Saturday, November 7, 2026
spot_img
More
    spot_img
    HomeSportsCricketಹ್ಯಾಪಿ ರಿಟೈರ್‌ಮೆಂಟ್‌ ವಿರಾಟ್‌ ಕೊಹ್ಲಿ: ಅಡಿಲೇಡ್‌ ಅಂಗಳದಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರಾ ಕೊಹ್ಲಿ?

    ಹ್ಯಾಪಿ ರಿಟೈರ್‌ಮೆಂಟ್‌ ವಿರಾಟ್‌ ಕೊಹ್ಲಿ: ಅಡಿಲೇಡ್‌ ಅಂಗಳದಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರಾ ಕೊಹ್ಲಿ?

    ಅಡಿಲೇಡ್:‌ ಸದ್ಯ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದ್ದ ಭಾರತ ಇಂದು ( ಅಕ್ಟೋಬರ್‌ 23 ) ಎರಡನೇ ಏಕದಿನ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯದಲ್ಲಿಯೂ ಕೊಹ್ಲಿ ನೆಲಕಚ್ಚಿದ್ದಾರೆ.

    ಹೌದು, ನಾಯಕ ಶುಬ್‌ಮನ್‌ ಗಿಲ್‌ ಔಟ್‌ ಆದ ಬೆನ್ನಲ್ಲೇ ಕಣಕ್ಕಿಳಿದ ವಿರಾಟ್‌ ಕೊಹ್ಲಿ ನಾಲ್ಕು ಎಸೆತಗಳನ್ನು ಎದುರಿಸಿ ಡಕ್‌ಔಟ್‌ ಆಗಿದ್ದಾರೆ. ಕ್ಷೇವಿಯರ್‌ ಬಾರ್ಟ್ಲೆಟ್‌ ಎಸೆದ ಎಸೆತದಲ್ಲಿ ಎಲ್‌ಡಬ್ಲ್ಯೂಗೆ ಬಲಿಯಾದ ಕೊಹ್ಲಿ ಬೇಸರದಿಂದ ತಮ್ಮ ಹ್ಯಾಂಡ್‌ ಗ್ಲೌಸ್‌ ಮೇಲೆತ್ತಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

    ಹೀಗೆ ವಿರಾಟ್‌ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ ಏಕದಿನ ಕ್ರಿಕೆಟ್‌ನಲ್ಲಿ ಡಕ್‌ಔಟ್‌ ಆಗಿದ್ದನ್ನು ಕಂಡು ನೆಟ್ಟಿಗರು ಇದು ನಿವೃತ್ತಿಯ ಸಮಯ ಎಂದು ಕಾಲೆಳೆದಿದ್ದಾರೆ. ʼಹ್ಯಾಪಿ ರಿಟೈರ್‌ಮೆಂಟ್‌ ಕೊಹ್ಲಿʼ ಎಂದು ಸಾಲು ಸಾಲು ಟ್ವೀಟ್‌ಗಳು ಹರಿದಾಡಿವೆ. ಅಲ್ಲದೇ ರಿಟೈರ್‌ಮೆಂಟ್‌ ಎಂಬ ಕೀ ವರ್ಡ್‌ ಸಹ ಎಕ್ಸ್‌ ಖಾತೆಯಲ್ಲಿ ಟ್ರೆಂಡಿಂಗ್‌ ಆಗುತ್ತಿದೆ.

    ಇನ್ನು ಕೆಲವರಂತೂ ವಿರಾಟ್‌ ಕೊಹ್ಲಿ ಗ್ಲೌಸ್‌ ಮೇಲೆತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದ್ದರ ಫೋಟೊ ಹಂಚಿಕೊಂಡು ಇದು ನಿವೃತ್ತಿಯ ಸಂಕೇತ ಎಂದು ಬರೆದುಕೊಳ್ಳುತ್ತಿದ್ದು, ಇದೇ ಕೊನೆಯ ಪಂದ್ಯವಾಗಬಹುದು ಹಾಗೂ ಕೊಹ್ಲಿ ಪಾಲಿಗಿದು ಕೊನೆಯ ಸರಣಿಯೂ ಆಗಬಹುದು ಎಂದು ಟ್ರೋಲ್‌ ಮಾಡುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search