Saturday, November 14, 2026
spot_img
More
    spot_img
    HomeLatest newsಸಾಂಪ್ರದಾಯಿಕ ಶೈಲಿಯಲ್ಲಿ ಮಾವಿನಹಣ್ಣಿನ ರಸಗುಲ್ಲಾ: ಈ ಸೀಸನ್‌ನಲ್ಲಿ ಒಮ್ಮೆ ತಪ್ಪದೇ ಮಾಡಿ

    ಸಾಂಪ್ರದಾಯಿಕ ಶೈಲಿಯಲ್ಲಿ ಮಾವಿನಹಣ್ಣಿನ ರಸಗುಲ್ಲಾ: ಈ ಸೀಸನ್‌ನಲ್ಲಿ ಒಮ್ಮೆ ತಪ್ಪದೇ ಮಾಡಿ

    ಮಾವಿನ ಹಣ್ಣಿನ ಸೀಸನ್ ಮುಗಿಯುವ ಮುನ್ನ, ಈ ವಿಶಿಷ್ಟ ಮಾವಿನಹಣ್ಣಿನ ರಸಗುಲ್ಲಾ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ! ಈ ಸಿಹಿ ತಿನಿಸು ತಯಾರಿಸುವುದು ನೀವು ಅಂದುಕೊಳ್ಳುವಷ್ಟು ಕಷ್ಟಕರವಲ್ಲ – ನಿಜಕ್ಕೂ ತುಂಬಾ ಸರಳ.ಹಲವರಿಗೆ ಸಿಹಿ ಅಂದ್ರೆ ಪಂಚಪ್ರಾಣ. ಊಟದ ನಂತರ ಒಂದಾದರೂ ಸಿಹಿ ತಿನಿಸು ತಿನ್ನದೇ ದಿನ ಪೂರವಡೆದವರೇನಿರಲಿಲ್ಲ! ಈಗ ಮಾವಿನ ಹಣ್ಣಿನ ಸೀಸನ್‌ ಇರುವಾಗ, ಅದರ ಸವಿಯನ್ನು ಬಳಸಿಕೊಂಡು ವಿವಿಧ ಖಾದ್ಯಗಳನ್ನು ತಯಾರಿಸುವುದು ಸೂಕ್ತ ಸಮಯ. ಬೇಸಿಗೆಯಲ್ಲಿ ಸಿಗುವ ಈ ರುಚಿಕರ ಹಣ್ಣುಗಳಿಂದ ಹಲವು ತಿನಿಸುಗಳನ್ನು ಮಾಡಬಹುದು. ಅವುಗಳಲ್ಲಿ ಮಾವಿನಹಣ್ಣಿನ ರಸಗುಲ್ಲಾ ಒಂದು ವಿಶಿಷ್ಟ ಮತ್ತು ರುಚಿಕರ ಆಯ್ಕೆ.ಬಹುತೇಕ ಜನರಿಗೆ ರಸಗುಲ್ಲಾ ಎಂದರೆ ಬಾಯಲ್ಲಿ ನೀರೂರಿಸುವ ನೆಚ್ಚಿನ ಇವತ್ತಿನ ವಿಶೇಷ ರೆಸಿಪಿ ಮ್ಯಾಂಗೋ ರಸಗುಲ್ಲಾ. ಬೇಸಿಗೆಯಲ್ಲಿ ಸಿಗುವ ಹಸಿರು ಮಾವಿನ ಹಣ್ಣಿನ ರುಚಿಯನ್ನು ಸಿಹಿ ರಸಗುಲ್ಲಾದಲ್ಲಿ ಸವಿಯಿರಿ. ನೀವು ಕೂಡ ನಿಮ್ಮ ಮನೆಯಲ್ಲಿ ಈ ಸುಲಭ ಸಿಹಿಯನ್ನು ತಯಾರಿಸಿ, ಕುಟುಂಬದೊಂದಿಗೆ ಆನಂದಿಸಿ.

