ಭಾರತ ಸರ್ಕಾರದ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿ, ತಾತ್ಕಾಲಿಕ ಆಧಾರದ ಮೇಲೆ ಖಾಲಿ ಇರುವ ತಾಂತ್ರಿಕ ಇಂಟರ್ನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿ ದೇಶದ ಆರು ವಲಯಗಳಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನವದೆಹಲಿ ಮತ್ತು ಈಶಾನ್ಯ ವಲಯಗಳಲ್ಲಿ ಖಾಲಿ ಇರುವ ಒಟ್ಟು 421 ತಾಂತ್ರಿಕ ಇಂಟರ್ನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜುಲೈ 1 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಪ್ರಸಾರ ಭಾರತಿ ಇರುವ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಲ್ಲಿ ಪೂರ್ಣಕಾಲಿಕ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು https://avedan.prasarbharati.org/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರಗಳು:
ದಕ್ಷಿಣ ವಲಯದಲ್ಲಿ ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳ ಸಂಖ್ಯೆ: 63
ಪೂರ್ವ ವಲಯದಲ್ಲಿ ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳ ಸಂಖ್ಯೆ: 65
ಪಶ್ಚಿಮ ವಲಯದಲ್ಲಿ ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳ ಸಂಖ್ಯೆ: 66
ಈಶಾನ್ಯ ವಲಯದಲ್ಲಿ ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳ ಸಂಖ್ಯೆ: 126
ನವದೆಹಲಿಯಲ್ಲಿ ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳ ಸಂಖ್ಯೆ: 101
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ಎಲೆಕ್ಟ್ರಿಕಲ್, ಸಿವಿಲ್, ಐಟಿ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಕನಿಷ್ಠ ಶೇ. 65 ರಷ್ಟು ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು
ವಯಸ್ಸಿನ ಮಿತಿ;2024-25 ರ ಫ್ರೆಶರ್ಸ್ ಪದವೀಧರರು ಸಹ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸಿನ ಮಿತಿ 30 ವರ್ಷ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 16-06-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 01-07-2025
ಅರ್ಜಿ ಶುಲ್ಕ:ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಸ್ಟೈಫಂಡ್
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000ರೂ. ಸ್ಟೈಫಂಡ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಪ್ರಸಾರ ಭಾರತಿ ಸಂಸ್ಥೆಯಲ್ಲಿ ಸೀನಿಯರ್ ಕರೆಸ್ಪಾಂಡೆಂಟ್ ಮತ್ತು ಸ್ಟ್ರಿಂಗರ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹಂತಗಳು ಹೀಗಿವೆ:
ಅರ್ಜಿಗಳ ಪರಿಶೀಲನೆ: ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಸಂದರ್ಶನ: ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಇತರ ಹಂತಗಳು: ಸಂಸ್ಥೆಯ ಅವಶ್ಯಕತೆಗಳ ಪ್ರಕಾರ ಹೆಚ್ಚುವರಿ ಮೌಲ್ಯಮಾಪನ ಅಥವಾ ಪರೀಕ್ಷೆ ನಡೆಯಬಹುದು.
ಹಿರಿಯ ವರದಿಗಾರರ (Senior Correspondent) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 80,000 ರಿಂದ ರೂ. 1,25,000 ವರೆಗೆ ವೇತನ ನೀಡಲಾಗುತ್ತದೆ. ಸ್ಟ್ರಿಂಗರ್ ಹುದ್ದೆಗೆ ಆಯ್ಕೆಯಾದವರಿಗೆ ಅವರ ವರದಿ/ಕವರೆಜ್ ಆಧಾರದ ಮೇಲೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಪ್ರಸಾರ ಭಾರತಿ ಅಧಿಕೃತ ವೆಬ್‌ಸೈಟ್ (https://prasarbharati.gov.in/ ಅಥವಾ https://avedan.prasarbharati.org/) ಗೆ ಭೇಟಿ ನೀಡಿ.
ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆ ಪರಿಶೀಲಿಸಿ.
ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ಚೀಟಿ ಇತ್ಯಾದಿ) ಅಪ್ಲೋಡ್ ಮಾಡಿ.
ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಂತರ ಅರ್ಜಿ ನಮೂನೆಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಿದ ನಂತರ ಆಧಾರಿತ ಪಾವತಿ ಇದ್ದರೆ ಪಾವತಿ ಮಾಡಿ ಮತ್ತು ಅರ್ಜಿ ಪ್ರತಿಯನ್ನು ಭದ್ರಪಡಿಸಿಕೊಳ್ಳಿ.
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಸ್‌ಬಿಐನಲ್ಲಿವೆ 2964 ಹುದ್ದೆಗಳು; ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


