ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಉಗ್ರರ ದಾಳಿಗೆ 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಬೇಸಿಗೆಯ ಬಿಸಿಲ ನಿಮಿತ್ತ ಕಾಶ್ಮೀರಂತಹ ತಂಪಾದ ಜಾಗದಲ್ಲಿ ಕಾಲ ಕಳೆದು ಬರೋಣ ಎಂದು ನೆಮ್ಮದಿ ಹುಡುಕಿ ಬಂದಿದ್ದವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಪ್ರವಾಸಿಗರು ಇದ್ದ ಜಾಗಕ್ಕೆ ನುಗ್ಗಿದ ನಾಲ್ವರು ಉಗ್ರರು ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ತಮ್ಮ ಕುಟುಂಬದ ವ್ಯಕ್ತಿಗಳನ್ನು ತಮ್ಮ ಕಣ್ಣೆದುರೇ ಕಳೆದುಕೊಂಡ ಪ್ರವಾಸಿಗರು ಗೋಳಾಡಿದ್ದರು. ಈ ಬೀಭತ್ಸ ಕೃತ್ಯದ ನೆನಪು ಇನ್ನೂ ಪದೆಪದೆ ಜನರನ್ನು ಕಾಡುತ್ತಿರುವಾಗಲೇ ಮಹಿಳೆಯರ ಗುಂಪೊಂದು ವಿಡಿಯೊವೊಂದನ್ನು ಮಾಡಿದ್ದು, ಇದರಲ್ಲಿ ಪಹಲ್ಗಾಮ್ ಯಥಾಸ್ಥಿತಿಗೆ ಮರಳಿದೆ ಎಂದು ಮಹಿಳೆಯೊಬ್ಬರು ಮಾಹಿತಿ ನೀಡುತ್ತಿದ್ದಾರೆ.
ಝರಿಯ ಪಕ್ಕದಲ್ಲಿ ನಿಂತ ಮಹಿಳೆ ದಾಳಿ ನಡೆದ ನಂತರದ ದಿನದಲ್ಲೇ ವಿಡಿಯೊ ಮಾಡಿ ಇಲ್ಲಿ ಎಲ್ಲವೂ ಸರಿಯಿದೆ, ಪ್ರವಾಸಿಗರು ಭಯವಿಲ್ಲದೇ ಬಂದು ಹೋಗಬಹುದು ಎಂದು ಹೇಳಿಕೊಂಡಿದ್ದಾರೆ. ಇನ್ನು ಮತ್ತೊಂದು ವಿಡಿಯೊದಲ್ಲಿ ಮಹಿಳೆ ಇಂತಹ ಘಟನೆಗಳು ಇಲ್ಲಿ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಭಯಪಡುವ ಅಗತ್ಯವಿಲ್ಲ ಕಾಶ್ಮೀರ ಪ್ರವಾಸ ಕೈಗೊಳ್ಳಿ ಎಂದು ಮಾತನಾಡಿದ್ದಾರೆ.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶಭಕ್ತರು ಕಿಡಿಕಾರಿದ್ದಾರೆ. 26 ಮಂದಿ ಉಗ್ರರ ದಾಳಿಗೆ ಬಲಿಯಾದದ್ದು ನಿಮಗೆ ಸಣ್ಣ ಘಟನೆ ಅನಿಸುತ್ತಾ ಎಂದು ಮಹಿಳೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


