ಜನನ ಪ್ರಮಾಣ ಪತ್ರ (Birth Certificate) ಒಂದು ಅಧಿಕೃತ ಸರ್ಕಾರಿ ದಾಖಲೆ ಆಗಿದ್ದು, ಅದು ವ್ಯಕ್ತಿಯ ಜನನದ ದಿನಾಂಕ, ಸ್ಥಳ, ಮತ್ತು ಪೋಷಕರ ವಿವರಗಳನ್ನು ಅಧಿಕೃತವಾಗಿ ದಾಖಲಿಸುತ್ತದೆ. ಇದು ಗುರುತಿನ ಪ್ರಮಾಣವಾಗಿ ಹಾಗೂ ಪಾಸ್ಪೋರ್ಟ್, ಶಾಲಾ ಪ್ರವೇಶ, ಪ್ಯಾನ್ ಕಾರ್ಡ್, ಮತ್ತು ಇತರ ಮಹತ್ವದ ದಾಖಲೆಗಳನ್ನು ಪಡೆಯಲು ಅಗತ್ಯವಾಗುತ್ತದೆ.ಹುಟ್ಟಿದ 21 ದಿನಗಳ ಒಳಗೆ ಜನನ ಪ್ರಮಾಣಪತ್ರವನ್ನು ಪಡೆಯುವುದು ಮುಖ್ಯ, ಏಕೆಂದರೆ ಇದು ಇಲ್ಲದೆ ನಂತರ ಅನೇಕ ಆಡಳಿತಾತ್ಮಕ ತೊಂದರೆಗಳು ಎದುರಾಗಬಹುದು. ಜನನ ಪ್ರಮಾಣಪತ್ರ ಇಲ್ಲದೆ ಪಾಸ್ಪೋರ್ಟ್, ಶಾಲಾ ಪ್ರವೇಶ, ಸರ್ಕಾರಿ ಸೇವೆಗಳು ಮತ್ತು ಇತರ ಅತಿ ಮುಖ್ಯ ದಾಖಲೆಗಳನ್ನು ಪಡೆಯಲು ಕಷ್ಟವಾಗಬಹುದು.ಜನನ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಪೂರ್ಣಗೊಳಿಸುವ ಉದ್ದೇಶದಿಂದ, ಭಾರತ ಸರ್ಕಾರ ಈಗ ಹೊಸ ಅವಕಾಶ ಒದಗಿಸಿದೆ. ಮೊದಲು, 15 ವರ್ಷ ತುಂಬುವ ಮುನ್ನ ಜನನ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ನಿಯಮವನ್ನು ಸಡಿಲಿಸಿದ್ದು, 15 ವರ್ಷ ದಾಟಿದವರಿಗೂ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.
ಹಿಂದಿನಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2024 ಆಗಿತ್ತು. ಆದರೆ, ಈಗ ಈ ಗಡುವನ್ನು ಏಪ್ರಿಲ್ 27, 2026 ರವರೆಗೆ ವಿಸ್ತರಿಸಲಾಗಿದೆ.ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್ https://dc.crsorgi.gov.in/crs/ ಗೆ ಭೇಟಿ ನೀಡಿ, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.ಒಂದು ವೇಳೆ ನಿಮ್ಮ ಜನನ ಪ್ರಮಾಣಪತ್ರದಲ್ಲಿ ಬದಲಾವಣೆ (Correction) ಮಾಡಬೇಕಾದರೆ ಅಥವಾ 15 ವರ್ಷ ಮೇಲ್ಪಟ್ಟಿದ್ದರೆ, ನಿಮ್ಮ ಸ್ಥಳೀಯ ಪುರಸಭೆ/ಮಹಾನಗರ ಪಾಲಿಕೆ/ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಜನನ ಪ್ರಮಾಣ ಪತ್ರ (Birth Certificate) ಯಾಕೆ ಅಗತ್ಯವಿದೆ?
