Tuesday, November 3, 2026
spot_img
More
    spot_img
    HomeEntertainmentʼಕಮ್ಯೂನಿಸ್ಟ್‌ʼ ಆದ ಶಿವಣ್ಣ ನಮಗೆ ಬೇಡ; ಶಿವಣ್ಣನ ಹೊಸ ಅವತಾರಕ್ಕೆ ಭಾರೀ ವಿರೋಧ!

    ʼಕಮ್ಯೂನಿಸ್ಟ್‌ʼ ಆದ ಶಿವಣ್ಣ ನಮಗೆ ಬೇಡ; ಶಿವಣ್ಣನ ಹೊಸ ಅವತಾರಕ್ಕೆ ಭಾರೀ ವಿರೋಧ!

    ದೀಪಾವಳಿ ಹಬ್ಬದ ಪ್ರಯುಕ್ತ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ನಟನೆಯ ಮತ್ತೊಂದು ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.

    ಶಿವರಾಜ್‌ಕುಮಾರ್‌ ನಟನೆಯ ಮುಂದಿನ ಚಿತ್ರದ ಘೋಷಣೆ ಇದಾಗಿದ್ದು, ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಹೌದು, ಶಿವರಾಜ್‌ಕುಮಾರ್‌ ಗುಮ್ಮಡಿ ನರಸಯ್ಯ ಎಂಬ ಚಿತ್ರದಲ್ಲಿ ತೆಲುಗು ರಾಜಕಾರಣಿಯೊಬ್ಬರ ಪಾತ್ರದಲ್ಲಿ ನಟಿಸಲು ಸೈ ಎಂದಿದ್ದು, ಅದರ ಪೋಸ್ಟರ್‌ ಹೊರಬಿದ್ದಿದೆ.

    ಸೈಕಲ್‌ ಏರಿ ಮುಂದೆ ಕಮ್ಯೂನಿಸ್ಟ್‌ ಪಕ್ಷದ ಬಾವುಟ ಹಾಕಿಕೊಂಡು ವಯಸ್ಸಾದ ಲುಕ್‌ನಲ್ಲಿ ಶಿವಣ್ಣ ಗುಮ್ಮಡಿ ನರಸಯ್ಯ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿದ್ದಾರೆ. ಈ ಪೋಸ್ಟರ್‌ ವೈರಲ್‌ ಆಗುತ್ತಿದ್ದಂತೆ ಕೆಲವರು ಶಿವಣ್ಣನ ಲುಕ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟೀಕೆ ಮಾಡಿದ್ದಾರೆ.

    ಕಮ್ಯೂನಿಸ್ಟ್‌ ಪಕ್ಷದ ಎಂಎಲ್‌ಎ ಬಯೋಗ್ರಫಿಯಲ್ಲಿ ನಟಿಸುವಂತಹ ಅಗತ್ಯತೆ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಕಮ್ಯೂನಿಸ್ಟ್‌ ಆದ ಶಿವಣ್ಣ ನಮಗೆ ಬೇಡ, ನೀವು ಮುಂಚಿನ ಹಾಗೆ ಯಾವುದೇ ಉದ್ದೇಶವಿಲ್ಲದ ಮನರಂಜನೆ ಹಾಗೂ ಸಂದೇಶ ನೀಡುವ ಚಿತ್ರಗಳಲ್ಲಿ ಮಾತ್ರ ನಟಿಸಿ ಈ ರೀತಿ ಕಮ್ಯೂನಿಸ್ಟ್‌ ಪಾತ್ರಗಳಲ್ಲಿ ನಟಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇನ್ನು ಈ ಚಿತ್ರ ತೆಲುಗು ಹಾಗೂ ಕನ್ನಡದಲ್ಲಿ ತಯಾರಾಗಲಿದ್ದು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್‌ ಆಗಲಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search