ಹೊಸದಿಲ್ಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ವಾದಗಳನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಇಂದು ಜಾಮೀನು ರದ್ದತಿ ಅರ್ಜಿ ವಿಚಾರಣೆಯಲ್ಲಿ ಇಂದು ( ಜುಲೈ 24 ) ಅಂತಿಮ ವಾದವನ್ನು ಆಲಿಸಿದ ಜಡ್ಜ್ ವಾದವನ್ನು 3 ಪುಟಗಳಲ್ಲಿ ಲಿಖಿತ ರೂಪದಲ್ಲಿ ಇನ್ನೊಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ಇನ್ನು ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸುವ ವೇಳೆ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸಂದೇಶ ಕಳುಹಿಸಿದ್ದರಿಂದ ಹಿಡಿದು ಕೊಲೆಯವರೆಗೆ ಸಂಪೂರ್ಣ ಘಟನೆಯನ್ನು ಮುಂದಿಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ದರ್ಶನ್ ಇದ್ದರು, ಅವರ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇತ್ತು ಎಂದಿದ್ದಾರೆ. ಅಲ್ಲದೇ ಕೊಲೆಗೆ ಬಳಸಿದ್ದ ವಸ್ತುಗಳೂ ಸಹ ಲಭಿಸಿವೆ ಎಂದು ಹೇಳಿದರು.
ಈ ವೇಳೆ ಘಟನಾ ಸ್ಥಳದಲ್ಲಿ ತೆಗೆದ ಫೋಟೊಗಳನ್ನು ಸಹ ಸಲ್ಲಿಸಲಾಗಿದ್ದು, ಈ ಕುರಿತು ಜಡ್ಜ್ ಪರ್ದಿವಾಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೊಲೆಯ ಬಳಿಕ ಆರೋಪಿಗಳ ಜತೆ ದರ್ಶನ್ ಫೋಟೊ ತೆಗೆಸಿಕೊಂಡ್ರಾ? ಇವರೆಂಥ ವ್ಯಕ್ತಿಗಳು? ಆಕಸ್ಮಿಕ ಫೋಟೊ ಎಂದುಕೊಂಡಿದ್ದೆ ನಂಬಲಾಗ್ತಿಲ್ಲ ಎಂದಿದ್ದಾರೆ.
ತೂಕ ಇಳಿಸಲು ರುಚಿಕರ ಆಯ್ಕೆ ಬೇಕಾ? ಗೋಧಿ ರವೆ ಉಪ್ಪಿಟ್ಟು ಟ್ರೈ ಮಾಡಿ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


