ಕರ್ನಾಟಕದ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದರೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಕಾನೂನುಗಳಿವೆ. ಒಂದು ವೇಳೆ ಇದನ್ನು ಉಲ್ಲಂಘನೆ ಮಾಡಿದರೆ ದೂರು ದಾಖಲಿಸಬಹುದಾಗಿದೆ. ಆರೋಪ ಸಾಬೀತಾದರೆ ಜೈಲು ಶಿಕ್ಷೆಯನ್ನು ಸಹ ಅನುಭವಿಸಬೇಕಾಗುತ್ತದೆ.
ದೇಶದಲ್ಲಿ ಈಗ ಭಾರತೀಯ ನ್ಯಾಯ ಸಂಹಿತೆ (BNS) 2023 ಜಾರಿಗೆ ಬಂದಿದೆ. 160 ವರ್ಷಗಳ ಹಳೆಯ ಭಾರತೀಯ ದಂಡ ಸಂಹಿತೆ (IPC) ಅನ್ನು ಬದಲಿಸಿ ಜುಲೈ 1, 2024 ರಿಂದ ಜಾರಿಗೆ ಬಂದ ಹೊಸ ಭಾರತೀಯ ಕ್ರಿಮಿನಲ್ ಕಾನೂನು ಬಿಎನ್‌ಎಸ್.
ಕರ್ನಾಟಕದ ಪೊಲೀಸರು ಬಿಎನ್‌ಎಸ್ ಅಡಿ ಸರ್ಕಾರಿ ನೌಕರರ ವಿರುದ್ಧದ ಪ್ರಕರಣಗಳಿಗೆ ಎಷ್ಟು ಶಿಕ್ಷೆ ಆಗುತ್ತದೆ? ಎಂದು ಮಾಹಿತಿ ನೀಡಿದ್ದಾರೆ. ಇಲ್ಲಿ ಪ್ರಮುಖ 8 ಅಪರಾಧಗಳನ್ನು ವಿವರಿಸಿದ್ದಾರೆ.
ಪೊಲೀಸರ ಈ ಪ್ರಕಟಣೆ ಸರ್ಕಾರಿ ನೌಕರರ ಹಾಗೂ ಸರಕಾರಿ ಆಸ್ತಿಯ ಸಂರಕ್ಷಣೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (B.N.S.-2023) ರ ಅಡಿಯಲ್ಲಿ ಇರುವ ಕಲಂ ಮತ್ತು ನಿಯಮಗಳು ಹಾಗೂ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ, ಆದ ಅಪರಾಧಗಳಿಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಸಲುವಾಗಿ, ದೂರು ಕೊಡಲು ಇರುವ ಕಾಯ್ದೆ – ಕಲಂಗಳ ವಿವರ
- ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಾರಿ ನೌಕರರ ಕೆಲಸಕ್ಕೆ ಅಡಚಣೆ ಮತ್ತು ನೌಕರರ ಮೇಲೆ ಹಲ್ಲೆ ಮಾಡುವುದು. ಕಲಂ ಮತ್ತು ಕಾಯ್ದೆ 132 ಬಿ.ಎನ್.ಎಸ್. 2 ವರ್ಷ ಜೈಲು ಶಿಕ್ಷೆ, ದಂಡ.
- ಸರ್ಕಾರಿ ನೌಕರರಿಗೆ ಭಯಪಡಿಸಿ ಹಣ ವಸೂಲಿ ಮಾಡುವುದು. ಕಲಂ ಮತ್ತು ಕಾಯ್ದೆ 308(2) ಬಿ.ಎನ್.ಎಸ್. 2 ವರ್ಷ ಜೈಲು ಶಿಕ್ಷೆ, ದಂಡ.
- ಸರ್ಕಾರಿ ನೌಕರರಿಂದ ಇತರೆ ಕಾರಣಗಳಿಂದ ಹಣ ಸುಲಿಗೆ ಮಾಡುವುದು. ಕಲಂ ಮತ್ತು ಕಾಯ್ದೆ 309(4) & (6) ಬಿ.ಎನ್.ಎಸ್. 10 ವರ್ಷ ಜೈಲು ಶಿಕ್ಷೆ, ದಂಡ.
- ಸರ್ಕಾರಿ ಕಛೇರಿ ಒಳಗಡೆ ಮತ್ತು ಆವರಣದ ಒಳಗೆ ಗುಂಪು ಜನ ಸೇರಿ ದೊಂಬಿ ಮಾಡುವುದು. ಕಲಂ ಮತ್ತು ಕಾಯ್ದೆ 189(2), 190 ಬಿ.ಎನ್.ಎಸ್. 2 ವರ್ಷ ಜೈಲು ಶಿಕ್ಷೆ, ದಂಡ.
- ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ಪಡೆಯುವುದು. ಕಲಂ ಮತ್ತು ಕಾಯ್ದೆ 336(3) ಬಿ.ಎನ್.ಎಸ್. 7 ವರ್ಷ ಜೈಲು ಶಿಕ್ಷೆ, ದಂಡ.
- ಸರ್ಕಾರಿ ಆಸ್ತಿಗಳನ್ನು ಕಳವು ಮಾಡುವುದು. ಕಲಂ ಮತ್ತು ಕಾಯ್ದೆ 303(2), 305 ಬಿ.ಎನ್.ಎಸ್. 3 ರಿಂದ 7 ವರ್ಷ ಜೈಲು ಶಿಕ್ಷೆ, ದಂಡ.
- ಸರ್ಕಾರಿ ನೌಕರನಿಗೆ ಜೀವ ಬೆದರಿಕೆ ಹಾಕುವುದು. ಕಲಂ ಮತ್ತು ಕಾಯ್ದೆ 351(2), (3) ಬಿ.ಎನ್.ಎಸ್. 3 ರಿಂದ 7 ವರ್ಷ ಜೈಲು ಶಿಕ್ಷೆ, ದಂಡ.
- ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದಲ್ಲಿದ್ದಾಗ ಹಲ್ಲೆ ಮತ್ತು ಮಾನಹಾನಿ ಮಾಡುವುದು. ಕಲಂ ಮತ್ತು ಕಾಯ್ದೆ 132, 74, 79, ಬಿ.ಎನ್.ಎಸ್. 2 ರಿಂದ 5 ವರ್ಷ ಜೈಲು ಶಿಕ್ಷೆ, ದಂಡ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


