋಸ್ಟ್ ಹಂಚಿಕೊಂಡಿದ್ದ ತಲೆ ಕೆಟ್ಟ ʼಕಾಂತಾರ ಪರ್ವʼ ಎಂಬ ಎಕ್ಸ್ ಖಾತೆ ಕ್ಷಮೆ ಯಾಚಿಸಿದ್ದು, ಬಳಿಕ ತನ್ನ ಖಾತೆಯನ್ನೇ ಡಿಲಿಟ್ ಮಾಡಿಕೊಂಡು ಎಕ್ಸ್ ಮಾಧ್ಯಮವನ್ನೇ ತೊರೆದಿದ್ದಾನೆ.
ಇನ್ನು ಈ ಖಾತೆಗೂ ಸಿನಿಮಾ ತಂಡಕ್ಕೂ ಯಾವುದೇ ಸಂಬಂಧವಿಲ್ಲದೇ ಇದ್ದು, ಕಾಂತಾರ ಪರ್ವ ಎಂಬ ಹೆಸರನ್ನು ಹೊಂದಿದ್ದ ಕಾರಣ ಬಹುತೇಕರು ಇದನ್ನು ಅಧಿಕೃತ ಪೋಸ್ಟ್ ಎಂದು ಭಾವಿಸಿ ಕಾಂತಾರ ಚಿತ್ರ ತಂಡದ ವಿರುದ್ಧ ಕಿಡಿಕಾರಿದ್ದರು.
ಅಲ್ಲದೇ ಮಾಂಸಹಾರ ಸೇವನೆ ನಮ್ಮ ಸಂಸ್ಕೃತಿ ಇದನ್ನು ಮಾಡಬೇಡಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಚಿತ್ರ ಪ್ರೇಮಿಯಾದರೆ ತಾವೇ ಇನ್ನೆರಡು ಬಾರಿ ಚಿತ್ರವನ್ನು ನೋಡಲಿ, ಅವರಿಗೆ ಬೇಕಾದ ಸಂಕಲ್ಪಗಳನ್ನು ಅವರೇ ಮಾಡಿಕೊಳ್ಳಲಿ, ಮತ್ತೊಬ್ಬರನ್ನು ಹೀಗೆಯೇ ಪಾಲಿಸಿ ಎಂದು ಹೇಳುವ ಹಾಗೂ ಮನವಿ ಮಾಡಿಕೊಳ್ಳುವ ಹಕ್ಕೂ ಸಹ ಯಾರಿಗೂ ಇಲ್ಲ ಎಂದು ಮಾಂಸಹಾರಿಗಳು ಆಕ್ರೋಶ ಹೊರಹಾಕಿದ್ದರು.
ನವರಾತ್ರಿ ಎರಡನೇ ದಿನ: ಬ್ರಹ್ಮಚಾರಿಣಿ ಪೂಜೆ ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಮಂತ್ರಗಳು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