    ಬೇಕಾಗುವ ಪದಾರ್ಥಗಳು:

    ಮಾವಿನ ಹಣ್ಣು – ಮೂರು

    ಹಾಲು – ಒಂದು ಲೀಟರ್

    ಸಕ್ಕರೆ – ಒಂದು ಕಪ್

    ನಿಂಬೆ ರಸ – 1 ಚಮಚ

    ಕೆನೆ ತೆಗೆದ ಹಾಲು – 1 ಕಪ್

    ಏಲಕ್ಕಿ ಪುಡಿ- ಅರ್ಧ ಚಮಚ

    ಗೋಡಂಬಿ- 1 ಹಿಡಿ

    ಮಾವಿನ ಹಣ್ಣಿನ ರಸಗುಲ್ಲಾ ತಯಾರಿಸುವ ವಿಧಾನ

    ಮೊದಲಿಗೆ ಮಾವಿನ ಹಣ್ಣನ್ನು ತೆಗೆದುಕೊಂಡು ಪ್ಯೂರಿ ಮಾಡಿ.ಪ್ಯೂರಿಗೆ ಅರ್ಧ ಲೀಟರ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಉಂಡೆಗಳಾಗದಂತೆ ಚೆನ್ನಾಗಿ ಕಲಕಿ.

    ನಂತರ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಈ ವೇಳೆ ಹಾಲು ಒಡೆಯಲು ಪ್ರಾರಂಭಿಸುತ್ತದೆ.ಹಾಲು ಒಡೆಯುತ್ತಿದ್ದಾಗ ಅದಕ್ಕೆ 7 ರಿಂದ 8 ಹನಿ ನಿಂಬೆ ರಸವನ್ನು ಸೇರಿಸಿ. ಹಾಲು ಒಡೆದು ಹೋಗುತ್ತದೆ. ಇದನ್ನು ಸೋಸಿಕೊಂಡು ಪಕ್ಕಕ್ಕೆ ಇರಿಸಿ. ಮಿಶ್ರಣದಲ್ಲಿ ನೀರುಳಿಸದೆ ಚೆನ್ನಾಗಿ ಹಿಸುಕಿ.

    ಈ ಮಿಶ್ರಣವು ಮೃದುವಾಗುವವರೆಗೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇಡಿ.ಸಿರಪ್ ತಯಾರಿಸಲು, ಕಡಾಯಿಯನ್ನು ಒಲೆಯ ಮೇಲೆ ಇಟ್ಟು, ಸಕ್ಕರೆ ಮತ್ತು ನೀರು ಸೇರಿಸಿ ಚೆನ್ನಾಗಿ ಕುದಿಸಿ. ಸಕ್ಕರೆ ಸಂಪೂರ್ಣ ಕರಗಬೇಕು. ಸ್ವಲ್ಪ ಸಕ್ಕರೆ ಪಾಕ ಆಗುವವರೆಗೆ ಕಾಯಿರಿ.

    ಈಗಾಗಲೇ ತಯಾರಿಸಿದ ಉಂಡೆಗಳನ್ನು ಸಿರಪಿನಲ್ಲಿ ಹಾಕಿ ಮುಚ್ಚಳ ಮುಚ್ಚಿ 15-20 ನಿಮಿಷಗಳ ಕಾಲ ಕುದಿಸಿ.ಬೇರೆ ಪಾತ್ರೆಯಲ್ಲಿ ಹಾಲನ್ನು ಸಣ್ಣ ಉರಿಯಲ್ಲಿ ಕುದಿಸಿ, ಸಕ್ಕರೆ ಸೇರಿಸಿ ಕರಗಿಸಿ. ನಂತರ ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ.

    ಕೊನೆಗೆ ಹಾಲಿನ ಮಿಶ್ರಣಕ್ಕೆ ಮಾವಿನ ಪ್ಯೂರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಕ್ಕರೆ ಪಾಕಕ್ಕೆ ಸೇರಿಸಿ ಮಿಶ್ರಣ ಮಾಡಿ.ತಣ್ಣಗಾದ ನಂತರ ರಸಗುಲ್ಲಾವನ್ನು ಫ್ರಿಜ್‌ನಲ್ಲಿ ಇಡಿ.

    ನುಣ್ಣಗೆ ಕತ್ತರಿಸಿದ ಗೋಡಂಬಿ (ಅಥವಾ ಬಾದಾಮಿ) ತುಂಡುಗಳಿಂದ ಅಲಂಕರಿಸಿದರೆ, ರುಚಿಕರವಾದ ಮಾವಿನ ರಸಗುಲ್ಲಾ ಸಿದ್ಧ.ಈ ವಿಧಾನ ಅನುಸರಿಸಿ ಮನೆಯಲ್ಲೇ ಸುಲಭವಾಗಿ ಮಾವಿನ ಹಣ್ಣಿನ ರಸಗುಲ್ಲಾ ತಯಾರಿಸಿ, ಸಿಹಿ ಸವಿಯಿರಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    Weight Loss: ಜೋಳದ ಇಡ್ಲಿ ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಉತ್ತಮ ಆಯ್ಕೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search