Tuesday, November 3, 2026
spot_img
More
    spot_img
    HomeEntertainmentಟಿಕೆಟ್‌ ದರ 200 ರೂ ಮೀರದಂತೆ ಸಿದ್ದು ಸರ್ಕಾರ ಆದೇಶ; ಹೆಸರಿಗಷ್ಟೇ ನಿಯಮ ಎಂದ ಪವನ್‌...

    ಟಿಕೆಟ್‌ ದರ 200 ರೂ ಮೀರದಂತೆ ಸಿದ್ದು ಸರ್ಕಾರ ಆದೇಶ; ಹೆಸರಿಗಷ್ಟೇ ನಿಯಮ ಎಂದ ಪವನ್‌ ಸಿನಿಮಾ!

    ಬೆಂಗಳೂರು: ಹತ್ತು ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲ ಏಕಪರದೆ ಹಾಗೂ ಬಹುಪರದೆ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ ಮೀರಬಾರದು ಎಂಬ ಆದೇಶವನ್ನು ಹೊರಡಿಸಿತ್ತು.

    ಮಲ್ಟಿಪ್ಲೆಕ್ಸ್‌ಗಳು ಮನ ಬಂದಂತೆ ಟಿಕೆಟ್‌ ದರ ವಿಧಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಲಾಗಿತ್ತು. ಹೀಗೆ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಸಿನಿ ಪ್ರಿಯರಲ್ಲಿ ಸಂತಸ ತಂದಿತ್ತು.

    ಆದರೆ ಇಂದು ( ಜುಲೈ 24 ) ಬಿಡುಗಡೆಯಾಗಿರುವ ತೆಲುಗು ನಟ ಪವನ್ ಕಲ್ಯಾಣ್‌ ನಟನೆಯ ಹರಿಹರ ವೀರಮಲ್ಲು ಚಿತ್ರ ಇದ್ಯಾವುದನ್ನೂ ಅನುಸರಿಸದೇ ಮನಬಂದಂತೆ ಟಿಕೆಟ್‌ ದರಗಳನ್ನು ವಿಧಿಸಲಾಗಿದೆ.

    ಬೆಂಗಳೂರಿನ ಅನೇಕ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಟಿಕೆಟ್‌ ದರ 200 ರೂ ಮೀರಿದೆ. ಎಂಎಸ್‌ ನಗರದ ಮುಕುಂದ, ವರ್ತೂರಿನ ವಿನಾಯಕ ಸಿನಿಮಾಸ್‌, ಸಂಜಯ್‌ ನಗರದ ವೈಭವ್‌, ಊರ್ವಶಿ ಸಿನಿಮಾ, ಬಿಎನ್‌ ಪುರದ ಪುಷ್ಪಾಂಜಲಿ ಹೀಗೆ ಅನೇಕ ಸಿಂಗಲ್‌ ಸ್ಕ್ರೀನ್‌ಗಳು 200 ರೂಗಿಂತ ಅಧಿಕ ಹಣ ಪಡೆಯುತ್ತಿದ್ದರೆ, ಮಲ್ಟಿಪ್ಲೆಕ್ಸ್‌ ಕುರಿತು ಮಾತನಾಡುವ ಹಾಗಿಲ್ಲ. 250, 300, 350 ಹೀಗೆ ಮನಬಂದಂತೆ ಟಿಕೆಟ್‌ ದರವನ್ನು ವಿಧಿಸಿವೆ. ಅಲ್ಲಿಗೆ ರಾಜ್ಯ ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದೆ.

    ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಪ್ರಚೋದನೆ ಕೇಸ್‌ ರದ್ದು ಮಾಡಿದ ಹೈಕೋರ್ಟ್; ಕಾರಣವೇನು?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search