ಬೆಂಗಳೂರು: ನಂದಿನ ಉತ್ಪನ್ನಗಳ ಬೆಲೆ ಇಳಿಸಿ ಜನ ಮಾನಸ ಗೆದ್ದಿದ್ದ ಕೆಎಂಎಫ್ ಇದೀಗ ದೇಸಿ ಹಾಲಿನ ದರ ಏರಿಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಏಕಾಏಕಿ ದೇಸಿ ಹಾಲಿನ ಬೆಲೆಯನ್ನು ಏರಿಕೆ ಮಾಡಿ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೀಗಾಗಿ ಸಾರ್ವಜನಿಕರು ಒಂದು ಲೀಟರ್ ದೇಸಿ ಹಾಲಿಗೆ 120 ರೂ, ಅರ್ಧ ಲೀಟರ್ ಹಾಲಿಗೆ 60 ರೂ. ಪಾವತಿಸುವುದು ಅನಿವಾರ್ಯವಾಗಿದೆ.
ಈ ಮೊದಲು ಒಂದು ಲೀಟರ್ ದೇಸಿ ಹಾಲು 80 ರೂ. ಇತ್ತು. ಅರ್ಧ ಲೀಟರ್ 40 ರೂ. ಇತ್ತು. ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಕೆಎಂಎಫ್ ದೇಶಿ ಹಸು ಹಾಲು ಮಾರಾಟಕ್ಕೆ ತೀರ್ಮಾನಿಸಿತ್ತು.
ಬೆಂಗಳೂರು ಡೈರಿಗೆ ಪ್ರತಿದಿನ 3 ಸಾವಿರ ಲೀ ದೇಸಿ ಹಾಲು ಪೂರೈಕೆಯಾಗುತ್ತಿತ್ತು. ಹಾಗೂ ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು.
ದೇಸಿ ಹಸು ದಿನಕ್ಕೆ ಎರಡು ಲೀಟರ್‍ನಷ್ಟು ಗರಿಷ್ಟ ಹಾಲು ಕೊಡುತ್ತಿತ್ತು..ದೇಸಿ ಹಸು ಹಾಲಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದ ಕಾರಣ ಬೆಂಗಳೂರು ಡೈರಿಯಲ್ಲಿ ಮಾತ್ರ ದೇಸಿ ಹಾಲು ಮಾರಾಟ ಮಾಡಲಾಗ್ತಿತ್ತು.
ಇದೀಗ ಹಾಲಿನ ಪೂರೈಕೆ ಕಡಿಮೆ ಆದ ಕಾರಣ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗಿದೆ ಬರುವ ಲಾಭದಲ್ಲಿ ಶೇ. 90ರಷ್ಟು ಹಣವನ್ನು ದೇಸಿ ಹಸು ರೈತರಿಗೆ ಕೊಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರು ದಸರಾ 2025: ಗಜಪಡೆಗೆ ಅಂತಿಮ ಹಂತದ ಸಿಡಿಮದ್ದು ತಾಲೀಮು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


