ಹೊಸದಿಲ್ಲಿ: ಅಫ್ಘಾನಿಸ್ತಾನದ 13 ವರ್ಷದ ಬಾಲಕನೋರ್ವ ಕಾಬೂಲ್‌ನಿಂದ ದೆಹಲಿಗೆ ತೆರಳಬೇಕಿದ್ದ ವಿಮಾನದ ಚಕ್ರದ ಭಾಗದಲ್ಲಿ ಅಡಗಿ ಕುಳಿತು 94 ನಿಮಿಷಗಳ ಕಾಲ ಪ್ರಯಾಣಿಸಿ ಬದುಕುಳಿದಿರುವ ಆಶ್ಚರ್ಯಕಾರಿ ಘಟನೆ ನಡೆದಿದೆ.
13 ವರ್ಷದ ಬಾಲಕ ಇರಾನ್‌ಗೆ ನುಸುಳಲು ಬಯಸಿದ್ದನು. ಎಂಬುದಾಗಿ ತಿಳಿದುಬಂದಿದ್ದು, ಆದರೆ ಗೊಂದಲದಲ್ಲಿ ದೆಹಲಿಗೆ ತೆರಳುವ ವಿಮಾನದ ಬಳಿ ಬಂದಿದ್ದಾನೆ.
ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ವಿಮಾನದ ಚಕ್ರದ ಭಾಗದಲ್ಲಿ ಅಡಗಿ ಕುಳಿತಿದ್ದು, ವಿಮಾನವು ಕಾಬೂಲ್ ನಿಂದ ಭಾರತೀಯ ಕಾಲಮಾನ ಬೆಳಗ್ಗೆ 8:46ಕ್ಕೆ ಹೊರಟು ಬೆಳಿಗ್ಗೆ 10:20ಕ್ಕೆ ದೆಹಲಿಗೆ ಬಂದಿಳಿದಿದೆ. ಬಳಿಕ ಬಾಲಕ ವಿಮಾನದ ಬಳಿಯ ನಿರ್ಬಂಧಿತ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ತಿಳಿದುಬಂದಿದೆ.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


