ಬೆಂಗಳೂರು: ದೀರ್ಘಕಾಲದಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು 2026ರ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರಿಗೆ ನಿಗಮಗಳ ನಡುವಿನ ಅಂತರ ನಿಗಮ ವರ್ಗಾವಣೆ (Inter-Corporation Transfer) ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಜನವರಿ 1 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ವರ್ಗಾವಣೆ ಪ್ರಕ್ರಿಯೆಯ ಕಂಪ್ಲೀಟ್ ಡೀಟೇಲ್ಸ್:
ಅರ್ಜಿ ಸಲ್ಲಿಕೆ ಆರಂಭ: ಜನವರಿ 01, 2026 (ಬೆಳಿಗ್ಗೆ 11:00 ಗಂಟೆಯಿಂದ)
ಕೊನೆಯ ದಿನಾಂಕ: ಜನವರಿ 31, 2026 (ಸಂಜೆ 5:30 ರವರೆಗೆ)
ಯಾರಿಗೆ ಅವಕಾಶ?: ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮಗಳ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4 ನೌಕರರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಲಿಂಕ್: http://www.ksrtc.org/transfer
ಈ ಮೊದಲು ನೌಕರರು ತಾವು ಕೆಲಸ ಮಾಡುವ ನಿಗಮಕ್ಕೆ ಮಾತ್ರ ಸೀಮಿತವಾಗಿದ್ದರು. ಈಗ ಬಿಎಂಟಿಸಿಯಿಂದ ಕೆಎಸ್‌ಆರ್‌ಟಿಸಿಗೆ ಅಥವಾ ಉತ್ತರ ಕರ್ನಾಟಕದ ನಿಗಮಗಳಿಗೆ ಹೋಗಲು ಇದ್ದ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿವೆ.
ಸಾಮಾನ್ಯ ವರ್ಗಾವಣೆ (ಪತಿ-ಪತ್ನಿ ಪ್ರಕರಣ, ಅಂಗವಿಕಲತೆ, ತೀವ್ರ ಅನಾರೋಗ್ಯ) ಮತ್ತು ಪರಸ್ಪರ ವರ್ಗಾವಣೆ (Mutual Transfer) ಎರಡಕ್ಕೂ ಆನ್‌ಲೈನ್ ಮೂಲಕವೇ ಅವಕಾಶ ಕಲ್ಪಿಸಲಾಗಿದೆ.ಜೇಷ್ಠತೆ (Seniority) ಜೊತೆಗೆ ವಿಶೇಷ ಆರೋಗ್ಯ ಸಮಸ್ಯೆ ಇರುವವರು ಅಥವಾ ಪತಿ-ಪತ್ನಿ ಪ್ರಕರಣಗಳಿಗೆ ವಿಶೇಷ ಆದ್ಯತೆ ಸಿಗಲಿದೆ.
ಕೇವಲ ದಿನಕ್ಕೆ ₹333 ಉಳಿಸಿ: ₹17 ಲಕ್ಷ ನಿಧಿ ನಿಮ್ಮದೇ! ಸುರಕ್ಷಿತ ಪೋಸ್ಟ್ ಆಫೀಸ್‌ನ ಬಂಪರ್ RD ಸ್ಕೀಮ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


