ದುಬೈನಲ್ಲಿದ್ದಾಗ ದರ್ಶನ್‌ಗೆ ರಾಘಣ್ಣ ಕರೆ;
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಭವಿಷ್ಯ ಇಂದು ದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ.
ಮೊನ್ನೆಯೇ ಸುಪ್ರೀಂ ಕೋರ್ಟ್ ಈ ಕುರಿತು ಆದೇಶ ಹೊರಡಿಸಬೇಕಿತ್ತು. ಆದರೆ ದರ್ಶನ್ ಪರ ವಕೀಲ ಗೈರಾದ ಕಾರಣ ಇಂದಿಗೆ ಮುಂದೂಡಲ್ಪಟ್ಟಿತ್ತು.
ಹೈಕೋರ್ಟ್ ದರ್ಶನ್‌ಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈಗಾಗಲೇ ಸರ್ಕಾರದ ಪರ ವಕೀಲ ತಮ್ಮ ವಾದವನ್ನು ಮಂಡಿಸಿದ್ದಾರೆ. ದರ್ಶನ್ ಶಸ್ತ್ರಚಿಕಿತ್ಸೆಯ ಕಾರಣವನ್ನು ನೀಡಿ ಜಾಮೀನು ಪಡೆದರು. ಆದರೆ ಇಲ್ಲಿಯವರೆಗೂ ಯಾವುದೇ ಶಸ್ತ್ರಚಿಕಿತ್ಸೆಗೂ ಒಳಗಾಗಿಲ್ಲ ಎಂದು ವಾದಿಸಿದ್ದರು.
ಇನ್ನು ಜಡ್ಜ್ ಹೈಕೋರ್ಟ್ ತರಾತುರಿಯಲ್ಲಿ ವಿವೇಚನೆಯಿಲ್ಲದೇ ಜಾಮೀನು ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನು ದರ್ಶನ್ ಪರ ವಕೀಲರ ವಾದ ಮಾತ್ರ ಬಾಕಿಯಿದೆ. ಹೀಗಾಗಿ ಸದ್ಯ ದರ್ಶನ್ ಪರ ವಕೀಲರು ಜಾಮೀನು ಪಡೆದ ಉದ್ದೇಶವನ್ನು ಸರಿಯಾದ ರೀತಿ ತಿಳಿಸದೇ ಜಡ್ಜ್ ಮನವೊಲಿಸದೇ ಇದ್ದಲ್ಲಿ ಜಾಮೀನು ರದ್ದಾಗಲಿದ್ದು, ದರ್ಶನ್ ಮತ್ತೆ ಜೈಲು ಪಾಲಾಗುವ ಸಾಧ್ಯತೆಗಳಿವೆ.
ಮೊನ್ನೆ ಕಪಿಲ್ ಸಿಬಲ್ ದರ್ಶನ್ ಪರ ವಾದ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ಕೈಕೊಟ್ಟರು. ಬಳಿಕ ಸಿದ್ಧಾರ್ಥ್ ದವೆ ಅವರನ್ನು ನೇಮಿಸಲಾಗಿದ್ದು, ಇವರು ಒಂದು ದಿನ ಕಾಲಾವಕಾಶ ಪಡೆದಿದ್ದರು.
ಡಿಜಿಟಲ್ ಯುಗದಲ್ಲಿ ಮಕ್ಕಳ ದೃಷ್ಟಿ ರಕ್ಷಣೆಗೆ ಉಪಯುಕ್ತ ಯೋಗ ವ್ಯಾಯಾಮಗಳು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


