ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಪವಿತ್ರಾ ಗೌಡ ಅವರು ದೀಪಾವಳಿ ಹಬ್ಬವನ್ನು ಕುಟುಂಬ ಮತ್ತು ಮಗಳೊಂದಿಗೆ ಆಚರಿಸಿಕೊಳ್ಳಲಾಗದೆ ತೀವ್ರ ಸಂಕಟದಲ್ಲಿದ್ದಾರೆ.
ಜೈಲು ಮೂಲಗಳ ಪ್ರಕಾರ, ಮಗಳ ನೆನಪಿನಿಂದ ಅವರು ಕಣ್ಣೀರು ಹಾಕುತ್ತಾ ದಿನಗಳನ್ನು ಕಳೆಯುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರುವುದರಿಂದ ಹಬ್ಬಗಳ ಸಂಭ್ರಮದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಜೈಲು ಜೀವನ ಅವರಿಗೆ ತೀವ್ರ ನೋವುಂಟುಮಾಡಿದ್ದು, ಮಗಳು ಮತ್ತು ಕುಟುಂಬಸ್ಥರ ಜೊತೆ ಸಮಯ ಕಳೆಯಲು ಸಾಧ್ಯವಾಗದಿರುವುದು ಅವರನ್ನು ಹೆಚ್ಚು ಕಾಡುತ್ತಿದೆ. ಇತರೆ ಸಹಬಂಧಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ. ಸಾಮಾನ್ಯವಾಗಿ ಮೌನವಾಗಿಯೇ ಇರುತ್ತಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಬೆಂಗಳೂರಿಗರೇ ಗಮನಿಸಿ: ಈ 2 ದಿನಗಳ ಕಾಲ ಇಲ್ಲ ಬೆಸ್ಕಾಂ ಆನ್ಲೈನ್ ಸೇವೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


