Wednesday, November 4, 2026
spot_img
More
    spot_img
    HomeLatest newsಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಂಧಿಸಿದ ಎಸ್‌ಐಟಿ

    ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಂಧಿಸಿದ ಎಸ್‌ಐಟಿ

    ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದಿಂದ ಕಾಣೆಯಾದ ಚಿನ್ನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

    ಚಿನ್ನ ನಾಪತ್ತೆ ಪ್ರಕರಣದ ನಂತರ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯಿಂದ ಅಮಾನತುಗೊಂಡಿದ್ದ ಬಾಬು ಅವರನ್ನು ತಡರಾತ್ರಿ ಚಂಗನಶ್ಶೇರಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ನಂತರ ಅವರನ್ನು ವಿಚಾರಣೆಗಾಗಿ ತಿರುವನಂತಪುರಂನಲ್ಲಿರುವ ಅಪರಾಧ ಶಾಖೆಯ ಕಚೇರಿಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಾಬು ಅವರ ಸಂಬಂಧಿಕರು ಬೆಳಿಗ್ಗೆ ಅಪರಾಧ ಶಾಖೆಯ ಕಚೇರಿಗೆ ತಲುಪಿದರು.ದ್ವಾರಪಾಲಕ (ರಕ್ಷಕ ದೇವರು) ವಿಗ್ರಹಗಳ ಚಿನ್ನದ ಹೊದಿಕೆಯ ತಟ್ಟೆಗಳು ಮತ್ತು ದೇವಾಲಯದ ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲು ಚೌಕಟ್ಟುಗಳಿಂದ ಚಿನ್ನ ನಾಪತ್ತೆಯಾದ ಎರಡು ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದಾರೆ.

    2019 ರಲ್ಲಿ, ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪಾಟಿ, ದ್ವಾರಪಾಲಕ ವಿಗ್ರಹಗಳಿಗೆ ಎಲೆಕ್ಟ್ರೋಪ್ಲೇಟಿಂಗ್‌ ಮಾಡಲು ಟಿಡಿಬಿಗೆ ಪ್ರಸ್ತಾವನೆ ಸಲ್ಲಿಸಿದಾಗ, ಬಾಬು ಆ ಪ್ರಸ್ತಾವನೆಯನ್ನು ಮಂಡಳಿಗೆ ರವಾನಿಸಿದರು, ಚಿನ್ನದ ಹೊದಿಕೆಯ ತಟ್ಟೆಗಳು ತಾಮ್ರದಿಂದ ಮಾಡಲ್ಪಟ್ಟಿವೆ ಎಂದು ಹೇಳಿಕೊಂಡರು.2025 ರಲ್ಲಿ ಅವರು ಪಾಟಿಯಿಂದ ಮತ್ತೆ ಇದೇ ರೀತಿಯ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚೆಗೆ ಸೇವೆಯಿಂದ ಅಮಾನತುಗೊಂಡಾಗ ಬಾಬು ಹರಿಪಾಡ್‌ನಲ್ಲಿ ಉಪ ದೇವಸ್ವಂ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.ಪ್ರಾಥಮಿಕ ತನಿಖೆ ನಡೆಸಿದ ಟಿಡಿಬಿ ವಿಜಿಲೆನ್‌್ಸ, ದ್ವಾರಪಾಲಕ ವಿಗ್ರಹಗಳು ಮತ್ತು ಶ್ರೀಕೋವಿಲ್‌ನ ಬಾಗಿಲು ಚೌಕಟ್ಟುಗಳಿಂದ ಚಿನ್ನವನ್ನು ತೆಗೆಯುವಲ್ಲಿ ಕೆಲವು ಮಂಡಳಿಯ ಅಧಿಕಾರಿಗಳ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸುವ ವರದಿಯನ್ನು ಸಲ್ಲಿಸಿತ್ತು.

    ಪಾಟಿಗೆ ಚಿನ್ನದ ಹೊದಿಕೆಯ ತಟ್ಟೆಗಳನ್ನು ಹಸ್ತಾಂತರಿಸುವಲ್ಲಿ ಬಾಬು ಮತ್ತು ಇತರ ಏಳು ಟಿಡಿಬಿ ಅಧಿಕಾರಿಗಳ ಗಂಭೀರ ಲೋಪಗಳನ್ನು ವಿಜಿಲೆನ್ಸ್ ಸಹ ಎತ್ತಿ ತೋರಿಸಿದೆ.

    ಬೆಂಗಳೂರಿಗರೇ ಗಮನಿಸಿ: ಈ 2 ದಿನಗಳ ಕಾಲ ಇಲ್ಲ ಬೆಸ್ಕಾಂ ಆನ್‌ಲೈನ್‌ ಸೇವೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search