Sunday, October 18, 2026
spot_img
More
    spot_img
    HomeTop StoryFact Check: ಕಚೇರಿಯಲ್ಲಿದ್ದ ಅಂಬೇಡ್ಕರ್ ಫೋಟೊ ತೆಗೆದು ಮೋದಿ ಫೋಟೊ ಇಟ್ಟ ದೆಹಲಿ ನೂತನ ಸಿಎಂ...

    Fact Check: ಕಚೇರಿಯಲ್ಲಿದ್ದ ಅಂಬೇಡ್ಕರ್ ಫೋಟೊ ತೆಗೆದು ಮೋದಿ ಫೋಟೊ ಇಟ್ಟ ದೆಹಲಿ ನೂತನ ಸಿಎಂ ರೇಖಾ ಗುಪ್ತಾ!

    ನವದೆಹಲಿ: ಇದೇ ತಿಂಗಳು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ದಾಖಲಿಸಿ ಮೂರು ದಶಕಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

    ಎಎಪಿಯ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಆಪ್‌ನ ದಿಗ್ಗಜ ನಾಯಕರಿಗೆ ಸೋಲುಣಿಸಿದ ಬಿಜೆಪಿ ಒಂದು ದಶಕದ ಕಾಲ ದೆಹಲಿ ಆಳಿದ ಆಪ್‌ ಹ್ಯಾಟ್ರಿಕ್ ಆಸೆಗೆ ತಣ್ಣೀರನ್ನು ಎರಚಿತು.

    ಹೀಗೆ ಐತಿಹಾಸಿಕ ಗೆಲುವು ಕಂಡ ಬಿಜೆಪಿ ರೇಖಾ ಗುಪ್ತಾ ಅವರನ್ನು ದೆಹಲಿಗೆ ನೂತನ ಸಿಎಂ ಆಗಿ ನೇಮಿಸಿತು.

    ಇನ್ನು ಅಪ್ಪಟ ಮೋದಿ ಅನುಯಾಯಿಯಾಗಿರುವ ರೇಖಾ ಗುಪ್ತಾ ಸಿಎಂ ಆದ ಬಳಿಕ ದೆಹಲಿ ಸಿಎಂ ಕಚೇರಿಯಲ್ಲಾದ ಬದಲಾವಣೆ ವಿಷಯಗಳಿಂದ ಸುದ್ದಿಗೀಡಾಗಿದ್ದಾರೆ.

    ಇಂದು ರೇಖಾ ಗುಪ್ತಾ ತಮ್ಮ ಕಚೇರಿಯಲ್ಲಿ ಕುಳಿತಿರುವ ಫೋಟೊ ವೈರಲ್ ಆಗಿದ್ದು, ಈ ಫೋಟೊದಲ್ಲಿ ರೇಖಾ ಗುಪ್ತಾ ಹಿಂದಿನ ಗೋಡೆ ಮೇಲೆ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರಗಳಿವೆ.

    ಈ ಫೊಟೊವನ್ನು ಹಂಚಿಕೊಂಡ ಎಎಪಿ ಕಾರ್ಯಕರ್ತರು ಈ ಹಿಂದೆ ದೆಹಲಿ ಸಿಎಂ ಕಚೇರಿ ಗೋಡೆ ಮೇಲೆ ಭಗತ್ ಸಿಂಗ್ ಹಾಗೂ ಅಂಬೇಡ್ಕರ್ ಫೋಟೊ ಇತ್ತು. ಆದರೆ ಈಗ ಅವುಗಳನ್ನು ತೆಗೆದುಹಾಕಿ ಈ ಫೋಟೊಗಳನ್ನು ಹಾಕಿದ್ದಾರೆ. ಅಂಬೇಡ್ಕರ್ ಹಾಗೂ ಭಗತ್ ಸಿಂಗ್‌ಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಆದರೆ ಈ ಆರೋಪವನ್ನು ತಿರಸ್ಕರಿಸಿದ ಬಿಜೆಪಿ ಕಚೇರಿಯ ಸಂಪೂರ್ಣ ಫೋಟೊವನ್ನು ಹಂಚಿಕೊಂಡು ಮತ್ತೊಂದು ಗೋಡೆ ಮೇಲೆ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಇರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

    ಈ ಹಿಂದೆ ದೆಹಲಿ ಕಚೇರಿಯ ಸಿಎಂ ಕುರ್ಚಿಯ ಹಿಂದಿನ ಗೋಡೆಯಲ್ಲಿದ್ದ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಫೋಟೊಗಳನ್ನು ಪಕ್ಕದ ಗೋಡೆಗೆ ಸ್ಥಳಾಂತರಿಸಲಾಗಿದ್ದು, ಕಚೇರಿಯಿಂದ ತೆಗೆದುಹಾಕಿಲ್ಲ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading