ಜೈಪುರ: ಇಂದು ( ಮೇ 24 ) ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್‌ನ 66ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇಆಫ್ ಅರ್ಹತೆ ಕಳೆದುಕೊಂಡಿದ್ದು, ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ನಿನ್ನೆ ಆರ್‌ಸಿಬಿ ಸೋತ ಬಳಿಕ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಡೆಲ್ಲಿ ಎಲಿಮಿನೇಟ್ ಆಗಿರುವ ಕಾರಣ ಈ ಪಂದ್ಯ ಪಂಜಾಬ್ ಕಿಂಗ್ಸ್‌ಗೆ ಮಹತ್ವದ್ದಾಗಿದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಎಲಿಮಿನೇಟ್ ಆದ ತಂಡಗಳು ಕ್ವಾಲಿಫೈ ಆದ ತಂಡಗಳಿಗೆ ಕಂಟಕವಾಗಿ ಪರಿಣಮಿಸಿದ್ದು, ಈ ದಿನದ ಪಂದ್ಯದಲ್ಲಿಯೂ ಕ್ರಿಕೆಟ್ ಪ್ರೇಮಿಗಳು ಅಂತಹದ್ದೇ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಇನ್ನು ಇಂದಿನ ಪಂದ್ಯದಲ್ಲಿ ಯಾವ ರೀತಿಯ ಫಲಿತಾಂಶ ಬಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಾಭವಾಗಲಿದೆ ಎಂಬ ಚರ್ಚೆಯೂ ಸಹ ಇದೇ ವೇಳೆ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್ 2 ಸ್ಥಾನ ಪಡೆದುಕೊಳ್ಳಬೇಕೆಂದರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಬೇಕು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಇದರ ಪ್ರಕಾರ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಆರ್‌ಸಿಬಿಗೆ ತುಸು ಲಾಭ ಎನ್ನಬಹುದು. ಏಕೆಂದರೆ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ತಲಾ 17 ಅಂಕಗಳನ್ನು ಹೊಂದಿದ್ದು, ಪಂಜಾಬ್ ಈ ಪಂದ್ಯವಲ್ಲದೇ ಇನ್ನೊಂದು ಪಂದ್ಯವನ್ನಾಡಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತರೆ ನೆಟ್ ರನ್‌ರೇಟ್ ಕಡಿಮೆಯಾಗಿ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಗಳಿವೆ. ಈ ಪಂದ್ಯವನ್ನು ಪಂಜಾಬ್ ಸೋತು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ ಆರ್‌ಸಿಬಿಗೆ ಕೊನೆಯ ಪಂದ್ಯದಲ್ಲಿ ಲಕ್ನೋ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರೆ ಟಾಪ್ 2 ಪಡೆದುಕೊಳ್ಳಬಹುದಾಗಿದೆ. ಆಗಲೂ ಸಹ ಪಂಜಾಬ್ ಹಾಗೂ ಆರ್‌ಸಿಬಿ ತಲಾ 19 ಅಂಕಗಳನ್ನು ಹೊಂದಲಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