ಜನನ ಪ್ರಮಾಣ ಪತ್ರವು ಸರ್ಕಾರದಿಂದ ಮಾನ್ಯತೆ ಪಡೆದ ಮೂಲ ಗುರುತಿನ ದಾಖಲೆ ಆಗಿದ್ದು, ಇದು ವ್ಯಕ್ತಿಯ ಜನನದ ದಿನಾಂಕ, ಸ್ಥಳ, ಮತ್ತು ಪೋಷಕರ ವಿವರಗಳನ್ನು ಅಧಿಕೃತವಾಗಿ ದಾಖಲಿಸುತ್ತದೆ. ಹಾಗೂ ಮಗುವಿಗೆ ಆಧಾರ್ ಕಾರ್ಡ್(Adhar card) ಮಾಡಿಸುವ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಅವಶ್ಯಕವಾಗಿ ಬೇಕಾಗಿರುವ ದಾಖಲೆಯಾಗಿದೆ. ಹಾಗೂ ಮಗು ಶಾಲೆಗೆ(School) ಹೋಗುವ ಸಂದರ್ಭದಲ್ಲಿ ಶಾಲಾ ಪ್ರವೇಶಾತಿಗೆ ಜನನ ಪ್ರಮಾಣ ಪತ್ರ ಬಹಳ ಮುಖ್ಯವಾಗಿ ಬೇಕು.ನೋಂದಣಿ ಮಾಡಿಸದಿದ್ದರೆ ಶಾಲೆ, ಪಾಸ್ಪೋರ್ಟ್, ಸರ್ಕಾರಿ ಸೇವೆಗಳಲ್ಲಿ ನೋಂದಣಿ ಮಾಡಲು ತೊಂದರೆ ಉಂಟಾಗಬಹುದು.ಜನನ ಪ್ರಮಾಣ ಪತ್ರವಿಲ್ಲದಿದ್ದರೆ, ನಿಮ್ಮ ಹುಟ್ಟಿದ ದಿನಾಂಕ ಮತ್ತು ಸ್ಥಳವನ್ನು ಅಧಿಕೃತವಾಗಿ ಸಾಬೀತುಪಡಿಸಲು ಕಾನೂನು ಸಮಸ್ಯೆಗಳು ಎದುರಾಗಬಹುದು.
ಅಗತ್ಯವಿರುವ ದಾಖಲೆಗಳು:
ಆಸ್ಪತ್ರೆ ಜನನ ಪ್ರಮಾಣ ಪತ್ರ (ಹಾಸ್ಪಿಟಲ್ ಬ್ಯಾರ್ತ್ ಸರ್ಕ್ಟಿಫಿಕೆಟ್)
ಪೋಷಕರ ಗುರುತು ಮತ್ತು ವಿಳಾಸ ದಾಖಲೆ (ಆಧಾರ್, ಪಾಸ್ಪೋರ್ಟ್, ವೋಟರ್ ಐಡಿ)
ಜನನದ ದಿನಾಂಕವನ್ನು ದೃಢೀಕರಿಸುವ ದಾಖಲೆ (ನಿವಾಸ ದೃಢೀಕರಣ)

ಜನನ ಪ್ರಮಾಣ ಪತ್ರದ ಮಹತ್ವ:
ಶಿಕ್ಷಣಕ್ಕೆ (School/College Admission):ಶಾಲೆ/ಕಾಲೇಜು ಸೇರಲು ಜನನ ಪ್ರಮಾಣ ಪತ್ರ ಅಗತ್ಯ.ಹೆಸರಿನ ಪಕ್ಕಾ ದಾಖಲೆ ಮತ್ತು ಜನ್ಮದಿನಾಂಕವನ್ನು ದೃಢೀಕರಿಸುತ್ತದೆ.
ಪಾಸ್ಪೋರ್ಟ್ & ವೀಸಾ (Passport & Visa):ವಿದೇಶ ಪ್ರಯಾಣ, ವೀಸಾ, ಪಾಸ್ಪೋರ್ಟ್ ಪಡೆಯಲು ಬೇಕಾಗುತ್ತದೆ.
ಆಧಾರ್ ಕಾರ್ಡ್ & ಪಾನ್ ಕಾರ್ಡ್ (Aadhaar & PAN Card):ಗುರುತಿನ ದಾಖಲೆಗಳನ್ನು ಪಡೆಯಲು ಬಳಸಲಾಗುತ್ತದೆ.
ಸರಕಾರಿ ಯೋಜನೆಗಳು (Government Schemes):ಸರ್ಕಾರಿ ಅನುದಾನ, ಪಿಂಚಣಿ, ಬಿಪಿಎಲ್ ಕಾರ್ಡ್, ಆರೋಗ್ಯ ಯೋಜನೆಗಳಲ್ಲಿ ನೋಂದಾಯಿಸಲು ಅಗತ್ಯ.
ಅಪರಾಧ & ಆಪತ್ತು ಸಂತ್ರಸ್ತ ಪರಿಹಾರ (Legal & Insurance Claims):ಕಾನೂನು ವಿಚಾರಗಳಲ್ಲಿ, ವಿಮಾ ಹಣ ಹಿಂತೆಗೆದುಕೊಳ್ಳಲು ಬೇಕಾಗುತ್ತದೆ.ಉದ್ಯೋಗ & ಸರ್ಕಾರಿ ಸೇವೆಗಳು
ಕೆಲವು ಉದ್ಯೋಗಗಳಿಗೆ, ಪಾಸ್ಪೋರ್ಟ್ ವೇರಿಫಿಕೇಶನ್ಗಾಗಿ ಅಗತ್ಯ
ಮರಣ ಪ್ರಮಾಣ ಪತ್ರ ಪಡೆಯಲು (Death Certificate & Inheritance Claims)
ಕುಟುಂಬದ ಆಸ್ತಿಪಾಸ್ತಿಗಳನ್ನು ವರ್ಗಾಯಿಸಲು ಅಗತ್ಯ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


