ಬೆಂಗಳೂರು: ರಾಜ್ಯ ಕಾಂಗ್ರೆಸ್ ( congress ) ಸರ್ಕಾರದ ಆಡಳಿತ ವೈಖರಿ ವಿರುದ್ಧ ಸ್ವತಃ ಕಾಂಗ್ರೆಸ್ ಶಾಸಕರೇ ಆಕ್ರೋಶ ಹೊರಹಾಕುತ್ತಿದ್ದಾರೆ. ಮೊದಲಿಗೆ ಬಿಆರ್ ಪಾಟೀಲ್ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜತೆ ವಸತಿ ಯೋಜನೆಯಲ್ಲಿ ಹಣ ಪಡೆದು ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ್ದರು.
ಈ ಆಡಿಯೊ ವೈರಲ್ ಆದ ಬೆನ್ನಲ್ಲೇ ಭಾರೀ ಟೀಕೆಗೆ ಗುರಿಯಾದ ಕಾಂಗ್ರೆಸ್‌ಗೆ ಮತ್ತೋರ್ವ ಶಾಸಕ ರಾಜು ಕಾಗೆ ಹೇಳಿಕೆ ಮತ್ತಷ್ಟು ಹಿನ್ನಡೆಯನ್ನುಂಟುಮಾಡಿತು. ತಮ್ಮ ಪರಿಸ್ಥಿತಿ ಬಿಆರ್ ಪಾಟೀಲ್ ಅವರ ಅಪ್ಪನಂತಿದೆ, ಬಿಆರ್ ಪಾಟೀಲ್ ಹೇಳಿದ್ದು ಸುಳ್ಳಲ್ಲ, ಸತ್ಯ. ತಾನೂ ಸಹ ರಾಜೀನಾಮೆ ನೀಡುವ ನಿರ್ಧಾರದಲ್ಲಿದ್ದೇನೆ, ಇನ್ನೆರಡು ದಿನಗಳಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ಕುರಿತು ಸ್ವತಃ ಪಕ್ಷದ ಕಾರ್ಯಕರ್ತರಿಂದಲೇ ಬಂದದ್ದು ಪಕ್ಷಕ್ಕೆ ಭಾರೀ ಮುಜುಗರವನ್ನುಂಟುಮಾಡಿತು. ಹೀಗೆ ತಮ್ಮ ಹೇಳಿಕೆಯಿಂದ ಸಂಚಲನ ಹುಟ್ಟುಹಾಕಿದ್ದ ರಾಜು ಕಾಗೆ ಇದೀಗ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು, 2013-18ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆದ ಇದ್ದ ಸಿಎಂ ಈಗ ಇಲ್ಲ, ಅವರ ಮನಸ್ಥಿತಿ ಯಾಕೆ ಬದಲಾಯಿತೋ ಗೊತ್ತಿಲ್ಲ. ಆಗ ನಾನು ಬಿಜೆಪಿಯಲ್ಲಿದ್ದೆ. ಆದರೂ ಯಾವುದೇ ಕೆಲಸವೂ ಕಷ್ಟವಾಗಿರಲಿಲ್ಲ. ಆದರೆ ಈಗ ಸ್ವಪಕ್ಷ ಆಡಳಿತದಲ್ಲಿದ್ದರೂ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಸಿದ್ದರಾಮಯ್ಯಗೆ ಕೈ ಮುಗಿದ ಆಮಿರ್ ಖಾನ್; ಮುಂದಿನ ಚಿತ್ರಕ್ಕೆ ಶುಭ ಕೋರಿದ ಸಿದ್ದು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


