ಮಂಡ್ಯ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಕುರಿತು ಸುದ್ದಿ ಮಾಡಿದ ಹಲವಾರು ಯುಟ್ಯೂಬರ್‌ಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಲು ಹಲವು ಯುಟ್ಯೂಬರ್‌ಗಳಿಗೆ ವಿದೇಶದಿಂದ ಫಂಡಿಂಗ್ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದ ಹಲವರು ಆ ಅನುಮಾನಗಳ ಮೂಲಕವೇ ಆರೋಪವನ್ನು ಮಾಡುವ ಯತ್ನ ಮಾಡಿದರು.
ಈ ಸಲುವಾಗಿ ಹಲವು ಯುಟ್ಯೂಬರ್‌ಗಳ ವಿಚಾರಣೆಯೂ ನಡೆಯಿತು ಹಾಗೂ ಆ ಯುಟ್ಯೂಬರ್‌ಗಳು ವಿಚಾರಣೆಯ ಬಳಿಕ ಮೊದಲಿನಂತೆ ವಿಡಿಯೊ ಮಾಡಲು ಶುರು ಮಾಡಿದ್ದೂ ಆಯಿತು.
ಹೀಗೆ ಆರೋಪ ಕೇಳಿಬಂದ ಯುಟ್ಯೂಬರ್‌ಗಳ ಪೈಕಿ ಯುನೈಟೆಡ್ ಮೀಡಿಯಾ ಯುಟ್ಯೂಬ್ ಚಾನೆಲ್‌ನ ಅಭಿಷೇಕ್ ಪ್ರಮುಖರು. ಹೌದು, ಯುನೈಟೆಡ್ ಮೀಡಿಯಾದ ಅಭಿಷೇಕ್‌ಗೆ ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಎಸ್‌ಐಟಿ ತನಿಖೆ ವೇಳೆ ಅಭಿ ಕಣ್ಣೀರು ಎಂಬ ಸುಳ್ಳು ಸುದ್ದಿಗಳೂ ಸಹ ಪ್ರಸಾರವಾಗಿದ್ದವು.
ಈ ಎಲ್ಲ ಅಂತೆಕಂತೆಗಳನ್ನು ಅಭಿಷೇಕ್ ತನಿಖೆ ಮುಗಿಸಿ ಹೊರಬಂದ ನಂತರ ಸುಳ್ಳು ಎಂದು ತಳ್ಳಿಹಾಕಿದ್ದರು ಹಾಗೂ ಸತ್ಯಾಂಶ ಹೊರಬರಲಿದೆ ಎಂದಿದ್ದರು. ಇದೀಗ ಪಬ್ಲಿಕ್ ಚಾಯ್ಸ್ ಕನ್ನಡ ಎಂಬ ಯುಟ್ಯೂಬ್ ಚಾನೆಲ್ ಮಂಡ್ಯ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರುವ ಅಭಿಷೇಕ್ ಮನೆಗೆ ತೆರಳಿ ಆತನ ಮನೆ ಮುಂದೆ ವಿಡಿಯೊ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಅಭಿಷೇಕ್ ವಿದೇಶದಿಂದ ಹಣ ಬಂದಿರುವ ಆರೋಪದ ಬಗ್ಗೆ ವಿರೋಧಿಗಳನ್ನು ಕಿಚಾಯಿಸಿದ್ದಾರೆ.
ತಮ್ಮ ಮನೆ ಪಕ್ಕದಲ್ಲೇ ಇರುವ ಶಾಲೆಯನ್ನು ತೋರಿಸಿ ಇದು ತಮ್ಮ ತಂದೆ ನಡೆಸಿಕೊಂಡು ಬರುತ್ತಿರುವ ಶಾಲೆಯಾಗಿದ್ದು, ಇದರಿಂದಲೇ ತಮ್ಮ ಜೀವನ ನಡೆದದ್ದು, ಮನೆ ನಿರ್ಮಿಸಿದ್ದು ಎಂದು ತಮ್ಮ ಆದಾಯದ ದೊಡ್ಡ ಮೂಲವನ್ನು ಬಿಚ್ಚಿಟ್ಟರು. ಅಲ್ಲದೇ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅಭಿ ಹೌದು ನನಗೆ ವಿದೇಶದಿಂದ ಹಣ ಬಂದಿರುವುದು ನಿಜ, ಆದರೆ ಅದು ಯುಟ್ಯೂಬ್‌ನ ಆದಾಯ, ಅದೂ ಸಹ ವಿದೇಶದಿಂದಲೇ ಬರುವುದು, ಅದನ್ನು ಬಿಟ್ಟರೆ ನನಗೆ ಇನ್ಯಾವುದೇ ವಿದೇಶಿ ಹಣ ಬಂದಿಲ್ಲ ಎಂದು ವಿರೋಧಿಗಳ ಕಾಲೆಳೆದರು.
ಅಲ್ಲದೇ ಧರ್ಮಸ್ಥಳದ ಕುರಿತು ಆರಂಭದ ದಿನಗಳಲ್ಲಿ ವಿಡಿಯೊ ಮಾಡಲು ತೆರಳಿದಾಗ ತನ್ನ ಓಮಿನಿ ಕಾರಿನಲ್ಲೇ ಮಲಗಿಕೊಳ್ಳುತ್ತಿದ್ದೆ, ಫಂಡಿಂಗ್ ಆಗಿದ್ದರೆ ತಾನೇಕೆ ಅಷ್ಟು ಕಷ್ಟಪಡುತ್ತಿದ್ದೆ ಎಂದ ಅಭಿಷೇಕ್ ಯಾವುದೇ ಹಣ ಬಂದಿಲ್ಲ ಎಂದು ಮತ್ತೊಮ್ಮೆ ನುಡಿದರು.
ಪ್ರಾಪರ್ಟಿ ಮೇಲೆ ಸಾಲ ಎಂದರೇನು?ಪ್ರಾಪರ್ಟಿ ಮೇಲೆ ಸಾಲ ಹೇಗೆ ಕೆಲಸ ಮಾಡುತ್ತದೆ?
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


