Thursday, November 5, 2026
spot_img
More
    spot_img
    HomeTop Story5 ವರ್ಷಗಳ ಕಾಲ ಇರಲಿದೆ ಕೊರೊನಾ ಮಹಾಮಾರಿ, ಪ್ರಾಣಕ್ಕೂ ಅಪಾಯ; ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ...

    5 ವರ್ಷಗಳ ಕಾಲ ಇರಲಿದೆ ಕೊರೊನಾ ಮಹಾಮಾರಿ, ಪ್ರಾಣಕ್ಕೂ ಅಪಾಯ; ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು!

    ಬೆಳಗಾವಿ: ಕಳೆದೆರಡು ದಿನಗಳಿಂದ ಕೊರೊನಾ ವೈರಸ್‌ ಮತ್ತೆ ಉಲ್ಬನಗೊಂಡಿದೆ ಎಂದು ಹಲವು ರಾಜ್ಯಗಳಿಂದ ಸುದ್ದಿಗಳು ವರದಿಯಾಗಿವೆ. ಕೇರಳದಲ್ಲಿ ಈಗಾಗಲೇ ಕೊರೊನಾ ಕೇಸ್‌ 200ರ ಗಡಿ ದಾಟಿದ್ದು, ರಾಜ್ಯದಲ್ಲಿ ಒಟ್ಟು 36 ಕೊವಿಡ್‌ ಕೇಸ್‌ಗಳು ಪತ್ತೆಯಾಗಿವೆ.

    ಅತ್ತ ಆರೋಗ್ಯ ಇಲಾಖೆ ಸಹ ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು, ಗರ್ಭಿಣಿಯರು, ಮಕ್ಕಳು ಮಾಸ್ಕ್‌ ಧರಿಸಿ ಎಂದು ಮನವಿ ಮಾಡಿದೆ. ಹೀಗೆ ನಿಧಾನವಾಗಿ ಮತ್ತೊಮ್ಮೆ ಹರಡುತ್ತಿರುವ ಕೊರೊನಾ ವೈರಸ್‌ ಅನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಸಜ್ಜಾಗಿದೆ.

    ಇದರ ನಡುವೆಯೇ ಬೆಳಗಾವಿಯ ಕೋಡಿಮಠ ಶ್ರೀಗಳು ಮಾಧ್ಯಮದವರ ಜೊತೆ ಮಾತನಾಡಿ ಕೆಲ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಸಂವತ್ಸರದಲ್ಲಿ ಹೊಸ ರೋಗ ಬರಲಿದೆ, ಈಗಾಗಲೇ ಬಂದಿದೆ, ಇದು ಐದು ವರ್ಷಗಳವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.

    ಅಲ್ಲದೇ ಕೊರೊನಾ ವೈರಸ್‌ ಮತ್ತೊಂದು ರೂಪವನ್ನು ತಾಳಲಿದ್ದು, ಈ ಬಾರಿ ವಾಯು ರೂಪದಲ್ಲಿ ಬರಲಿದೆ ಎಂದರು. ವಾಯು ರೂಪದಲ್ಲಿ ಬರುವ ಈ ವೈರಸ್‌ ಉಸಿರಾಟಕ್ಕೆ ತೊಂದರೆಯಾಗಲಿದ್ದು, ತಲೆ ತನಕ ಹೋಗಿ ಮನುಷ್ಯನಿಗೆ ಸಾವು ಬರುವ ಲಕ್ಷಣಗಳು ಬಹಳ ಇದೆ ಎಂದೂ ಸಹ ತಿಳಿಸಿದರು.

    ಇದರಿಂದ ಲೋಕಕ್ಕೇ ಕಂಟಕ ಎದುರಾಗಲಿದ್ದು, ಹೋಗಿ ಬಂದು ಮಾಡುತ್ತಾ ಐದು ವರ್ಷಗಳ ಕಾಲ ಇರಲಿದೆ ಎಂದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search