ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ.
ಪ್ರಸ್ತುತ ಟೂರ್ನಿ ಜರುಗುತ್ತಿದ್ದು ಇಷ್ಟು ವರ್ಷಗಳ ಕಾಲ ಈ ಸಮಯಕ್ಕೆ ಕ್ರಿಕೆಟ್ ಆಡಲು ಭಾರತ ಪ್ರವೇಶಿಸುತ್ತಿದ್ದ ವಾರ್ನರ್ ಈಗ ಸಿನಿಮಾವೊಂದರ ಸಲುವಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ.
ಹೌದು, ತೆಲುಗು ನಟ ನಿತಿನ್ ಹಾಗೂ ಶ್ರೀಲೀಲಾ ನಟನೆಯ ರಾಬಿನ್ಹುಡ್ ಎಂಬ ಚಿತ್ರದಲ್ಲಿ ವಾರ್ನರ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಇತ್ತೀಚೆಗಷ್ಟೆ ನಡೆದ ಚಿತ್ರದ ಪ್ರಿರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಾರ್ನರ್ ಚಿತ್ರದ ನಾಯಕ ಹಾಗೂ ನಾಯಕಿ ಜೊತೆ ಉತ್ತಮವಾಗಿ ಸಂಭಾಷಣೆ ನಡೆಸುತ್ತಾ ಖುಷಿಯಿಂದ ಕಾಣಿಸಿಕೊಂಡರು.
ಎಲ್ಲವೂ ಚೆನ್ನಾಗಿಯೇ ಸಾಗುತ್ತಿರುವಾಗಲೇ ತೆಲುಗು ಚಿತ್ರರಂಗದ ಹಿರಿಯ ಪೋಷಕ ಪಾತ್ರಧಾರಿ ರಾಜೇಂದ್ರ ಪ್ರಸಾದ್ ವಾರ್ನರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಚಿತ್ರತಂಡದವರು ಡೇವಿಡ್ ವಾರ್ನರ್ ಅವರನ್ನು ಹಿಡಿದುತಂದಿದ್ದಾರೆ ಎಂದು ಮಾತನ್ನು ಆರಂಭಿಸಿದ ರಾಜೇಂದ್ರ ಪ್ರಸಾದ್ ಇದ್ದಕ್ಕಿಂದ್ದಂತೆ ಅವರನ್ನು ವ್ಯಂಗ್ಯ ಮಾಡಿದರು. ಈ ವಾರ್ನರ್ ಕ್ರಿಕೆಟ್ ಆಡು ಎಂದರೆ ಶ್ರೀವಲ್ಲಿ ಡಾನ್ಸ್ ಮಾಡುತ್ತಾನೆ ಎಂದು ಕಾಲೆಳೆದರು. ಕಳ್ಳ ವಿಧವೆ ಮಗ ಎಂಬ ಬೈಗುಳವನ್ನು ಆಡುಭಾಷೆಯಲ್ಲಿ ವಾರ್ನರ್ಗೆ ಬಳಸಿ ಈ ವಾರ್ನರ್ ಸಾಮಾನ್ಯದವನಲ್ಲ ಎಂದರು.
ರಾಜೇಂದ್ರ ಪ್ರಸಾದ್ರ ಈ ಅತಿರೇಕದ ವರ್ತನೆಗೆ ಬೇಸತ್ತ ತೆಲುಗು ಸಿನಿ ಪ್ರೇಕ್ಷಕರು ಕಿಡಿಕಾರಿದರು. ಇದರಿಂದ ಎಚ್ಚೆತ್ತ ರಾಜೇಂದ್ರ ಪ್ರಸಾದ್ ವಿಡಿಯೊ ಮಾಡಿ ವಾರ್ನರ್ಗೆ ಕ್ಷಮೆಯಾಚಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


