ಅಕ್ಟೋಬರ್ 2ರಂದು ಬಿಡುಗಡೆಯಾದ ಕಾಂತಾರ ಚಾಪ್ಟರ್ 1 ಚಿತ್ರ ಸದ್ಯ ಮೂರು ವಾರಗಳನ್ನು ಪೂರೈಸಿ ಯಶಸ್ವಿ ನಾಲ್ಕನೇ ವಾರಕ್ಕೆ ಕಾಲಿರಿಸಿದೆ.
ಬಿಡುಗಡೆಗೂ ಮುನ್ನ ಹುಟ್ಟುಹಾಕಿದ್ದ ಬೃಹತ್ ನಿರೀಕ್ಷೆಯನ್ನು ಹುಸಿ ಮಾಡದ ಕಾಂತಾರ ಚಾಪ್ಟರ್ 1 ಮೊದಲ ಶೋ ಮುಗಿಯುತ್ತಿದ್ದಂತೆಯೇ ಬ್ಲಾಕ್ಬಸ್ಟರ್ ಪಟ್ಟ ಗಿಟ್ಟಿಸಿಕೊಂಡಿತು.
2022ರಲ್ಲಿ ಕಾಂತಾರ ಮೂಲಕ ದೊಡ್ಡ ಗೆಲುವು ಕಂಡಿದ್ದ ರಿಷಬ್ ಶೆಟ್ಟಿ ಈ ಬಾರಿಯೂ ಸಹ ಅಂತಹದ್ದೇ ಪರಿಣಾಮ ಬೀರಿದ್ದು, ಜನರನ್ನು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಎಳೆತರುವಲ್ಲಿ ಯಶಸ್ವಿಯಾಗಿದ್ದಾರೆ. ಒಳ್ಳೆಯ ಪ್ರಶಂಸೆ ಗಳಿಸಿರುವ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿಯೂ ಸಹ ಒಳ್ಳೆಯ ಗಳಿಕೆಯನ್ನು ಮಾಡಿದೆ.
ಮೊದಲ ವಾರ ವಿಶ್ವದಾದ್ಯಂತ 509.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಕಾಂತಾರ ಚಾಪ್ಟರ್ 1 ಚಿತ್ರ ಎರಡು ವಾರ ಪೂರೈಸುವಷ್ಟರಲ್ಲಿ 717.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ಮೂರನೇ ವಾರ ಪೂರೈಸಿರುವ ಕಾಂತಾರ ಚಾಪ್ಟರ್ 1 ಒಟ್ಟು 818 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಮೂಲಕ ಕಾಂತಾರ ಚಾಪ್ಟರ್ 1 810 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ 2025ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದ್ದ ಛಾವಾ ಚಿತ್ರವನ್ನು ಹಿಂದಿಕ್ಕಿ ವರ್ಷದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ.
ಬೆಂಗಳೂರಿಗರೇ ಗಮನಿಸಿ: ಈ 2 ದಿನಗಳ ಕಾಲ ಇಲ್ಲ ಬೆಸ್ಕಾಂ ಆನ್ಲೈನ್ ಸೇವೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


