ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಏಕದಿನ ಸರಣಿಯಲ್ಲಿ ಆಡಿದ ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋತು ಇದೀಗ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೂರು ಪಂದ್ಯಗಳ ಸರಣಿ ಇದಾಗಿದ್ದು, ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಹೀಗಾಗಿ ಇಂದು ( ಅಕ್ಟೋಬರ್ 23 ) ನಡೆಯಲಿರುವ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಪಡೆ ನೆಲಕಚ್ಚಿದ್ದು, ಇಂದಿನ ಪಂದ್ಯದಲ್ಲಿ ಅವರು ಉತ್ತಮ ಆಟವನ್ನಾಡಲೇಬೇಕಿದೆ.
ಹೌದು, ಕಳೆದ ಪಂದ್ಯದಲ್ಲಿ ಟಾಪ್ ಆರ್ಡರ್ ಕೈಕೊಟ್ಟಿತ್ತು. ಅದರಲ್ಲೂ ಬಹು ದಿನಗಳ ಬಳಿಕ ತಂಡಕ್ಕೆ ಮರಳಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫ್ಲಾಪ್ ಆಗಿದ್ದರು. ಹೀಗೆ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಕೇವಲ 8 ರನ್ ಬಾರಿಸಿ ಔಟ್ ಆಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಬ್‌ಮನ್ ಗಿಲ್ ನಾಯಕನಾದ ಕಾರಣಕ್ಕೆ ಹೊಟ್ಟೆಕಿಚ್ಚಿನಿಂದ ರೋಹಿತ್ ಶರ್ಮಾ ಬೇಕಂತಲೇ ಚೆನ್ನಾಗಿ ಆಡುತ್ತಿಲ್ಲ ಎಂಬ ಚರ್ಚೆಗಳು ಏರ್ಪಟ್ಟಿವೆ.
ಈ ಕುರಿತು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು, ಬಹು ವರ್ಷಗಳಿಂದ ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ನಾಯಕನಾಗಿದ್ದವ ನಾಯಕತ್ವ ಕಳೆದುಕೊಂಡ ಬಳಿಕ ಮತ್ತೋರ್ವ ಆಟಗಾರ ನಾಯಕನಾದರೆ ಬೇಕಂತಲೇ ಚೆನ್ನಾಗಿ ಆಡುವುದಿಲ್ಲ ಎಂಬ ತಪ್ಪು ಮಾಹಿತಿ ಇದೆ. ಆದರೆ ಅದು ನಿಜವಲ್ಲ. ಬದಲಾಗಿ ನಾಯಕತ್ವ ಹೋಯಿತು ಎಂದು ಕಳಪೆ ಆಟವನ್ನಾಡಿದರೆ ಆ ಆಟಗಾರ ತಂಡದಿಂದಲೂ ಸಹ ಸ್ಥಾನ ಕಳೆದುಕೊಳ್ಳಲಿದ್ದಾನೆ ಹೊರತು ಹೊಸ ನಾಯಕನಿಗೆ ಆತನ ಕಳಪೆ ಆಟದಿಂದ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


