ದುಬೈ: ನಿನ್ನೆ (ಫೆಬ್ರವರಿ 23) ನಡೆದ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಪಾಕ್ ವಿರುದ್ಧ 6 ವಿಕೆಟ್ಗಳ ಗೆಲುವನ್ನು ದಾಖಲಿಸಿದ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಹೀನಾಯ ಸೋಲುಂಡ ಪಾಕ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.
49.4 ಓವರ್ಗಳಲ್ಲಿ 241 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್ಔಟ್ ಆಗಿ ಭಾರತಕ್ಕೆ 242 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿತು.
ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ನೀಡಿತು. ಪಾಕ್ನ ಯಾವೊಬ್ಬ ಆಟಗಾರನೂ ಸಹ ಭಾರತದ ಬೌಲರ್ಗಳಿಗೆ ಮುನ್ನುಗ್ಗಿ ಹೊಡೆಯುವ ಪ್ರಯತ್ನಕ್ಕೆ ಕೈಹಾಕಲಿಲ್ಲ. ಸಾಧ್ಯವಾದಷ್ಟು ವಿಕೆಟ್ ಉಳಿಸಿಕೊಂಡು ರನ್ ಕಲೆಹಾಕುವ ಪರಿಸ್ಥಿತಿಗೆ ಬಂದಿದ್ದರು ಪಾಕ್ ಬ್ಯಾಟ್ಸ್ಮನ್ಗಳು.
ಅದರಲ್ಲಿಯೂ ಪಾಕ್ನ ಆರಂಭಿಕ ಆಟಗಾರ ಬಾಬರ್ ಅಜಮ್ ಹಾಗೂ ಅರ್ಧಶತಕ ಬಾರಿಸಿದ್ದ ಸೌದ್ ಶಕೀಲ್ ವಿಕೆಟ್ ಅನ್ನು ಪಡೆದ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದರು. ಪಾಂಡ್ಯ ಪ್ರದರ್ಶನ ಮಾತ್ರವಲ್ಲದೇ ಯುವತಿ ವಿಚಾರವಾಗಿ ಸಹ ಈ ಪಂದ್ಯದಿಂದ ಸುದ್ದಿಗೀಡಾಗಿದ್ದಾರೆ.
ಪಂದ್ಯದ ವೇಳೆ ಬಿಳಿ ಬಣ್ಣದ ಬಟ್ಟೆ ತೊಟ್ಟ ಬೆಡಗಿಯೊಬ್ಬಳು ಪಾಂಡ್ಯಗೆ ಫ್ಲೈಯಿಂಗ್ ಕಿಸ್ ನೀಡಿದ್ದಾಳೆ. ಈಕೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈಕೆ ಯಾರು ಎಂಬ ಚರ್ಚೆ ಶುರುವಾಗಿದೆ.
ಈಕೆಯ ಹೆಸರು ಜಾಸ್ಮಿನ್ ವಾಲಿಯಾ. ಮೂಲತಃ ಬ್ರಿಟಿಷ್ ಗಾಯಕಿಯಾಗಿರುವ ಜಾಸ್ಮಿನ್ ವಾಲಿಯಾ ‘ಬಾಮ್ ಡಿಗ್ಗಿ’ ಎಂಬ ಹಿಂದಿ ಹಾಡನ್ನೂ ಸಹ ಹಾಡಿದ್ದು ಬಾಲಿವುಡ್ಗೂ ಕಾಲಿಟ್ಟಿದ್ದಾರೆ.
ಇನ್ನು ಈಕೆ ಇತ್ತೀಚೆಗೆ ಗ್ರೀಕ್ ಹಾಗೂ ಶ್ರೀಲಂಕಾ ಪ್ರವಾಸ ಮಾಡಿದ್ದು, ಹಾರ್ದಿಕ್ ಪಾಂಡ್ಯ ಸಹ ಅದೇ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ಇಬ್ಬರೂ ಸಹ ಇದುವರೆಗೂ ಎಲ್ಲೂ ತಮ್ಮ ಪ್ರೀತಿಯ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಇನ್ನು ಈ ಇಬ್ಬರೂ ಸಹ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ.
ಆದರೆ ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಮುನ್ನ ದುಬೈ ತಲುಪಿರುವ ಐಷಾರಾಮಿ ಹೊಟೇಲ್ವೊಂದರಲ್ಲಿ ಜಾಸ್ಮಿನ್ ವಾಲಿಯಾ ಉಳಿದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


