Friday, November 6, 2026
spot_img
More
    spot_img
    HomeLatest newsಪ್ರತಾಪ್‌ ಸಿಂಹ ತಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನಾನು ಸುಂದರವಾಗಿ ಹುಟ್ಟುತ್ತಿದ್ದೆನಂತೆ; ಸಿಂಹಗೆ ಪ್ರದೀಪ್‌ ಈಶ್ವರ್‌ ಟಾಂಗ್‌

    ಪ್ರತಾಪ್‌ ಸಿಂಹ ತಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನಾನು ಸುಂದರವಾಗಿ ಹುಟ್ಟುತ್ತಿದ್ದೆನಂತೆ; ಸಿಂಹಗೆ ಪ್ರದೀಪ್‌ ಈಶ್ವರ್‌ ಟಾಂಗ್‌

    ಬೆಂಗಳೂರು: ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ಪ್ರದೀಪ್‌ ಈಶ್ವರ್‌ ಮಾತಿನ ಜಟಾಪಟಿ ಮಿತಿಮೀರಿದ್ದು, ವೈಯಕ್ತಿಕ ಟೀಕೆಗಳು ಹೀನಾಯ ಹಂತ ತಲುಪಿವೆ.

    ತಂದೆ, ತಾಯಿ ಹಾಗೂ ಹುಟ್ಟಿನ ವಿಚಾರಗಳನ್ನು ತೆಗೆದುಕೊಂಡು ಇಬ್ಬರೂ ಕೆಸರೆರಚಾಟ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್‌ ಸಿಂಹ ಪ್ರದೀಪ್‌ ಈಶ್ವರ್‌ ತನ್ನ ತಾಯಿ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ತನ್ನ ತಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ ಎಂದು ಟೀಕಿಸಿದ್ದಾರೆ.

    ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರದೀಪ್‌ ಈಶ್ವರ್‌ ʼಪ್ರತಾಪ್‌ ಸಿಂಹ ಅವರ ತಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನಾನು ಸುಂದರವಾಗಿ ಹುಟ್ಟುತ್ತಾ ಇದ್ದೆನಂತೆ. ನಮ್ಮ ತಂದೆ ನಿಮ್ಮೂರಿಗೆ ಬರಲಿಲ್ಲ ಅಂತ ಬೇಜಾರಾ? ನಾನು ಕಳುಹಿಸುವುದಕ್ಕೆ ರೆಡಿಯಿಲ್ಲ ಗುರೂ. ನಮ್ಮದು ಸಂಪ್ರದಾಯಸ್ಥ ಕುಟುಂಬʼ ಎಂದು ತಿರುಗೇಟು ನೀಡಿದರು.

    ಇನ್ನು ತನ್ನನ್ನು ಕತ್ತಲಲ್ಲಿ ಕಾಣುವುದಿಲ್ಲ, ಬೆಳಕಲ್ಲಿ ಹೊಳೆಯುವುದಿಲ್ಲ ಎಂದು ಹೇಳಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ ಪ್ರದೀಪ್‌ ಈಶ್ವರ್‌ ಕತ್ತಲಲ್ಲಿ ಯಾಕೆ ಹುಡುಕುತ್ತೀಯ? ಬೆಳಕಲ್ಲಿ ಹುಡುಕಿದ್ದಿದ್ದರೆ ಎಂಪಿ ಟಿಕೆಟ್‌ ಸಿಕ್ಕಿರೋದು. ಏನು ಬರಗಾಲ ನಿನಗೆ ಬೇಜಾರಾಗುತ್ತೆ ಗುರು ಎಂದು ಹೇಳಿದರು.

    ಅಲ್ಲದೇ ಗೌಡರು ತನ್ನನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಕ್ಕೆ ಪ್ರತಿಕ್ರಿಯಿಸಿ ಗೌಡರಿಗೆ ನಾನು ಏನು ಮಾಡಿದ್ದೇನೆ ಎನ್ನುವುದು ನನಗೆ ಗೊತ್ತು, ಮೂವರು ಇನ್ಸ್ಪೆಕ್ಟರ್‌ಗಳು, 2500 ಗೌಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದೇನೆ. ಓರ್ವ ಗೌಡನಾಗಿ ನೀನು ನಿನ್ನ ಸಮುದಾಯಕ್ಕೆ ಏನು ಮಾಡಿದ್ದೀಯ ಎಂದು ಪ್ರಶ್ನೆ ಹಾಕಿದರು.

    ವಾಯುಭಾರ ಕುಸಿತ; ಮುಂದಿನ ಒಂದು ವಾರ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search