Friday, November 13, 2026
spot_img
More
    spot_img
    HomeSportsCricketಭಾರತ vs ಇಂಗ್ಲೆಂಡ್‌ ಪ್ರಥಮ ಟೆಸ್ಟ್:‌ ಆಂಗ್ಲರ ವಿರುದ್ಧ ಹೀನಾಯ ಸೋಲುಂಡ ಭಾರತ

    ಭಾರತ vs ಇಂಗ್ಲೆಂಡ್‌ ಪ್ರಥಮ ಟೆಸ್ಟ್:‌ ಆಂಗ್ಲರ ವಿರುದ್ಧ ಹೀನಾಯ ಸೋಲುಂಡ ಭಾರತ

    ಲೀಡ್ಸ್:‌ ಹೆಡಿಂಗ್ಲೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ( india vs england ) ತಂಡಗಳ ನಡುವೆ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 5 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.

    ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಇಂಗ್ಲೆಂಡ್‌ 465 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆ ಸಾಧಿಸಿತ್ತು.

    ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್‌ ರಾಹುಲ್‌ ಹಾಗೂ ರಿಷಭ್‌ ಪಂತ್‌ ಶತಕಗಳ ನೆರವಿನಿಂದ ಭಾರತ 364 ರನ್‌ ಗಳಿಸಿ ಆಲ್‌ಔಟ್ ಆಗಿ ಇಂಗ್ಲೆಂಡ್‌ಗೆ 371 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಡಕೆಟ್‌ ಅಬ್ಬರದ ಶತಕದ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 373 ರನ್ ದಾಖಲಿಸಿದೆ.

    ಭಾರತದ ಮೊದಲ ಇನ್ನಿಂಗ್ಸ್: ಭಾರತದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಕಣಕ್ಕಿಳಿದರು. ಕೆಎಲ್‌ ರಾಹುಲ್‌ 42 ರನ್‌ ಗಳಿಸಿದರೆ, ಯಶಸ್ವಿ ಜೈಸ್ವಾಲ್‌ 101 ರನ್‌ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್‌ ಡಕ್‌ಔಟ್‌ ಆದರೆ, ಶುಭ್‌ಮನ್‌ ಗಿಲ್‌ 147, ರಿಷಭ್‌ ಪಂತ್‌ 134 ರನ್‌ ಬಾರಿಸಿ ಅಬ್ಬರಿಸಿದರು. ಗಿಲ್‌ ಹಾಗೂ ಪಂತ್‌ ಬಳಿಕ ಕಣಕ್ಕಿಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದ ಪರಿಣಾಮ ಉತ್ತಮ ಆರಂಭ ಪಡೆದುಕೊಂಡಿದ್ದ ಭಾರತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಫಲತೆಯಿಂದ ಇನ್ನೂ ದೊಡ್ಡ ಇನ್ನಿಂಗ್ಸ್‌ ಕಟ್ಟಬಹುದಾದ ಅವಕಾಶ ಕಳೆದುಕೊಂಡಿತು.

    430 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ಭಾರತ 471 ರನ್‌ಗೆ ಆಲ್‌ಔಟ್‌ ಆಯಿತು. ಗಿಲ್‌ ಔಟ್‌ ಆದ ಬಳಿಕ ಕಣಕ್ಕಿಳಿದ ಕರುಣ್‌ ನಾಯರ್‌ ಡಕ್‌ಔಟ್‌ ಆದರೆ, ರವೀಂದ್ರ ಜಡೇಜಾ 11 ರನ್‌, ಶಾರ್ದೂಲ್‌ ಠಾಕೂರ್‌ 1, ಜಸ್‌ಪ್ರೀತ್‌ ಬುಮ್ರಾ ಡಕ್‌ಔಟ್‌, ಪ್ರಸಿದ್ಧ್‌ ಕೃಷ್ಣ 1 ಹಾಗೂ ಮೊಹಮ್ಮದ್‌ ಸಿರಾಜ್‌ ಅಜೇಯ 3 ರನ್‌ ಗಳಿಸಿದರು.

