ಬೆಂಗಳೂರು: ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕಿನ ಕಪ್ಪಲಗುತ್ತಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ಪಕ್ಷವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಈ ಹೇಳಿಕೆ ಬಂದ ಬೆನ್ನಲ್ಲೇ ಡಿಕೆ ಶಿವಕುಮಾರ್ರತ್ತ ಎಲ್ಲರ ಗಮನ ಸಾಗಿದ್ದು, ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಳಿಕ ಪಕ್ಷವನ್ನು ಮುನ್ನಡೆಸುವುದಿಲ್ಲವೇ ಎಂಬ ಅನುಮಾನ ಶುರುವಾಗಿದೆ.
ಇನ್ನು ಡಿಕೆ ಶಿವಕುಮಾರ್ ಸಹ ಈ ಕುರಿತು ಪ್ರತಿಕ್ರಿಯಿಸಿದ್ದು, ಪದೇ ಪದೇ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವ ಯತೀಂದ್ರ ಸಿದ್ದರಾಮಯ್ಯನವರಿಗೂ ಸಹ ನೋಟಿಸ್ ಕೊಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈಗ ನಾನು ಈ ಕುರಿತು ಹೆಚ್ಚೇನೂ ಮಾತನಾಡುವುದಿಲ್ಲ, ಯಾರ ಹತ್ತಿರ ಮಾತನಾಡಬೇಕೋ ಅವರ ಹತ್ರ ಮಾತನಾಡುತ್ತೇನೆ ಎಂದು ಗಂಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಯತೀಂದ್ರ ಸಿದ್ದರಾಮಯ್ಯಗೂ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂಬುದನ್ನು ಡಿಕೆ ಪರೋಕ್ಷವಾಗಿ ತಿಳಿಸದಂತಿದೆ.
ಬೆಂಗಳೂರಿಗರೇ ಗಮನಿಸಿ: ಈ 2 ದಿನಗಳ ಕಾಲ ಇಲ್ಲ ಬೆಸ್ಕಾಂ ಆನ್ಲೈನ್ ಸೇವೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


