ರಾವಲ್ಪಿಂಡಿ: ಇಲ್ಲಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ಆರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದು, ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಎ ಗುಂಪಿನಿಂದ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿವೆ. ಅಲ್ಲದೇ ಪಂದ್ಯದಲ್ಲಿ ಸೋತ ಬಾಂಗ್ಲಾದೇಶ ಹಾಗೂ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ಸೆಮಿಫೈನಲ್ ಅರ್ಹತೆ ಕಳೆದುಕೊಂಡಿವೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಿದ್ದು ನ್ಯೂಜಿಲೆಂಡ್‌ಗೆ ಗೆಲ್ಲಲು 237 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿತಾದರೂ ರಚಿನ್ ರವೀಂದ್ರ ಜಾಣ್ಮೆಯ ಶತಕದ ನೆರವಿನಿಂದ 46.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿದೆ.
ಬಾಂಗ್ಲಾ ಇನ್ನಿಂಗ್ಸ್: ತನ್ಜಿದ್ ಹಸನ್ 24, ನಾಯಕ ಶಾಂಟೊ 77, ಮೆಹಿದಿ ಹಸನ್ 13, ತೌಹಿದ್ ಹೃದಯ್ 7, ಮುಷ್ಫಿಕರ್ ರಹೀಮ್ 2, ಮಹ್ಮದ್ದುಲ್ಲಾ 4, ಜೇಕರ್ ಅಲಿ 45, ರಿಷದ್ ಹೊಸೈನ್ 26, ತಸ್ಕಿನ್ ಅಹ್ಮದ್ 10, ಮುಸ್ತಫಿಜರ್ ಅಜೇಯ 3 ರನ್ ಬಾರಿಸಿದರೆ, ಯಾವುದೇ ರನ್ ಗಳಿಸದ ನಹಿದ್ ರಾಣಾ ಅಜೇಯರಾಗಿ ಉಳಿದರು.
ಕಿವೀಸ್ ಪರ ಮೈಕೆಲ್ ಬ್ರೇಸ್‌ವೆಲ್ 4 ವಿಕೆಟ್, ವಿಲಿಯಮ್ ಓರಾಕ್ 2 ವಿಕೆಟ್, ಮ್ಯಾಟ್ ಹೆನ್ರಿ ಹಾಗೂ ಜೆಮಿಸನ್ ತಲಾ ಒಂದೊಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಇನ್ನಿಂಗ್ಸ್: ವಿಲ್ ಯಂಗ್ ಡಕ್‌ಔಟ್, ಡಿವಾನ್ ಕಾನ್ವೆ 30 ರನ್, ಕೇನ್ ವಿಲಿಯಮ್ಸನ್ 5 ರನ್, ರಚಿನ್ ರವೀಂದ್ರ 112 ರನ್, ಟಾಮ್ ಲಾಥಮ್ 55 ರನ್, ಗ್ಲೆನ್ ಫಿಲಿಪ್ಸ್ ಅಜೇಯ 21 ರನ್ ಹಾಗೂ ಮೈಕೆಲ್ ಬ್ರೇಸ್‌ವೆಲ್ ಅಜೇಯ 11 ರನ್ ಗಳಿಸಿದರು.
ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್ ನಹಿದ್ ರಾಣಾ, ಮುಸ್ತಫಿಜರ್ ರಹಮಾನ್ ಹಾಗೂ ರಿಷದ್ ಹೊಸೈನ್ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


