ಯಾದಗಿರಿ: ಇಲ್ಲಿನ ಶಹಾಪೂರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಕ್ಕಳು ಬಿಸಿಯೂಟ ಸೇವಿಸಿದ ತಟ್ಟೆಯನ್ನು ತೊಳೆಯಲು ಸಿಬ್ಬಂದಿ ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇನ್ನು ಈ ಶಾಲೆಗೆ ಇನ್ನೂರು ಸ್ಟೀಲ್ ತಟ್ಟೆಗಳನ್ನು ವ್ಯಕ್ತಿಯೊಬ್ಬರು ಒದಗಿಸಿದ್ದು, ಇದರಲ್ಲಿ ಪ್ರತಿನಿತ್ಯ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಸಿಬ್ಬಂದಿಗಳಾದ ಸಿದ್ದಮ್ಮ ಹಿರೇಮಠ ಹಾಗೂ ಶಾಂಭವಿ ನಾಯ್ಕೋಡಿ ಎಂಬುವವರು ದಲಿತ ಮಕ್ಕಳು ಊಟ ಸೇವಿಸಿದ ತಟ್ಟೆ ತೊಳೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಕೊಡುವ ಮೂರು ಸಾವಿರ ಸಂಬಳಕ್ಕೆ ದಲಿತ ಮಕ್ಕಳ ತಟ್ಟೆ ತೊಳೆಯಲು ಆಗುವುದಿಲ್ಲ ಎಂದೂ ಸಹ ಹೇಳಿದ್ದಾರೆ ಎಂಬ ಆರೋಪವೂ ಸಹ ಕೇಳಿಬಂದಿದೆ.
ಸಿಬ್ಬಂದಿಗಳ ಈ ನಡವಳಿಕೆಯಿಂದ ಆಕ್ರೋಶಗೊಂಡ ದಲಿತ ಮುಖಂಡರು ಅಡುಗೆ ಸಿಬ್ಬಂದಿಗಳಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಲೆಯ ಅಡುಗೆ ಕೋಣೆಗೆ ಬೀಗ ಜಡಿದಿದ್ದಾರೆ. ಈ ಕುರಿತಂತೆ ಬಿಇಒ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೂ ಸಹ ತಂದಿದ್ದು, ಯಾರೂ ಸಹ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


