Tuesday, August 4, 2026
spot_img
More
    spot_img
    HomeLatest newsಸರ್ಕಾರಿ ಅಧಿಕಾರಿ, ನೌಕರರ ಸೇವಾ ವಹಿ: ಹೊಸ ಆದೇಶ

    ಸರ್ಕಾರಿ ಅಧಿಕಾರಿ, ನೌಕರರ ಸೇವಾ ವಹಿ: ಹೊಸ ಆದೇಶ

    ಸರ್ಕಾರಿ ಸೇವೆಗೆ ಸೇರ್ಪಡಿಕೊಂಡಿರುವ ಎಲ್ಲಾ ಅಧಿಕಾರಿ/ ನೌಕರರ ಸೇವಾ ವಹಿಯನ್ನು Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸುವ ಬಗ್ಗೆ ಯೋಜನಾ ವ್ಯವಸ್ಥಾಪಕರು, ಹೆಚ್.ಆರ್.ಎಂ.ಎಸ್ -2.0 ಆರ್ಥಿಕ ಇಲಾಖೆ ಆದೇಶವೊಂದನ್ನು ಹೊರಡಿಸಿದ್ದಾರೆ.

    Advertisement

    2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತ ಆದೇಶಿಸಲಾಗಿರುತ್ತದೆ ಹಾಗೂ ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ.

    HRMS-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು HRMS-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR)ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ HRMS-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿತ್ತು.

    HOD ಮಟ್ಟದಲ್ಲಿ ಡಿಡಿಓಗಳು ವರದಿಸಿದ ಸಮಸ್ಯೆಯನ್ನು ವಿನಂತಿಯನ್ನು ತ್ವರಿತವಾಗಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ ಮತ್ತು ಅದರಿಂದ, ESR ಅನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಆದ್ದರಿಂದ, HRMS-1 ರಲ್ಲಿನ ಅಧಿಕಾರಿ/ ನೌಕರರುಗಳ ಡೇಟಾದಲ್ಲಿನ ತಿದ್ದುಪಡಿಗಳು ಅಥವಾ ನವೀಕರಣಗಳಿಗಾಗಿ ಮಾಡಲಾದ ವಿನಂತಿಯನ್ನು ಮೊದಲ ಆದ್ಯತೆಯ ಮೇಲೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

    ಹೆಚ್ಚಿನ ಇಲಾಖೆಗಳು ಈಗಾಗಲೇ HRMS-2ಗೆ ಸೇರ್ಪಡೆಗೊಂಡಿವೆ. HRMS-2 ರಲ್ಲಿ ಒದಗಿಸಬೇಕಾದ ಸೇವೆಗಳಿಗಾಗಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ESRಗೆ ಬದಲಾಗಿ ಪ್ರಸ್ತುತ HRMS-1 ರಿಂದ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ HRMS-1 ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ, ಅಧಿಕಾರಿ/ ನೌಕರರ ಡೇಟಾವನ್ನು HRMS-2ವಿನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ESR ನಲ್ಲಿ ನೌಕರರ ಸೇವಾ ವಿವರಗಳನ್ನು ತುರ್ತಾಗಿ ನವೀಕರಿಸುವುದು ಬಹಳ ಅವಶ್ಯಕ.

    ಮುಖ್ಯ ಕಾರ್ಯದರ್ಶಿಗಳು ಸೂಚಿಸಿದಂತೆ, ಮೂರು ವರ್ಷದೊಳಗೆ ನಿವೃತ್ತರಾಗಲಿರುವ ಅಧಿಕಾರಿ/ ನೌಕರರ ESR ಅನ್ನು ತುರ್ತಾಗಿ ತಯಾರಿಸಬೇಕಾಗಿದೆ. ಏಕೆಂದರ, ಭವಿಷ್ಯದಲ್ಲಿ AG ಪಿಂಚಣಿ ಉದ್ದೇಶಕ್ಕಾಗಿ ESR ನಿಂದಲೇ Form-7 ನಮೂನೆಯನ್ನು ಸ್ವೀಕರಿಸುತ್ತಾರೆ. ಹಾಗೂ Digital ESR ಲಗತ್ತಿಸುವಂತೆ ತಿಳಿಸಿರುತ್ತಾರೆ. ಆದ್ದರಿಂದ, ಇವರುಗಳ ESR ನ್ನು ಪ್ರಥಮ ಆದ್ಯತೆಯಲ್ಲಿ ತಯಾರಿಸುವುದು ಅವಶ್ಯಕವಾಗಿದೆ.

    ಗ್ರೂಪ್ ಎ ಮತ್ತು ಬಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು AG ಮತ್ತು HRMS-1 ವತಿಯಿಂದ ಪಡೆಯಲಾಗುತ್ತದೆ. ಅಧಿಕಾರಿ/ ನೌಕರರ GER ಸಂಖ್ಯೆಯನ್ನು HRMS-1 ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ನಂತರ, ಅವರ ESR ಪೂರ್ಣಗೊಳಿಸಬೇಕು.

