Wednesday, November 4, 2026
spot_img
More
    spot_img
    HomeLatest news₹14,000ರ ಸನಿಹಕ್ಕೆ ತಲುಪಿದ ಹಳದಿ ಲೋಹ! ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ದರ ಪಟ್ಟಿ...

    ₹14,000ರ ಸನಿಹಕ್ಕೆ ತಲುಪಿದ ಹಳದಿ ಲೋಹ! ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಇಲ್ಲಿದೆ

    ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗುತ್ತಿವೆ. ಜಾಗತಿಕ ಬಿಕ್ಕಟ್ಟಿನ ನೆರಳು ಮಾರುಕಟ್ಟೆಯ ಮೇಲೆ ಬಿದ್ದಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿರುವುದರಿಂದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ (All-time high) ತಲುಪಿವೆ. ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 300 ರೂಪಾಯಿ ಏರಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.

    ಮಾರುಕಟ್ಟೆಯಲ್ಲಿ ಈಗ ಚಿನ್ನಕ್ಕಿಂತ ಬೆಳ್ಳಿಯದ್ದೇ ಸದ್ದು! ಹಳದಿ ಲೋಹಕ್ಕೆ ಪೈಪೋಟಿ ನೀಡುತ್ತಿರುವ ಬೆಳ್ಳಿ ಬೆಲೆ ಈಗ ರಾಕೆಟ್ ವೇಗದಲ್ಲಿ ಏರುತ್ತಿದೆ. ಕಳೆದ ಎರಡು ದಿನಗಳಲ್ಲಿನ ಬೆಲೆ ಏರಿಕೆ ಗ್ರಾಹಕರನ್ನು ಬೆಚ್ಚಿಬೀಳಿಸಿದ್ದು, ಬೆಳ್ಳಿ ಇನ್ನು ಸಾಮಾನ್ಯರಿಗೆ ಎಟುಕದ ‘ದುಬಾರಿ ಲೋಹ’ವಾಗಿ ಬದಲಾಗುತ್ತಿದೆ.

    ಈ ವರ್ಷವೊಂದರಲ್ಲೇ ಬೆಳ್ಳಿ ದರವು ಬರೋಬ್ಬರಿ ಶೇ. 130 ಕ್ಕಿಂತ ಹೆಚ್ಚು ಏರಿಕೆಯಾಗುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ, ಕಳೆದ ಎರಡು ದಿನಗಳ ಅವಧಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ದಾಖಲೆ ಮಟ್ಟದ ₹9000 ಏರಿಕೆಯಾಗಿದೆ.ಇಂದು ಮಂಗಳವಾರ ಕೂಡ ₹4000 ಏರಿಕೆಯಾಗಿದ್ದು, 2.24 ಲಕ್ಷಕ್ಕೆ ಏರಿಕೆಯಾಗಿದೆ.

    ಸಾಮಾನ್ಯವಾಗಿ ಚಿನ್ನದ ಬೆಲೆ ಏರಿದಾಗ ಬೆಳ್ಳಿ ಏರುತ್ತದೆ. ಆದರೆ ಈ ಬಾರಿ ಕೈಗಾರಿಕಾ ಕ್ಷೇತ್ರಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಕೊರತೆಯಿಂದಾಗಿ ಬೆಳ್ಳಿ ಬೆಲೆ ಚಿನ್ನಕ್ಕಿಂತಲೂ ವೇಗವಾಗಿ ಏರುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

    ಇಂದಿನ ಚಿನ್ನದ ದರಗಳು

    24 ಕ್ಯಾರಟ್ (ಅಪರಂಜಿ)₹ 13,855₹ 1,38,550

    22 ಕ್ಯಾರಟ್ (ಆಭರಣ ಚಿನ್ನ)₹ 12,700₹ 1,27,000

    18 ಕ್ಯಾರಟ್ (ಸಣ್ಣ ಆಭರಣ)₹ 10,391₹ 1,03,910

    ಬೆಳ್ಳಿ ಬೆಲೆ (Silver Rate):

    1 ಗ್ರಾಂ ಬೆಳ್ಳಿ: ₹ 223

    100 ಗ್ರಾಂ ಬೆಳ್ಳಿ: ₹ 22,300

    1 ಕೆಜಿ ಬೆಳ್ಳಿ: ₹ 2,23,000

    ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ (ಪ್ರತಿ 1 ಗ್ರಾಂಗೆ)

    ನಗರಗಳು24 ಕ್ಯಾರಟ್ (ಇಂದಿನ ದರ)22 ಕ್ಯಾರಟ್ (ಇಂದಿನ ದರ)18 ಕ್ಯಾರಟ್ (ಇಂದಿನ ದರ)
    ಚೆನ್ನೈ₹13,931₹12,770₹10,650
    ಮುಂಬೈ₹13,855₹12,700₹10,391
    ದೆಹಲಿ₹13,870₹12,715₹10,406
    ಕೋಲ್ಕತ್ತಾ₹13,855₹12,700₹10,391
    ಬೆಂಗಳೂರು₹13,855₹12,700₹10,391
    ಹೈದರಾಬಾದ್₹13,855₹12,700₹10,391
    ಕೇರಳ₹13,855₹12,700₹10,391
    ಪುಣೆ₹13,855₹12,700₹10,391
    ವಡೋದರಾ₹13,860₹12,705₹10,396
    ಅಹಮದಾಬಾದ್₹13,860₹12,705₹10,396

    ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್;4 ಜಿಲ್ಲೆಗಳಲ್ಲಿ ಭ್ರಷ್ಟರ ಮನೆ ಬಾಗಿಲು ತಟ್ಟಿದ ಅಧಿಕಾರಿಗಳು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search