ಮಂಡ್ಯ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಕುರಿತು ಸುದ್ದಿ ಮಾಡುವ ವಿಚಾರವಾಗಿ ಯುನೈಟೆಡ್ ಮೀಡಿಯಾ ಯುಟ್ಯೂಬ್ ಚಾನೆಲ್‌ನ ಅಭಿಷೇಕ್ ತನಗೆ ದುಡ್ಡು ನೀಡಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವಂತೆ ಹೇಳಿದ್ದ ಎಂದು ಆರೋಪಿಸಿದ್ದ ಸುಮಂತ್ ಸದ್ಯ ವೀಕ್ಷಕರ ಮುಂದೆ ಬೆತ್ತಲಾಗಿದ್ದಾನೆ.
ಚಂದನ್ ಗೌಡ ಅವರೂ ಸಹ ಹಣ ಪಡೆದಿದ್ದರು ಎಂದು ಗಂಭೀರ ಆರೋಪ ಮಾಡಿ ಬಳಿಕ ತನ್ನದೇ ಆಡಿಯೊ ಲೀಕ್ ಆದ ಬಳಿಕ ತಾನು ಮಾಡಿದ್ದೆಲ್ಲ ಡ್ರಾಮಾ ಎಂಬುದು ಸಾಬೀತಾದ ಬಳಿಕ ಯಾವುದನ್ನೂ ಸಾಬೀತುಪಡಿಸಲಾಗದೇ ಒದ್ದಾಡುತ್ತಿರುವ ಸುಮಂತ್ ಸದ್ಯ ವಕೀಲರ ಜತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ಎದುರಿಸುತ್ತಿದ್ದಾನೆ.
ಅದೇ ರೀತಿ ನಿನ್ನೆಯೂ ( ಸೆಪ್ಟೆಂಬರ್ 23 ) ಕೆ. ಆರ್ ಪೇಟೆಯ ಪೊಲೀಸ್ ಠಾಣೆಗೆ ಸುಮಂತ್ ವಿಚಾರಣೆಗೆ ಆಗಮಿಸಿದ್ದು, ಈ ವೇಳೆ ಯುನೈಟೆಡ್ ಮೀಡಿಯಾ ಅಭಿ ಠಾಣೆಗೆ ತೆರಳಿ ಅಭಿಯನ್ನು ನೇರವಾಗಿ ತನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಂತೆ ಚಾಲೆಂಜ್ ಹಾಕಿದ್ದಾರೆ.
ಇದಕ್ಕೆ ಉತ್ತರಿಸಲಾಗದೇ ಬೈಟ್ ಬೇಕಾ, ಈಗ ಸಮಯ ಎಷ್ಟು ಎಂದೆಲ್ಲ ಅಸಂಬದ್ಧ ಉತ್ತರಗಳನ್ನು ನೀಡಿದ ಸುಮಂತ್ ಮತ್ತೊಮ್ಮೆ ವೀಕ್ಷಕರ ಮುಂದೆ ನಗೆಪಾಟಲಿಗೀಡಾದ್ದಾನೆ. ಇನ್ನು ಸುಮಂತ್ ಠಾಣೆಯಿಂದ ಹೊರಬರುತ್ತಿದ್ದನ್ನು ವಿಡಿಯೊ ಮಾಡಿಕೊಳ್ಳುತ್ತಾ ಆತನಿಗೆ ನೇರವಾಗಿ ಪ್ರಶ್ನಿಸಿದ ಅಭಿ ನಿನ್ನಂತ ಅಯೋಗ್ಯನಿಂದ ನನಗೆ ಯಾವ ಬೈಟ್ ಸಹ ಬೇಕಿಲ್ಲ, ತಾಕತ್ತಿದ್ದರೆ ಆರೋಪವನ್ನು ಸಾಬೀತು ಮಾಡು ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಅಭಿಷೇಕ್ ಪೊಲೀಸ್ ಠಾಣೆಯಿಂದ ಹೆದರಿ ಓಡಿಹೋದ ಸುಮಂತ ಎಂದು ಬರೆದುಕೊಂಡಿದ್ದಾರೆ.
ಧರ್ಮಸ್ಥಳ: ನನಗೆ ವಿದೇಶದಿಂದ ದುಡ್ಡು ಬಂದಿರೋದು ನಿಜ; ವಿರೋಧಿಗಳನ್ನು ಕಿಚಾಯಿಸಿದ ಯುನೈಟೆಡ್ ಮೀಡಿಯಾ ಅಭಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


