ಪದವಿ ಪೂರ್ಣಗೊಳಿಸಿದವರಿಗೆ ಒಂದು ಶುಭ ಸುದ್ದಿ! ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಉತ್ತಮ ಅವಕಾಶವನ್ನು ತಂದಿದೆ. ಬ್ಯಾಂಕ್ ತನ್ನಲ್ಲಿ ಖಾಲಿಯಿರುವ 190 ಕ್ರೆಡಿಟ್ ಮ್ಯಾನೇಜರ್ ಮತ್ತು ಅಗ್ರಿಕಲ್ಚರ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 19, 2025 ರಿಂದ ಅಕ್ಟೋಬರ್ 10, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದಲ್ಲಿ ಒಟ್ಟು 190 ಹುದ್ದೆಗಳನ್ನು ಘೋಷಿಸಲಾಗಿದ್ದು, ಇದರಲ್ಲಿ 130 ಕ್ರೆಡಿಟ್ ಮ್ಯಾನೇಜರ್ ಮತ್ತು 60 ಕೃಷಿ ಮ್ಯಾನೇಜರ್ ಹುದ್ದೆಗಳು ಸೇರಿವೆ.
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ punjabandsind.bank.in ಗೆ ಭೇಟಿ ನೀಡಬೇಕು. ಪದವೀಧರರು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಈ ಅವಕಾಶವು ಅತ್ಯಂತ ಉಪಯುಕ್ತವಾಗಿದೆ. ಅರ್ಹತಾ ಮಾನದಂಡಗಳು, ಅರ್ಜಿ ಪ್ರಕ್ರಿಯೆ, ನೇಮಕಾತಿ ಪರೀಕ್ಷೆ ಮತ್ತು ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪಡೆಯಬಹುದು.
ಸಂಸ್ಥೆಯ ಹೆಸರು
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ
ಹುದ್ದೆಗಳ ಹೆಸರು
ಕ್ರೆಡಿಟ್ ಮ್ಯಾನೇಜರ್ ಮತ್ತು ಕೃಷಿ ವ್ಯವಸ್ಥಾಪಕ
ಒಟ್ಟು ಹುದ್ದೆಗಳು
190 ಹುದ್ದೆಗಳಿಗೆ ನೇಮಕಾತಿ
ಹುದ್ದೆಯ ವಿವರ
ಕ್ರೆಡಿಟ್ ಮ್ಯಾನೇಜರ್ – 130
ಕೃಷಿ ವ್ಯವಸ್ಥಾಪಕ – 60
ವಿದ್ಯಾರ್ಹತೆ ವಿವರ
ಕ್ರೆಡಿಟ್ ಮ್ಯಾನೇಜರ್:
ಹುದ್ದೆಗೆ ಯಾವುದೇ ವಿಭಾಗದಲ್ಲಿ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು
ಎಸ್ಸಿ ಎಸ್ಟಿ ಒಬಿಸಿ ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 55 ಪರ್ಸೆಂಟ್ ಅಂಕಗಳನ್ನು ನಿಗದಿಪಡಿಸಲಾಗಿದೆ
ಕೃಷಿ ವ್ಯವಸ್ಥಾಪಕ
ಕೃಷಿ/ ತೋಟಗಾರಿಕೆ / ಡೈರಿ/ ಪಶು ಸಂಗೋಪನೆ /ಅರಣ್ಯ /ಪಶು ವೈದ್ಯಕೀಯ ವಿಜ್ಞಾನ/ ಕೃಷಿ ಇಂಜಿನಿಯರಿಂಗ್ /ಮೀನು ಕೃಷಿಯಲ್ಲಿ ಪದವಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು
ಎಸ್ಸಿ ಎಸ್ಟಿ ಒಬಿಸಿ ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 55 ಪರ್ಸೆಂಟ್ ಅಂಕಗಳನ್ನು ನಿಗದಿಪಡಿಸಲಾಗಿದೆ
ವಯೋಮಿತಿ ಮತ್ತು ಅರ್ಜಿ ಶುಲ್ಕ
ವಯಸ್ಸು: ಅರ್ಜಿದಾರರ ವಯಸ್ಸು 23 ರಿಂದ 35 ವರ್ಷಗಳ ಒಳಗಿರಬೇಕು. ಅಂದರೆ, ಸೆಪ್ಟೆಂಬರ್ 2, 1990 ಕ್ಕಿಂತ ಮೊದಲು ಮತ್ತು ಸೆಪ್ಟೆಂಬರ್ 1, 2002 ರ ನಂತರ ಜನಿಸಿರಬಾರದು. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 19-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-10-10-2025
ಅರ್ಜಿ ಮುದ್ರಣ ಕೊನೆಯ ದಿನಾಂಕ- 25-10-2025
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ: ₹850
SC, ST, ಮತ್ತು PwBD ಅಭ್ಯರ್ಥಿಗಳಿಗೆ: ₹100
ವೇತನ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಸಂಬಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹64,820 ರಿಂದ ₹93,960 ರವರೆಗೆ ವೇತನ ದೊರೆಯಲಿದೆ. ಇದರ ಜೊತೆಗೆ ಬ್ಯಾಂಕಿನ ನಿಯಮಗಳ ಪ್ರಕಾರ ಡಿಎ, ಎಚ್‌ಆರ್‌ಎ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ಭತ್ಯೆಗಳೂ ಇರುತ್ತವೆ.
ಬೇಕಾಗುವ ಅಗತ್ಯ ದಾಖಲೆಗಳು
ಪದವಿ ಪ್ರಮಾಣ ಪತ್ರ
ಎಸ್ ಎಸ್ ಎಲ್ ಸಿ ಅಂಕಪಟ್ಟಿ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಹಾಗೂ ಇನ್ನಿತರ ಸಂಬಂಧಿಸಿದ ದಾಖಲೆಗಳು.
ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ punjabandsind.bank.in ಗೆ ಭೇಟಿ ನೀಡಬೇಕು.
‘ನೇಮಕಾತಿ’ ವಿಭಾಗಕ್ಕೆ ಹೋಗಿ, ಸಂಬಂಧಿತ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಿದ ನಂತರ, ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಬಳಕೆಗಾಗಿ ಅದರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಜಿಎಸ್‌ಟಿ 2.0 ಇಂದ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರೀ ಇಳಿಕೆ: ₹2.56 ಲಕ್ಷದವರೆಗೆ ರಿಯಾಯಿತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


