Sunday, September 20, 2026
spot_img
More
    spot_img
    HomeLatest newsಗೆಳೆಯರು ಪಕ್ಕದಲ್ಲೇ ಇದ್ರೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮುಳುಗಿ 24ರ ಯುವಕ ದುರಂತ ಸಾವು; ಸಿಸಿಟಿವಿಯಲ್ಲಿ ದೃಶ್ಯ...

    ಗೆಳೆಯರು ಪಕ್ಕದಲ್ಲೇ ಇದ್ರೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮುಳುಗಿ 24ರ ಯುವಕ ದುರಂತ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಉತ್ತರಪ್ರದೇಶ: ಕಾನ್‌ಪುರದಲ್ಲಿ ( kanpur ) ದುರಂತ‍ ಘಟನೆಯೊಂದು ನಡೆದಿದ್ದು, ಸ್ವಿಮ್ಮಿಂಗ್‌ ಪೂಲ್‌ನಲ್ಲಿ 24 ವರ್ಷದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿದ್ದಾನೆ.

    Advertisement

    ಗೆಳೆಯರ ಜೊತೆ ಪೂಲ್‌ ಪಾರ್ಟಿಗೆಂದು ಬಂದಿದ್ದ ಯುವಕ ಸ್ನೇಹಿತರ ಜೊತೆ ಸ್ವಿಮ್ಮಿಂಗ್‌ ಪೂಲ್‌ಗೆ ಇಳಿದು ಸಂತಸದಿಂದ ಆಡುತ್ತಿರುವ ವೇಳೆ ನೀರಿಗೆ ಮುಖ ಮಾಡಿ ಒಮ್ಮೆ ಎಗರಿ ಬಿದ್ದಿದ್ದಾನೆ. ಬಳಿಕ ಆತ ಮೇಲೆದ್ದೇ ಇಲ್ಲ. ಸುಮಾರು ಒಂದು ನಿಮಿಷ ಎರಡರಿಂದ ಮೂರು ಬಾರಿ ಕಾಲನ್ನು ಮೇಲೆತ್ತಿ ಮೇಲೆ ಬರುವ ಪ್ರಯತ್ನ ಮಾಡಿದನಾದರೂ ಪ್ರಯೋಜನವಾಗಿಲ್ಲ.

    ಹೀಗೆ ಪ್ರಯತ್ನಪಟ್ಟ ಬಳಿಕ ಯುವಕ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾನೆ. ಇನ್ನು ಆತನ ಸುತ್ತ ಏಳೆಂಟು ಮಂದಿ ಇದ್ದರೂ ಸಹ ಆತ ಮುಳುಗುವುದನ್ನು ಯಾರೂ ಸಹ ಗಮನಿಸದೇ ಇದ್ದು, ಪೊಲೀಸರು ಇದನ್ನು ಅಪಘಾತ ಎಂದು ಪರಿಗಣಿಸಿದ್ದಾರೆ.

    ಮೃತನನ್ನು 24 ವರ್ಷದ ಶಿಖರ್‌ ಸಿಂಗ್‌ ಎಂದು ಗುರುತಿಸಲಾಗಿದ್ದು, ಎರಡು ನಿಮಿಷಗಳ ಬಳಿಕ ಶಿಖರ್‌ನನ್ನು ಪೂಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಪೊಲೀಸರ ಕೈ ಸೇರಬೇಕಿದ್ದು, ಸಿಸಿಟಿವಿ ದೃಶ್ಯದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಿಖರ್‌ ಕಾನ್‌ಪುರದ ಯಶೋಧರಾ ನಗರದಲ್ಲಿ ವಾಸವಿದ್ದು, ಪೋಷಕರಿಗೆ ಓರ್ವನೇ ಪುತ್ರನಾಗಿದ್ದಾನೆ.

    ಕೇವಲ 20 ರನ್‌ ಬಾರಿಸಿದ್ರು ಅದಕ್ಕೆ ಸೋತೆವು; ಇಂಗ್ಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಗಿಲ್‌

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading