ನಿನ್ನೆ ( ಮಾರ್ಚ್ 23 ) ಬೆಂಗಳೂರಿನ ಲುಲು ಮಾಲ್ ಆವರಣದಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ದರು. ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ ಯಶ್ ಮನದ ಕಡಲು ಚಿತ್ರದ ನಿರ್ಮಾಪಕ ಇ ಕೃಷ್ಣಪ್ಪ ಅವರು ತಮಗೆ ಮೊಗ್ಗಿನ ಮನಸು ಚಿತ್ರದಲ್ಲಿ ಅವಕಾಶ ನೀಡಿ ಮಾಡಿದ ಸಹಾಯವನ್ನು ನೆನೆದರು. ಇ ಕೃಷ್ಣಪ್ಪ ಹಾಗೂ ಇಡೀ ತಂಡ ನನ್ನ ಬದುಕಲ್ಲಿ ಒಂದುರೀತಿ ನೀಡಿದ ಕೊಡುಗೆ ಹಾಗೂ ಪರಿಶ್ರಮದಿಂದ ನಾನು ಇಲ್ಲಿ ನಿಂತಿದ್ದೇನೆ ಎಂದು ಹತ್ತಿದ ಏಣಿಯನ್ನು ನೆನಪಿಸಿಕೊಂಡ ಯಶ್ ಅದೇ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಧಾರಾವಾಹಿ ದಿನಗಳನ್ನು ನೆನೆದ ಯಶ್ ‘ಧಾರಾವಾಹಿಗಳಲ್ಲಿ ನಟಿಸುವಾಗ ಎಲ್ಲರೂ ಈ ಹುಡುಗ ಮುಂದೊಂದು ದಿನ ನಟನಾಗ್ತಾನೆ ಎನ್ನುತ್ತಿದ್ದರು. ಅದರಂತೆ ಹಲವು ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರುತ್ತಿದ್ದವು. ನಾನು ಕಥೆ ಕೇಳ್ತಾ ಇದ್ದೆ. ಕಥೆ ಏನು ಸರ್ ಎಂದರೆ ಬೇಜಾರು ಮಾಡಿಕೊಂಡುಬಿಡ್ತಾ ಇದ್ರು ಎಲ್ಲರೂ. ಏನಪ್ಪ ಚಾನ್ಸ್ ಕೊಟ್ರೆ ಸ್ಟೋರಿ ಕೇಳ್ತಾನಲ್ಲ ಏನಪ್ಪ ಇವನಿಗೆ ಇಷ್ಟೊಂದು ಕೊಬ್ಬು ಅಂತ. ನನಗೆ ಗೊತ್ತಿಲ್ಲದೇ, ನನಗೆ ನಂಬಿಕೆ ಇಲ್ಲದೇ ನಾನು ಏನು ಕೆಲಸ ಮಾಡೋಕೆ ಸಾಧ್ಯ ಹೇಳಿ? ಹೀಗಾಗಿ ನಾನು ಸಾಕಷ್ಟು ಸಿನಿಮಾ ಮಾಡೇ ಇರಲಿಲ್ಲ’ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


