ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಎಂಬಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್ನ ಎಸಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿದೆ.
ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಬೈಕ್ಗೆ ಡಿಕ್ಕಿಯಾದ ಬಸ್ನಲ್ಲಿ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಬಸ್ ಸುಟ್ಟು ಕರಕಲಾಗಿದೆ.
ಇನ್ನು ಬಸ್ನಲ್ಲಿ ಡ್ರೈವರ್ ಹಾಗೂ ಕ್ಲೀನರ್ ಸೇರಿ ಒಟ್ಟು 42 ಮಂದಿ ಪ್ರಯಾಣ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದ್ದು ಈ ಪೈಕಿ 20 ಮಂದಿ ಸಜೀವದಹನವಾಗಿದ್ದಾರೆ.
ಇನ್ನು ಉಳಿದ ಪ್ರಯಾಣಿಕರು ಬದುಕುಳಿದಿದ್ದು, ಈ ಪೈಕಿ ಬದುಕುಳಿದ ಪ್ರಯಾಣಿಕ ಶಿವು ಗ್ಯಾರಂಟಿ ನ್ಯೂಸ್ ಜತೆ ದೂರವಾಣಿ ಕರೆಯಲ್ಲಿ ಮಾತನಾಡಿ ಅಪಘಾತದ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಬಸ್ನಲ್ಲಿದ್ದ ಶಿವು ದೊಡ್ಡ ಶಬ್ದವೊಂದು ಕೇಳಿಬಂದ ಕೂಡಲೇ ಬಸ್ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತು ಎಂದಿದ್ದಾರೆ.
ಮೊದಲಿಗೆ ಬೈಕ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಬಸ್ ಚಾಲಕ ಕೆಲ ದೂರ ಬಸ್ ಚಲಾಯಿಸಿದ್ದಾನೆ, ಈ ಸಂದರ್ಭದಲ್ಲಿ ಡೀಸೆಲ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಿವು ತಿಳಿಸಿದ್ದಾರೆ. ಇನ್ನು ಬೆಂಕಿ ಕಾಣಿಸಿಕೊಂಡ ಕೂಡಲೇ ಡ್ರೈವರ್ ಹಾಗೂ ಕ್ಲೀನರ್ ಬಸ್ನಿಂದ ಇಳಿದು ಓಡಿಹೋಗಿದ್ದು, ಒಳಗಿದ್ದ ಪ್ರಯಾಣಿಕರಾರಿಗೂ ಬಸ್ಗೆ ಬೆಂಕಿ ತಗುಲಿರುವ ವಿಷಯವನ್ನು ತಿಳಿಸಿಯೇ ಇಲ್ಲ, ಸುಮಾರು ಐದು ನಿಮಿಷಗಳ ಬಳಿಕ ವಿಷಯ ತಿಳಿದುಬಂತು ಎಂದು ತಿಳಿಸಿದ್ದಾರೆ.
ಸ್ಲೀಪರ್ ಬಸ್ ಆಗಿದ್ದ ಕಾರಣ ಪ್ರಯಾಣಿಕರೆಲ್ಲರೂ ಗಾಢ ನಿದ್ರೆಯಲ್ಲಿರುತ್ತಾರೆ ಎಂಬ ವಿಷಯ ಅರಿತಿದ್ದ ಡ್ರೈವರ್ ಹಾಗೂ ಕ್ಲೀನರ್ ಎಚ್ಚರವಿದ್ದು, ಬಸ್ಗೆ ಬೆಂಕಿ ತಗುಲಿದ ವಿಷಯ ಗೊತ್ತಾದ ಕೂಡಲೇ ಯಾರಾದರೊಬ್ಬರು ಪ್ರಯಾಣಿಕರಿಗೆ ವಿಷಯವನ್ನು ಮುಟ್ಟಿಸುವ ಪ್ರಯತ್ನ ಮಾಡಬಹುದಿತ್ತು. ಒಂದುವೇಳೆ ಈ ಇಬ್ಬರು ಎಡವಟ್ಟು ಮಾಡದೇ ಮಾಹಿತಿ ನೀಡಿದ್ದರೆ ಬಹುಶಃ ಇನ್ನೂ ಒಂದಷ್ಟು ಪ್ರಯಾಣಿಕರು ಜೀವ ಉಳಿಸಿಕೊಳ್ಳುವ ಸಾಧ್ಯತೆ ಇತ್ತು.
ಬೆಂಗಳೂರಿಗರೇ ಗಮನಿಸಿ: ಈ 2 ದಿನಗಳ ಕಾಲ ಇಲ್ಲ ಬೆಸ್ಕಾಂ ಆನ್ಲೈನ್ ಸೇವೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


