Wednesday, November 4, 2026
spot_img
More
    spot_img
    HomeLatest newsಈ ಗ್ರಾಮದಲ್ಲಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ಬ್ಯಾನ್! ಕೀಪ್ಯಾಡ್ ಫೋನ್ ಮಾತ್ರ ಅನುಮತಿ

    ಈ ಗ್ರಾಮದಲ್ಲಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ಬ್ಯಾನ್! ಕೀಪ್ಯಾಡ್ ಫೋನ್ ಮಾತ್ರ ಅನುಮತಿ

    ಒಂದು ಕಡೆ ಇಡೀ ದೇಶ ‘ಡಿಜಿಟಲ್ ಇಂಡಿಯಾ’ ಎಂದು ಮುನ್ನುಗ್ಗುತ್ತಿದ್ದರೆ, ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಮಾತ್ರ ಕಾಲಚಕ್ರ 18ನೇ ಶತಮಾನಕ್ಕೆ ಉರುಳಿದಂತಿದೆ ಇಲ್ಲಿನ ಚೌಧರಿ ಸಮುದಾಯದ ಪಂಚಾಯತ್ ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ‘ತಾಲಿಬಾನಿ’ ಮಾದರಿಯ ವಿಲಕ್ಷಣ ಆದೇಶವೊಂದನ್ನು ಹೇರಿ ಸುದ್ದಿಯಾಗಿದೆ.

    ಬರುವ ಜನವರಿ 26ರ ಗಣರಾಜ್ಯೋತ್ಸವದಂದೇ ಈ ಕರಾಳ ನಿಯಮ ಜಾರಿಗೆ ಬರುತ್ತಿದ್ದು, ತನ್ನ ವ್ಯಾಪ್ತಿಯ 15 ಹಳ್ಳಿಗಳ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಧುನಿಕ ಯುಗದಲ್ಲಿ ಮಹಿಳೆಯರ ಸಂವಹನಕ್ಕೆ ಬೇಲಿ ಹಾಕಿರುವ ಪಂಚಾಯತ್‌ನ ಈ ನಡೆ ಈಗ ದೇಶಾದ್ಯಂತ ಭಾರೀ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.

    ಬರುವ ಜನವರಿ 26 ರಿಂದ ಜಾರಿಗೆ ಬರುವಂತೆ, ಜಲೋರ್ ಜಿಲ್ಲೆಯ 15 ಹಳ್ಳಿಗಳಲ್ಲಿ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಬಳಸುವಂತಿಲ್ಲ ಒಂದು ವೇಳೆ ಫೋನ್ ಬಳಸಲೇಬೇಕೆಂದಿದ್ದರೆ, ಅವರು ಕೇವಲ ಹಳೆಯ ಕಾಲದ ಕೀಪ್ಯಾಡ್ ಫೋನ್ಗಳನ್ನು ಮಾತ್ರ ಬಳಸಬೇಕು ಎಂದು ಫರ್ಮಾನು ಹೊರಡಿಸಲಾಗಿದೆ.

    ಪಂಚಾಯತ್ ಆದೇಶದ ಮುಖ್ಯಾಂಶಗಳು:
    ಕೀಪ್ಯಾಡ್ ಫೋನ್ ಮಾತ್ರ: ಮಹಿಳೆಯರು ಮತ್ತು ಯುವತಿಯರು ಕೇವಲ ಕರೆ ಮಾಡಲು ಸೀಮಿತವಾದ ಬೇಸಿಕ್ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕು.

    ಸಾರ್ವಜನಿಕವಾಗಿ ಮೊಬೈಲ್ ನಿಷೇಧ: ಮದುವೆ, ಸಾಮಾಜಿಕ ಸಮಾರಂಭಗಳು ಅಥವಾ ನೆರೆಹೊರೆಯವರ ಮನೆಗೆ ಹೋಗುವಾಗಲೂ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ.

    ವಿದ್ಯಾರ್ಥಿನಿಯರಿಗೂ ನಿಯಮ: ಶಾಲಾ-ಕಾಲೇಜಿಗೆ ಹೋಗುವ ಹುಡುಗಿಯರು ಶಿಕ್ಷಣದ ಉದ್ದೇಶಕ್ಕಾಗಿ ಫೋನ್ ಬಳಸಬೇಕಿದ್ದರೆ, ಅದನ್ನು ಮನೆಯಲ್ಲೇ ಬಳಸಬೇಕು. ಯಾವುದೇ ಕಾರಣಕ್ಕೂ ಫೋನ್ ಅನ್ನು ಮನೆಯಿಂದ ಹೊರಗೆ ತರುವಂತಿಲ್ಲ.

    ಪಂಚಾಯತ್ ನೀಡುತ್ತಿರುವ ‘ಲಾಜಿಕ್’ ಏನು?
    ಈ ವಿಲಕ್ಷಣ ನಿರ್ಧಾರದ ಬಗ್ಗೆ ಮಾತನಾಡಿದ 14 ಉಪವಿಭಾಗಗಳ ಅಧ್ಯಕ್ಷ ಸುಜ್ನಾರಾಮ್ ಚೌಧರಿ, ಮಹಿಳೆಯರು ಮನೆಯ ಕೆಲಸ ಮಾಡುವಾಗ ಮಕ್ಕಳನ್ನು ಸುಮ್ಮನಿರಿಸಲು ಫೋನ್ ನೀಡುತ್ತಾರೆ. ಇದರಿಂದ ಮಕ್ಕಳ ಕಣ್ಣು ಹಾಳಾಗುತ್ತಿದೆ ಮತ್ತು ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಇದನ್ನು ತಡೆಯಲು ಈ ಕ್ರಮ ಅನಿವಾರ್ಯ, ಎಂದು ಸಮರ್ಥಿಸಿಕೊಂಡಿದ್ದಾರೆ.ಗಾಜಿಪುರ ಸೇರಿದಂತೆ ಪಾವಲಿ, ಕಲ್ರಾ, ಮನೋಜಿಯಾ ವಾಸ್, ರಾಜಿಕವಾಸ್, ದತ್ಲಾವಾಸ್, ರಾಜ್‌ಪುರ ಸೇರಿದಂತೆ ಒಟ್ಟು 15 ಗ್ರಾಮಗಳಲ್ಲಿ ಈ ‘ಕಪ್ಪು ಕಾನೂನು’ ಜಾರಿಗೆ ಬರಲಿದೆ.

    ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. “ಇದು ಮಹಿಳಾ ಸಬಲೀಕರಣವೋ ಅಥವಾ ಮಹಿಳಾ ದಮನವೋ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಮಕ್ಕಳ ಕಣ್ಣಿನ ಆರೋಗ್ಯ ನೆಪವೊಡ್ಡಿ ಮಹಿಳೆಯರ ಸಂವಹನ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

    KARTET-2025 ರಿಸಲ್ಟ್ ಪ್ರಕಟ: 97 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪಾಸ್! ಇಲ್ಲಿದೆ ಸಂಪೂರ್ಣ ವಿವರ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search