ನಾಗ್ಪುರ: ಚಲನಚಿತ್ರ ನಟ ಹಾಗೂ ಸಮಾಜಸೇವಕ ಸೋನು ಸೂದ್ ಅವರ ಪತ್ನಿ ಹಾಗೂ ನಾದಿನಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ನಾಗ್ಪುರದ ವಾರ್ಧಾ ರಸ್ತೆಯ ಮೇಲ್ಸೇತುವೆಯಲ್ಲಿ ನಿನ್ನೆ ( ಮಾರ್ಚ್ 24) ರಾತ್ರಿ ಅಪಘಾತ ಸಂಭವಿಸಿದ್ದು, ಸೋನು ಸೂದ್ ಪತ್ನಿ ಹಾಗೂ ನಾದಿನಿ ಇದ್ದ ಕಾರು ಟ್ರಕ್‌ವೊಂದಕ್ಕೆ ಹಿಂದಿನಿಂದ ಗುದ್ದಿದೆ. ಘಟನೆಯಲ್ಲಿ ಸೋನು ಸೂದ್ ಪತ್ನಿ ಸೋನಾಲಿ ಸೂದ್ ಹಾಗೂ ನಾದಿನಿ ಸುಮಿತಾ ಗಾಯಗೊಂಡಿದ್ದು ಅವರನ್ನು ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ನಾಗ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈ ಇಬ್ಬರನ್ನು ಸೋನಾಲಿ ಸೂದ್ ಅವರ ಕುಟುಂಬ ಸದಸ್ಯರೊಬ್ಬರು ಕಾರಿನಲ್ಲಿ ಪಿಕ್ ಮಾಡಿಕೊಂಡು ಮನೆಗೆ ಬರುವಾಗ ಈ ಘಟನೆ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದವರಿಗೆ ಪ್ರಥಮ ಚಿಕಿತ್ಸೆ ನೀಡಿ ಡಿಸ್ಚಾರ್ಜಾ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


