Monday, November 2, 2026
spot_img
More
    spot_img
    HomeEntertainmentಬೈಕ್‌ಗೆ ಕಾರು ಗುದ್ದಿಸಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಪರಾರಿ; ಹಿಟ್‌ ಅಂಡ್‌ ರನ್‌...

    ಬೈಕ್‌ಗೆ ಕಾರು ಗುದ್ದಿಸಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಪರಾರಿ; ಹಿಟ್‌ ಅಂಡ್‌ ರನ್‌ ಕೇಸ್‌ ದಾಖಲು

    ಬೆಂಗಳೂರು: ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ಹೆಸರು ಇದೀಗ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಕೇಳಿಬಂದಿದೆ.

    ನಗರದ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ನಟಿ ದಿವ್ಯಾ ಸುರೇಶ್‌ ವಿರುದ್ಧ ಹಿಟ್‌ ಅಂಡ್‌ ರನ್‌ ಪ್ರಕರಣ ದಾಖಲಾಗಿದೆ. ಕಿರಣ್‌ ಎಂಬುವರು ಪ್ರಕರಣ ದಾಖಲಿಸಿದ್ದು, ಘಟನೆ ಅಕ್ಟೋಬರ್‌ 4ರಂದು ನಡೆದಿದೆ ಎಂದು ತಿಳಿದುಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಿವ್ಯಾ ಸುರೇಶ್‌ ಕಾರು ಚಲಾಯಿಸುತ್ತಿದ್ದದ್ದು ಖಾತರಿಯಾಗಿದೆ ಎನ್ನಲಾಗಿದೆ.

    ಅಕ್ಟೋಬರ್‌ 4ರಂದು ಅನುಷಾ, ಅನಿತಾ ಹಾಗೂ ಕಿರಣ್‌ ಮೂವರು ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದಿವ್ಯಾ ಸುರೇಶ್‌ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಆ ಸಮಯದಲ್ಲಿ ಮೂವರೂ ಕೆಳಗೆಬಿದ್ದಿದ್ದು, ಆದರೂ ನಟಿ ಕಾರನ್ನು ನಿಲ್ಲಿಸದೇ ಅಲ್ಲಿಂದ ತೆರಳಿದ್ದಾರೆ. ಅಪಘಾತದಲ್ಲಿ ಅನುಷಾ ಹಾಗೂ ಕಿರಣ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅನಿತಾ ಎಂಬುವರ ಮಂಡಿ ಚಿಪ್ಪು ನಜ್ಜುಗುಜ್ಜಾಗಿದೆ.

    ಈ ಸಂಬಂಧ ಕಿರಣ್‌ ಅಕ್ಟೋಬರ್‌ 7ರಂದು ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಕ್ಕೊಳಗಾದ ಅನಿತಾಗೆ ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಲಾಗಿದ್ದು, 2 ಲಕ್ಷ ರೂಪಾಯಿ ವೆಚ್ಚವಾಗಿದೆ. ಇಷ್ಟಾದರೂ ದಿವ್ಯಾ ಸುರೇಶ್‌ ಮಾತ್ರ ಗಾಯಾಳುಗಳನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ.

    ಪ್ರಕರಣದ ಕುರಿತು ಮಾತನಾಡಿದ ಡಿಸಿಪಿ ಅನೂಪ್‌ ಬ್ಯಾಟರಾಯನಪುರ ಸಮೀಪದ ಎಂಎಂ ರಸ್ತೆಯಲ್ಲಿ ಅಕ್ಟೋಬರ್‌ 4ರಂದು ಅಪಘಾತ ಸಂಭವಿಸಿದ್ದು, ಮೊದಲೆರಡು ದಿನ ಯಾವುದೇ ದೂರು ದಾಖಲಾಗಿರಲಿಲ್ಲ. ಬಳಿಕ 7ರಂದು ಕಿರಣ್‌ ಎಂಬುವರು ದೂರು ನೀಡಿದ್ದಾರೆ. ತನಿಖೆಯಲ್ಲಿ ದಿವ್ಯಾ ಸುರೇಶ್‌ ಕಾರಿನಿಂದ ಅಪಘಾತವಾಗಿರುವುದು ಖಚಿತವಾಗಿದೆ. ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

    ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತ ತಂಡದಲ್ಲಿ ಬದಲಾವಣೆ; ಕುಲ್‌ದೀಪ್‌ಗಾಗಿ ಈ ಇಬ್ಬರಲ್ಲಿ ಜಾಗ ಬಿಟ್ಟು ಕೊಡುವವರಾರು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search