    ಗ್ರೂಪ್ ಎ ಮತ್ತು ಬಿ ಪತ್ರಾಂಕಿತ ಅಧಿಕಾರಿಗಳ ಭೌತಿಕ ಸೇವಾ ಪುಸ್ತಕ ನಿಮ್ಮ ಕಛೇರಿಯಲ್ಲಿ ನಿರ್ವಹಿಸದ ಇರುವುದರಿಂದ, ಅದನ್ನು Upload ಮಾಡುವ ಸಂದರ್ಭವಿರುವುದಿಲ್ಲ. ಆದುದರಿಂದ, GER ಸಂಖ್ಯೆ ಹೊಂದಿರುವ ಪತ್ರಾಂಕಿತ ಅಧಿಕಾರಿಗಳ ESR ಪರಿಶೀಲನೆಗಾಗಿ ವಿಷಯ ನಿರ್ವಾಹಕರ login ನಲ್ಲಿ ಲಭ್ಯವಿರುತ್ತದೆ.

    ಮುಂದೆ HRMS-2.0 ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ (April 2026 ರಿಂದ) ESR – LIVE, HRMS system ನಲ್ಲೆ ತಯಾರಾಗುತ್ತದೆ ಹಾಗೂ ಇದರಿಂದ AG ಗೆ ಪಿಂಚಣಿ ಮಾಹಿತಿ, TLE ಹಾಗೂ Gratuity & Pension Form-7 ಇವೆಲ್ಲಕ್ಕಾಗಿ ಮಾಹಿತಿ online ನಲ್ಲಿ ನೀಡಲಾಗುವುದು.

    ಗ್ರೂಪ್ ಸಿ ಯಿಂದ ಬಿ (ಪತ್ರಾಂಕಿತ) ಹುದ್ದೆಗೆ ಪದೋನ್ನತಿ ಪಡೆದ ಅಧಿಕಾರಿ/ ನೌಕರರ, ಗ್ರೂಪ್ ಸಿ ನಲ್ಲಿ ಇರುವಾಗ ನಿರ್ವಹಿಸಿದ ಭೌತಿಕ ಸೇವಾ ಪುಸ್ತಕವನ್ನು Scan ಮಾಡಿ upload ಮಾಡಬಹುದು. ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ಪರಿಶೀಲಿಸಿ, AG ಯಿಂದ ಪಡೆದ ಮಾಹಿತಿಯೊಂದಿಗೆ ತಾಳೆ ಹೊಂದಿಸಿ, ESR ಅನ್ನು ಪೂರ್ಣಗೊಳಿಸಬೇಕು. AG ಯಿಂದ ಬಂದಿರುವ ಅಧಿಕಾರಿ/ ನೌಕರರ ರಜೆ, ವೇತನ ಬಡ್ತಿ, ವೇತನ ಪರಿಷ್ಕರಣೆ ಮತ್ತು ಇತರ ಸೇವಾ ವಿವರಗಳಲ್ಲಿ ಏನಾದರೂ ವ್ಯತ್ಯಾಸವಿದ್ದರೆ, ಅದನ್ನು AG ಕಛೇರಿಯಲ್ಲಿ ಸರಿಪಡಿಸಿಕೊಳ್ಳುವುದು.

    HRMS-2 ರಲ್ಲಿ ಎಲ್ಲಾ ಸೇವೆಗಳನ್ನು ಅಧಿಕಾರಿ/ ನೌಕರರಿಗೆ ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತದೆ ಹಾಗೂ ಆ ವಿವರಗಳನ್ನು ESR (ESR-LIVE) ಗೆ ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ. ಅಧಿಕಾರಿ/ ನೌಕರರ ವಿವರಗಳು AG ಗೆ ಏಕೀಕರಣ ಮೂಲಕ ವರ್ಗಾಯಿಸಲಾಗುತ್ತದೆ ಮತ್ತು AG ಯಿಂದ ಅಧಿಕಾರಿ/ ನೌಕರರ ರಜೆ ಹಕ್ಕು ಮತ್ತು ವೇತನ ಚೀಟಿಅನ್ನು ನೇರವಾಗಿ ಪಡೆಯಲಾಗುವುದು.

    HRMS-2 ರಲ್ಲಿ ಎಲ್ಲಾ ಸೇವೆಗಳನ್ನು ನೌಕರರಿಗೆ online ನಲ್ಲಿ ಒದಗಿಸಲಾಗುತ್ತದೆ. HRMS-2 ಪೂರ್ಣವಾಗಿ ಅನುಷ್ಠಾನವಾದ ನಂತೆ ಅವರ ವಿವರಗಳನ್ನು ESR-LIVE ಮಾಡ್ಯೂಲ್ ನಲ್ಲಿ ಸ್ವಯಂಚಾಲಿತವಾಗಿ ಪಡೆಯಲಾಗುತ್ತದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ESR ತಯಾರಿಸುವ ಅವಶ್ಯಕತೆ ಇರುವುದಿಲ್ಲ.

    ಆದುದರಿಂದ, ಈ ಬಗ್ಗೆ ಸಂಬಂದಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಹೆಚ್ಚಿನ ಗಮನಹರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡಗೊಳ್ಳುವ ಎಲ್ಲಾ ಅಧಿಕಾರಿ/ ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗಿಳಿಸುವಂತ ಹಾಗೂ ಸಿಬ್ಬಂದಿಗಳ ESR ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾದಲ್ಲಿ ಕೂಡಲೇ HRMS ತಂಡವನ್ನು ಸಂರ್ಪಕಿಸಿ ಸರಿಪಡಿಸಿಕೊಂಡು ಸದರಿ ಕಾರ್ಯವನ್ನು ಫೆಬ್ರವರಿ 2026 ರೂಳಗೆ ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading