ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 18ನೇ ಐಪಿಎಲ್ನ ಲೀಗ್ ಹಂತದ 66ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆರಿಸಿಕೊಂಡು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇಆಫ್ ಅರ್ಹತೆ ಕಳೆದುಕೊಂಡಿದ್ದು, ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ನಿನ್ನೆ ಆರ್ಸಿಬಿ ಸೋತ ಬಳಿಕ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇನ್ನು ಈ ಪಂದ್ಯದ ಫಲಿತಾಂಶ ಆರ್ಸಿಬಿ ಟಾಪ್ 2 ಸ್ಥಾನಕ್ಕೇರುವುದರ ಮೇಲೆ ತುಸು ಪರಿಣಾಮ ಬೀರಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಆರ್ಸಿಬಿಗೆ ತುಸು ಲಾಭ ಎನ್ನಬಹುದು. ಏಕೆಂದರೆ ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ತಲಾ 17 ಅಂಕಗಳನ್ನು ಹೊಂದಿದ್ದು, ಪಂಜಾಬ್ ಈ ಪಂದ್ಯವಲ್ಲದೇ ಇನ್ನೊಂದು ಪಂದ್ಯವನ್ನಾಡಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತರೆ ನೆಟ್ ರನ್ರೇಟ್ ಕಡಿಮೆಯಾಗಿ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಗಳಿವೆ. ಈ ಪಂದ್ಯವನ್ನು ಪಂಜಾಬ್ ಸೋತು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ ಆರ್ಸಿಬಿಗೆ ಕೊನೆಯ ಪಂದ್ಯದಲ್ಲಿ ಲಕ್ನೋ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರೆ ಟಾಪ್ 2 ಪಡೆದುಕೊಳ್ಳಬಹುದಾಗಿದೆ. ಆಗಲೂ ಸಹ ಪಂಜಾಬ್ ಹಾಗೂ ಆರ್ಸಿಬಿ ತಲಾ 19 ಅಂಕಗಳನ್ನು ಹೊಂದಲಿವೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದರೆ ಆರ್ಸಿಬಿಗೆ ಸಂಕಷ್ಟ ಶುರು ಎಂದೇ ಅರ್ಥ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


