ಮುಖ್ಯಮಂತ್ರಿ ಸಿದ್ದರಾಯಮಯ್ಯನವರ ಕ್ಯಾಬಿನೆಟ್ ಸಚಿವ ಬೈರತಿ ಸುರೇಶ್ ಅವರ ಫೇಸ್ಬುಕ್ ಖಾತೆಯಿಂದ ನಿನ್ನೆ ಹಲವು ಬಳಕೆದಾರರಿಗೆ ಕೆಟ್ಟ ಕಾಮೆಂಟ್ಗಳು ಹರಿದುಬಂದವು.
ಹೌದು, ಬೈರತಿ ಸುರೇಶ್ ಅವರ ಫೇಸ್ಬುಕ್ ಖಾತೆಯ ವಿವಿಧ ಪೋಸ್ಟ್ಗೆ ಬಂದಿದ್ದ ನೆಗೆಟಿವ್ ಕಾಮೆಂಟ್ಗಳಿಗೆ ಅವರದ್ದೇ ಖಾತೆಯಿಂದ ರಿಪ್ಲೈಗಳು ಬಂದಿದ್ದು, ಎಲ್ಲ ಕಾಮೆಂಟ್ನಲ್ಲೂ ಕೆಟ್ಟ ಪದಗಳ ಬಳಕೆಯಾಗಿದೆ.
ಹೀಗೆ ಕೆಟ್ಟ ಕಾಮೆಂಟ್ ಬಳಕೆಯಾಗುತ್ತಿದ್ದಂತೆ ಬಳಕೆದಾರರೂ ಸಹ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸ್ಕ್ರೀನ್ಶಾಟ್ಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನೆಟ್ಟಿಗರು ಬೈರತಿ ಸುರೇಶ್ ವಿರುದ್ಧ ಕಿಡಿಕಾರಿದರು.
ಇಂದು ಬೆಳಗ್ಗೆ ಈ ಘಟನೆಯ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡ ಬೈರತಿ ಸುರೇಶ್ ತಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ಪೋಸ್ಟ್ ಹಾಕಿ ಯಾವುದೇ ಮೆಸೇಜ್ ಬಂದರೂ ಅನ್ಯತಾ ಭಾವಿಸಬೇಡಿ ಎಂದು ಬರೆದುಕೊಂಡಿದ್ದರು.
ಇದೀಗ ಈ ಕುರಿತು ಪೊಲೀಸ್ ದೂರನ್ನೂ ಸಹ ನೀಡಲಾಗಿದೆ. ಬೈರತಿ ಸುರೇಶ್ ಫೇಸ್ಬುಕ್ ಪೇಜ್ ನಿರ್ವಹಣೆ ಮಾಡುತ್ತಿದ್ದ ಮಾರುತಿ ಎಂಬುವವರು ಹ್ಯಾಕ್ ಆಗಿರುವ ಆರೋಪ ಮಾಡಿ ಆರೋಪಿಯನ್ನು ಪತ್ತೆ ಹಚ್ಚುವಂತೆ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಚಿನ್ ಶಿಂಧೆ ಹಾಗೂ ತಾನು ಬೈರತಿ ಸುರೇಶ್ ಅವರ ಫೇಸ್ಬುಕ್ ಪೇಜ್ ನಿರ್ವಹಿಸುತ್ತಿದ್ದು, ಈ ಕಾಮೆಂಟ್ಗಳನ್ನು ತಾವಿಬ್ಬರೂ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


