Saturday, November 7, 2026
spot_img
More
    spot_img
    HomeLatest newsಮುಳ್ಳಂದಿ ಮುಖದ ಪ್ರದೀಪ್‌ ಈಶ್ವರ್‌ ನಮ್ಮಪ್ಪ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ ಎಂದ ಪ್ರತಾಪ್‌...

    ಮುಳ್ಳಂದಿ ಮುಖದ ಪ್ರದೀಪ್‌ ಈಶ್ವರ್‌ ನಮ್ಮಪ್ಪ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ ಎಂದ ಪ್ರತಾಪ್‌ ಸಿಂಹ!

    ಮೈಸೂರು: ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಮಾಜಿ ಸಂಸದ ಪ್ರತಾಪ್‌ ಸಿಂಹ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇಲ್ಲಿಯವರೆಗೆ ರಾಜಕೀಯ ವಿಷಯಗಳ ಕುರಿತು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದ ಈ ಇಬ್ಬರು ಇದೀಗ ತಾಯಿ, ತಂದೆ, ಹುಟ್ಟು ಎಂದೆಲ್ಲ ಕೆಳಮಟ್ಟದ ವಾಕ್ಸಮರಕ್ಕೆ ಇಳಿದಿದ್ದಾರೆ.

    ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ ಪ್ರಿಯಾಂಕ್‌ ಖರ್ಗೆ ಕುರಿತು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದ ಪ್ರತಾಪ್‌ ಸಿಂಹ ಪ್ರದೀಪ್‌ ಈಶ್ವರ್‌ ಕುರಿತು ಪ್ರಶ್ನೆ ಎದುರಾಗುತ್ತಿದ್ದಂತೆ ತಮ್ಮ ತಾಯಿ ಬಗ್ಗೆ ಮೊನ್ನೆ ನಿಂದನೆಯ ಮಾತುಗಳನ್ನಾಡಿದ್ದಾನೆ ಎಂದು ಕಿಡಿಕಾರಿದರು.

    ಈ ಪ್ರದೀಪ್‌ ಈಶ್ವರ್‌ ಕತ್ತಲಲ್ಲಿ ಕಾಣಲ್ಲ ಬೆಳಕಲ್ಲಿ ಹೊಳೆಯಲ್ಲ ಎಂದು ವರ್ಣಭೇದ ಮಾಡಿದ ಪ್ರತಾಪ್‌ ಸಿಂಹ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್‌ ಹಾಗೂ ನಿಜಲಿಂಗಪ್ಪನವರ ಕಾಲದಲ್ಲಿ ಪರಸ್ಪರ ಸೌಜನ್ಯದಿಂದ, ಸಭ್ಯತೆಯಿಂದ ಹಾಗೂ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಆದರೆ ಇವತ್ತು ನೀಚ ಮಟ್ಟಕ್ಕಿಳಿದು ವೈಯಕ್ತಿಕ ನಿಂದನೆ ಮಾಡುವಂತಹ ಸನ್ನಿವೇಶದಲ್ಲಿ ನಾವೆಲ್ಲ ಇದ್ದೇವೆ ಎಂದು ಹೇಳಿದರು.

    ಮೊನ್ನೆ ನನ್ನ ತಾಯಿ ಬಗ್ಗೆ ತುಚ್ಛವಾಗಿ ಹೇಳಿಕೆ ಕೊಟ್ಟಿರುವ ಪ್ರದೀಪ್‌ ಈಶ್ವರ್‌ಗೆ ನಾನು ಅವನದೇ ಭಾಷೆಯಲ್ಲಿ ಕಡೆಯದಾಗಿ ಉತ್ತರವನ್ನು ಕೊಡುತ್ತೇನೆ ದಯವಿಟ್ಟು ಕರ್ನಾಟಕದ ಮಹಾಜನತೆ ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ ಎಂದು ಪ್ರತಾಪ್‌ ಸಿಂಹ ಮನವಿ ಮಾಡಿಕೊಂಡರು.

    ಕಲ್ಲು ಬೀಸಿದರೆ ವಾಪಸ್‌ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಕಲ್ಲನ್ನೇ ಬೀಸಾಡಬೇಕಾಗುತ್ತೆ, ಪ್ರದೀಪ್‌ ಈಶ್ವರ್‌ನಂಥವರಿಗೆ ಇದು ಅರ್ಥವಾಗಲ್ಲ, ಹೀಗಾಗಿ ಅವನ ಭಾಷೆಯಲ್ಲೇ ಉತ್ತರವನ್ನು ಕೊಡುತ್ತೇನೆ. ಪ್ರದೀಪ್‌ ಈಶ್ವರ ನೀನು ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಚಿಕ್ಕಬಳ್ಳಾಪುರದ ಗೌಡರು ಸುಧಾಕರ್ ಅವರ ಜತೆಗಿನ ಮುನಿಸಿನಿಂದ ನಿನ್ನಂಥ ತಲೆಕೆಟ್ಟವನನ್ನು ಗೆಲ್ಲಿಸಿದ್ದೇವೆ ಅವರಿಗೆ ಅರಿವಾಗಿದೆ, ಮುಂದಿನ ಬಾರಿ ಗೌಡರು ಹಾಗೂ ಬಲಿಜಿಗರು ಸೇರಿಕೊಂಡು ನಿನ್ನನ್ನು ಹೊಡೆದು ಓಡಿಸುತ್ತಾರೆ ಬಿಡು ಎಂದು ಭವಿಷ್ಯ ನುಡಿದರು.

    ಇನ್ನೂ ಮುಂದುವರಿದು ಮಾತನಾಡಿದ ಪ್ರತಾಪ್‌ ಸಿಂಹ ʼಪ್ರದೀಪ್‌ ಈಶ್ವರ ಮುಳ್ಳಂದಿ ಮುಖ ಇರುವ ಕರ್ನಾಟಕದ ಕಾಮಿಡಿ ಪೀಸು ನಿಮ್ಮಪ್ಪನಿಗೆ ಮಾತ್ರ ಹುಟ್ಟಿರೋದು, ಇನ್ಯಾರು ವಾರಸುದಾರರು ಅದಕ್ಕೆ ಬರಲ್ಲ. ನಿನ್ನ ಆಸ್ತಿ ಕೇಳೋಕೆ ಯಾರು ಬರಲ್ಲ, ಆ ಕಾಮಿಡಿಪೀಸು ಕರ್ನಾಟಕದಲ್ಲಿ ಒಂದೇ ಇರೋದು. ಅದು ನಿಮ್ಮಪ್ಪನಿಗೆ ಮಾತ್ರ ಹುಟ್ಟಿರೋದು. ಆದರೆ ನಮ್ಮಪ್ಪ ಏನಾದರೂ ಪ್ರಾಯದಲ್ಲಿ ಚಿಕ್ಕಬಳ್ಳಾಪುರ ಕಡೆ ಏನಾದ್ರೂ ಹೋಗಿದ್ದಿದ್ರೆ ನೀನು ಬಹಳ ಸುಂದರವಾಗಿ ಹುಟ್ಟುತ್ತಿದ್ದೆ. ಇನ್ನೊಂದು ಬಾರಿ ವೈಯಕ್ತಿಕವಾಗಿ ಮಾತನಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಇರಬೇಕು ಮಗನೇ. ಇದನ್ನು ವಾರ್ನಿಂಗ್‌ ಕೊಟ್ಟು ಹೇಳ್ತಾ ಇದ್ದೇನೆʼ ಎಂದರು.

    ವಾಯುಭಾರ ಕುಸಿತ; ಮುಂದಿನ ಒಂದು ವಾರ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search