    ಇಂಗ್ಲೆಂಡ್‌ ಪರ ಕ್ರಿಸ್‌ ವೋಕ್ಸ್‌ 4 ವಿಕೆಟ್‌, ಬ್ರೈಡನ್‌ ಕಾರ್ಸ್‌ 3 ವಿಕೆಟ್‌, ಜೋಶ್‌ ಟಂಗ್‌ ಹಾಗೂ ಬೆನ್‌ ಸ್ಟೋಕ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಕ್‌ ಕ್ರಾವ್ಲಿ 4, ಬೆನ್‌ ಡಕೆಟ್‌ 62 ರನ್‌ ಗಳಿಸಿದರು. ಇನ್ನುಳಿದಂತೆ ಓಲ್ಲಿ ಪೋಪ್‌ 106 ರನ್‌, ಜೋ ರೂಟ್‌ 28, ಹ್ಯಾರಿ ಬ್ರೂಕ್‌ 99, ಬೆನ್‌ ಸ್ಟೋಕ್ಸ್‌ 20, ಜೇಮಿ ಸ್ಮಿತ್‌ 40, ಕ್ರಿಸ್‌ ವೋಕ್ಸ್‌ 38, ಬ್ರೈಡನ್‌ ಕಾರ್ಸ್‌ 22, ಜೋಶ್‌ ಟಂಗ್‌ 11 ಹಾಗೂ ಶೋಯೆಬ್‌ ಬಷೀರ್‌ ಅಜೇಯ 1 ರನ್‌ ಕಲೆಹಾಕಿದರು.

    ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 5 ವಿಕೆಟ್, ಪ್ರಸಿದ್ಧ್‌ ಕೃಷ್ಣ 3 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಪಡೆದರು.

    ಭಾರತ ಎರಡನೇ ಇನ್ನಿಂಗ್ಸ್: ಯಶಸ್ವಿ ಜೈಸ್ವಾಲ್‌ 4, ಕೆಎಲ್‌ ರಾಹುಲ್‌ 137, ಸಾಯಿ ಸುದರ್ಶನ್‌ 30, ಶುಭ್‌ಮನ್‌ ಗಿಲ್‌ 8, ರಿಷಭ್‌ ಪಂತ್‌ 118, ಕರುಣ್‌ ನಾಯರ್‌ 20, ಶಾರ್ದೂಲ್‌ ಠಾಕೂರ್‌ 4, ಮೊಹಮ್ಮದ್‌ ಸಿರಾಜ್‌ ಡಕ್‌ಔಟ್‌, ಜಸ್‌ಪ್ರೀತ್‌ ಬುಮ್ರಾ ಡಕ್‌ಔಟ್‌, ಪ್ರಸಿದ್ಧ್‌ ಕೃಷ್ಣ ಡಕ್‌ಔಟ್‌ ಹಾಗೂ ರವೀಂದ್ರ ಜಡೇಜಾ ಅಜೇಯ 25 ರನ್‌ ಬಾರಿಸಿದರು.

    ಇಂಗ್ಲೆಂಡ್‌ ಪರ ಬ್ರೈಡನ್‌ ಕಾರ್ಸ್‌ ಹಾಗೂ ಟಂಗ್‌ ತಲಾ 3 ವಿಕೆಟ್‌, ಶೋಯೆಬ್‌ ಬಷೀರ್‌ ಎರಡು ವಿಕೆಟ್‌, ಕ್ರಿಸ್‌ ವೋಕ್ಸ್‌ ಹಾಗೂ ಬೆನ್‌ ಸ್ಟೋಕ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇಂಗ್ಲೆಂಡ್ಸ್‌ ಎರಡನೇ ಇನ್ನಿಂಗ್ಸ್:‌ ಜಾಕ್‌ ಕ್ರಾವ್ಲೆ 65, ಬೆನ್‌ ಡಕೆಟ್‌ 149, ಓಲ್ಲಿ ಪೋಪ್‌ 8, ಹ್ಯಾರಿ ಬ್ರೂಕ್‌ ಡಕ್‌ಔಟ್‌, ಬೆನ್‌ ಸ್ಟೋಕ್ಸ್‌ 33, ಜೇಮಿ ಸ್ಮಿತ್‌ ಅಜೇಯ 44 ರನ್‌ ಹಾಗೂ ಜೋ ರೂಟ್‌ ಅಜೇಯ 53 ರನ್‌ ಗಳಿಸಿದರು.

    ಭಾರತದ ಪರ ಶಾರ್ದೂಲ್‌ ಠಾಕೂರ್‌ 2 ವಿಕೆಟ್‌, ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌ ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್‌ ಪಡೆದರು.

    ಕಾಲಲ್ಲಿ ಇರುವುದನ್ನು ಯಾವಾಗ ಬಿಚ್ಚಿ ಹೊಡಿತಾರೋ ಗೊತ್ತಿಲ್ಲ; ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ವಿವಾದಾತ್ಮಕ ಹೇಳಿಕೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search